Chinese Media Praise India : ಭಾರತ ಮತ್ತು ಚೀನಾದ ನಾಗರಿಕರು ಎಲ್ಲಕ್ಕಿಂತ ಹೆಚ್ಚು ಸುಖವಾಗಿ ಜೀವನ ನಡೆಸುತ್ತಾರೆ

ಚೀನಾ ಸರಕಾರದ ಪ್ರಮುಖ ಪತ್ರಿಕೆಯಾಗಿರುವ ಗ್ಲೋಬಲ್ ಟೈಮ್ಸ್ ನ ವರದಿ !

ಬೀಜಿಂಗ್ (ಚೀನಾ) – ಚೀನಾ ಸರಕಾರದ ಪ್ರಮುಖ ಪತ್ರಿಕೆಯಾಗಿರುವ ಗ್ಲೋಬಲ್ ಟೈಮ್ಸ್ ಒಂದು ವರದಿಯನ್ನು ಪ್ರಕಟಿಸಿದೆ. ಇದರಲ್ಲಿ ಆನಂದಿ ದೇಶಗಳ ಸೂಚಿಯನ್ನು ಪ್ರಕಟಿಸಲಾಗಿದೆ. `ಜಿ ೭’ (ಕೆನಡಾ, ಅಮೇರಿಕಾ, ಫ್ರಾನ್ಸ್, ಬ್ರಿಟನ್, ಜರ್ಮನಿ, ಇಟಲಿ ಹಾಗೂ ಜಪಾನ) ದೇಶಗಳಿಗಿಂತಲೂ ಚೀನಾ ಹಾಗೂ ಭಾರತದ ನಾಗರೀಕರು ಹೆಚ್ಚು ಆನಂದದಲ್ಲಿ ಜೀವನ ನಡೆಸುತ್ತಾರೆ ಎಂದು ಹೇಳಲಾಗಿದೆ. ಈ ವರದಿಯ ಅನುಸಾರ ಚೀನಾದಲ್ಲಿನ ಶೇ. ೯೧ರಷ್ಟು ಜನರು ತಾವು ಆನಂದಮಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೆ ಶೇ. ೮೪ರಷ್ಟು ಭಾರತೀಯರು ತಮ್ಮ ಜೀವನಶೈಲಿಯಿಂದ ಸಮಾಧಾನ ದೊರೆಯುತ್ತಿರುವುದಾಗಿ, ಹಾಗೆಯೆ ಆನಂದಿ ಜೀವನವನ್ನು ನೆಡೆಸುತ್ತಿರುವುದಾಗಿ ಹೇಳಿದ್ದಾರೆ. ಅನಂತರ ಅಮೇರಿಕಾ, ಬ್ರಿಟನ್ ಹಾಗೂ ಕೆನಡಾದ ನಾಗರೀಕರ ಕ್ರಮಾಂಕ ಬರುತ್ತದೆ. ಈ ವರದಿಯ ಅನುಸಾರ ಆನಂದಿ ಜೀವನದ ಜಾಗತಿಕ ಸರಸರಿಯು ಶೇ. ೭೩ರಷ್ಟಿದೆ. ಚೀನಾ (ಶೇ. ೯೧ ರಷ್ಟು) ಹಾಗೂ ಭಾರತವು (ಶೇ. ೮೪ರಷ್ಟು) ಸರಾಸರಿಗಿಂತಲೂ ಬಹಳ ಮುಂದಿದೆ. ಅನಂತರ ಅಮೇರಿಕಾದ ಶೇ. ೭೬ರಷ್ಟು ನಾಗರೀಕರು ತಮ್ಮ ಜೀವನಶೈಲಿಯ ಬಗ್ಗೆ ಆನಂದ ವ್ಯಕ್ತಪಡಿಸಿದ್ದಾರೆ. ಅನಂತರ ಫ್ರಾನ್ಸ್ ಹಾಗೂ ಕೆನಾಡಾಗಳಿವೆ. ಎರಡೂ ದೇಶಗಳ ಶೇ. ೭೪ರಷ್ಟು ಜನರು ತಮ್ಮ ಜೀವನದ ಬಗ್ಗೆ ಆನಂದ ವ್ಯಕ್ತಪಡಿಸಿದ್ದಾರೆ. ಅನಂತರ ಬ್ರಿಟನ್ ಶೇ. ೭೦, ಇಟಲಿ ಶೇ. ೬೮, ಜರ್ಮನಿ ಶೇ. ೬೭ ಹಾಗೂ ಜಪಾನವು ಶೇ.೬೦ ಇದೆ.

೨೨ ಸಾವಿರ ಜನರೊಂದಿಗೆ ನಡೆದ ಸಂಭಾಷಣೆಯಿಂದ ತಯಾರಾಗಿದೆ ಈ ವರದಿ.

