ರಾಮನಾಥಿ (ಗೋವಾ) – ಮಧ್ಯಪ್ರದೇಶದ ಇಂದೋರ್‌ನ ಉದ್ಯಮಿ ಶ್ರೀ. ಅಭಯ ನಿಗಮ ಅವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ ನೀಡಿದ್ದರು. ಈ ವೇಳೆ ಸನಾತನ ಸಾಧಕ ಶ್ರೀ. ಅಭಿಜಿತ ಸಾವಂತ ಅವರು ಅವರಿಗೆ ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮದ ಕಾರ್ಯಗಳ ಬಗ್ಗೆ ತಿಳಿಸಿದರು. ಶ್ರೀ. ನಿಗಮ ಅವರು ಎಲ್ಲಾ ಮಾಹಿತಿಯನ್ನು ಬಹಳ ಆಸಕ್ತಿ ಮತ್ತು ಕುತೂಹಲದಿಂದ ತಿಳಿದುಕೊಂಡರು.
ಶ್ರೀ. ನಿಗಮ ಅವರು ಸ್ವಭಾವ ದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಕುರಿತು ಆಸಕ್ತಿ ತೋರಿಸಿದರು. ಸ್ವತಃ ಬದಲಾಯಿಸಿಕೊಳ್ಳಲು ಹೇಗೆ ಪ್ರಯತ್ನಿಸಬೇಕು? ಈ ವಿಷಯದ ಬಗ್ಗೆ ಹಾಗೆಯೇ ಗುರುಕೃಪಾಯೋಗ ಮತ್ತು ಆಧ್ಯಾತ್ಮಿಕ ಸಂಶೋಧನೆ ವಿಷಯದ ಮಾಹಿತಿ ಅವರಿಗೆ ವಿಶೇಷವಾಗಿ ಇಷ್ಟವಾಯಿತು.
ಶ್ರೀ. ಅಭಯ ನಿಗಮ ಅವರ ಕಿರು ಪರಿಚಯ !ಶ್ರೀ. ನಿಗಮ ಮೂಲತಃ ಮೆಕ್ಯಾನಿಕಲ್ ಇಂಜಿನಿಯರ ಆಗಿದ್ದು ಅವರು ‘ಫಿಲಿಪ್ಸ್’ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ವರ್ಷಗಳ ಕಾಲ ಅವರು ಕೆಲಸದ ನಿಮಿತ್ತ ಯುರೋಪಿನಲ್ಲಿ ವಾಸಿಸುತ್ತಿದ್ದರು. ಪ್ರಸ್ತುತ ಅವರು ಇಂದೋರ್‌ನಲ್ಲಿ ವಾಸಿಸುತ್ತಿದ್ದು, ಇಲ್ಲಿ ಅವರ ವ್ಯವಸಾಯವಿದೆ; ಆದರೆ ಅವರ ಜೀವ ಆಧ್ಯಾತ್ಮದ್ದಾಗಿರುವುದರಿಂದ ಅವರು ಸ್ವತಃ ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದರೊಂದಿಗೆ ಸಮಾಜಿಕ ಕಾರ್ಯವೆಂದು ಅವರು ಯುವಕರಿಗೆ ಸನಾತನ ಧರ್ಮದ ಬಗ್ಗೆ ಮಾರ್ಗದರ್ಶನವನ್ನೂ ನೀಡುತ್ತಾರೆ. |