ನಿಜವಾದ ಗುರುತು ಮರೆಮಾಚಿ ವಿವಾಹ ಮಾಡಿಕೊಂಡರೆ ಅಥವಾ ದೈಹಿಕ ಸಂಬಂಧ ಬೆಳೆಸಿದರೆ ೧೦ ವರ್ಷ ಜೈಲು ಶಿಕ್ಷೆ !

ನವ ದೆಹಲಿ – ತಮ್ಮ ನಿಜವಾದ ಗುರುತು ಮರೆಮಾಚಿ ಯಾವುದಾದರೊಂದು ಮಹಿಳೆಯ ಜೊತೆಗೆ ವಿವಾಹ ಮಾಡಿಕೊಳ್ಳುವುದು ಅಥವಾ ಆಕೆಯ ಜೊತೆಗೆ ದೈಹಿಕ ಸಂಬಂಧ ಇಟ್ಟುಕೊಳ್ಳುವುದು ಈಗ ಅಪರಾಧವಾಗುವುದು. ಭಾರತೀಯ ನ್ಯಾಯ ಸಂಹಿತೆಯ ಕಲಂ ೬೯ ಪ್ರಕಾರ ಹೀಗೆ ಮಾಡುವುದು ಕಿರುಕುಳ ನೀಡಲಾಗಿದೆ ಎಂದು ತಿಳಿದು ಈ ಪ್ರಕರಣದಲ್ಲಿ ೧೦ ವರ್ಷಗಳ ಜೈಲ ಶಿಕ್ಷೆ ವಿಧಿಸಲಾಗುವುದು. ಈ ಸಂದರ್ಭದಲ್ಲಿ ಕಾನೂನು ವಿಷಯದ ಸಂಸತ್ತಿನ ಸಮಿತಿಯಿಂದ ಒಂದು ವರದಿ ತಯಾರಿಸಿದ್ದು ಪ್ರಸ್ತಾವ ಕೂಡ ಮಂಡಿಸುವ ಸಾಧ್ಯತೆ ಇದೆ. ವಿಶೇಷವೆಂದರೆ ಇಂತಹ ಪ್ರಕರಣದಲ್ಲಿ ದೈಹಿಕ ಸಂಬಂಧ ಇಟ್ಟುಕೊಂಡರೆ ಅದು ಬಲಾತ್ಕಾರ ಎಂದು ಹೇಳಲಾಗದೆ ಅದು ಕಿರುಕುಳ ಎಂದು ತಿಳಿಯಲಾಗುವುದು.
ಉದ್ಯೋಗ ನೀಡುವುದು, ಪ್ರಮೋಷನ್ ಅಥವಾ ವಿವಾಹದ ಆಶ್ವಾಸನೆ ನೀಡಿ ವಿವಾಹ ಮಾಡಿಕೊಳ್ಳುವುದೂ ಕೂಡ ಕಿರುಕುಳ ಎಂದು ತಿಳಿಯಲಾಗುವುದು. ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಇಂತಹ ಅನೇಕ ಘಟನೆಗಳು ಬೆಳಕಿಗೆ ಬಂದಿದೆ. ಇಂತಹ ಪ್ರಕರಣದಲ್ಲಿ ಪೊಲೀಸರಿಗು ಕೂಡ ಕ್ರಮ ಕೈಗೊಳ್ಳುವಾಗ ಕಷ್ಟವಾಗುತ್ತಿದೆ. ಈಗ ಈ ಸಂದರ್ಭದಲ್ಲಿ ಕಾನೂನು ರೂಪಿಸಿದ ನಂತರ ಕ್ರಮ ಕೈಗೊಳ್ಳುವುದು ಸುಲಭವಾಗುತ್ತದೆ.

ಸಂಪಾದಕೀಯ ನಿಲುವು

ಕೇಂದ್ರ ಸರಕಾರ ಹೊಸ ಕಾನೂನು ರೂಪಿಸಲಿದೆ !