ಗ್ಲೋಬಲ್ ಟೈಮ್ಸ್ ಆನಂದದ ವಿಷಯದಲ್ಲಿನ ಈ ವರದಿಯು ೨೨ ಸಾವಿರದ ೫೦೮ ಜನರೊಂದಿಗೆ ನಡೆಸಲಾದ ಸಂಭಾಷಣೆಯ ಮೇಲೆ ಆಧರಿಸಿದೆ. ಈ ನಿಯತಕಾಲಿಕೆಯು ೩೨ ದೇಶಗಳಲ್ಲಿನ ೧೮ ರಿಂದ ೭೫ ವರ್ಷ ಮಯೋಮಾನದ ೨೨ ಸಾವಿರದ ೫೦೮ ಜನರೊಂದಿಗೆ ಆನ್ಲೈನ್ ಭೇಟಿ ನಡೆಸಿತು. ಈ ಭೇಟಿಯಲ್ಲಿ ಅವರಿಗೆ ಅವರ ಜೀವನಶೈಲಿಯ ಅನುಸಾರ ಎಷ್ಟು ಆನಂದಿಯಾಗಿದ್ದಾರೆ ಎಂದು ಕೇಳಲಾಯಿತು. ಇದರಲ್ಲಿ ಚೀನಾದ ಜನರು ತಮ್ಮ ಜೀವನದಲ್ಲಿ ಅತ್ಯಂತ ಹೆಚ್ಚಿನ ಆನಂದವನ್ನು ವ್ಯಕ್ತಪಡಿಸಿದರು. ಅನಂತರ ಭಾರತೀಯರು ತಮ್ಮ ಜೀವನದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು.

ಸಂಯುಕ್ತ ರಾಷ್ಟ್ರದ ವರದಿಯಲ್ಲಿ ಭಾರತವು ೧೨೬ನೇ ಕ್ರಮಾಂಕದಲ್ಲಿ !

ಈ ವಿಷಯದಲ್ಲಿ ಮಾರ್ಚ್ ನಲ್ಲಿ ಪ್ರಕಟವಾಗಿದ್ದ `ಯುಎನ್ ವರ್ಲ್ಡ್ ಹ್ಯಾಪ್ಪಿನೆಸ್ ರಿಪೋರ್ಟ್’ ನಲ್ಲಿ ಚೀನಾವು ಪ್ರಮುಖ ದೇಶಗಳಲ್ಲಿ ಸೇರಿರಲಿಲ್ಲ. ಜಗತ್ತಿನಲ್ಲಿರುವ ಅತ್ಯಂತ ಆನಂದಿ ದೇಶಗಳ ಈ ಸೂಚಿಯಲ್ಲಿ ಫಿನ್ಲ್ಯಾಂಡ್ ಗೆ ಮೊದಲನೇ ಕ್ರಮಾಂಕ ದೊರೆತಿದೆ. ಫಿನ್ಲ್ಯಾಂಡ್ ನ ನಂತರ ಡೆನ್ಮಾರ್ಕ್ ಸರತಿಯಲ್ಲಿದೆ. ಐಸ್ಲ್ಯಾಂಡ್ ಮೂರನೇ ಕ್ರಮಾಂಕದಲ್ಲಿದ್ದು ಸ್ವೀಡನ್ ನಾಲ್ಕನೇ ಕ್ರಮಾಂಕದಲ್ಲಿದೆ. ಇಸ್ರೇಲ್ ಐದನೇ ಕ್ರಮಾಂಕದಲ್ಲಿದೆ. ೧೩೩ ದೇಶಗಳ ಈ ಸೂಚಿಯಲ್ಲಿ ಭಾರತಕ್ಕೆ ೧೨೬ನೇ ಸ್ಥಾನ ದೊರೆತಿದೆ.

ಸಂಪಾದಕೀಯ ನಿಲುವು

ಭಾರತ ಹಾಗೂ ಚೀನಾದಲ್ಲಿನ ನಾಗರೀಕರು ಅತ್ಯಂತ ಆನಂದಿ ಜೀವನವನ್ನು ನಡೆಸುತ್ತಾರೆ ! ಚೀನಾದ ಈ ಪ್ರಮುಖ ಪತ್ರಿಕೆಯ ಈ ಹೇಳಿಕೆಯಲ್ಲಿ ಭಾರತಕ್ಕೆ ಮೇಲಿನ ಸ್ಥಾನ ದೊರೆತಿರುವುದು ಆಶ್ಚರ್ಯಕರವಾಗಿದೆ. ಇದರಿಂದ ಚೀನಾದ ನೇತಾರರಿಗೆ ಆನಂದವಾಗುವುದೇ ? ಎಂಬುದು ನಿಜವಾದ ಪ್ರಶ್ನೆಯಾಗಿದೆ.