Himanta Biswa Sarma on Akbar : ‘ಅಕ್ಬರ್’ನ ಕುರಿತು ಟೀಕಿಸಿದ್ದಕ್ಕಾಗಿ ಅಸ್ಸಾಂನ ಮುಖ್ಯಮಂತ್ರಿರವರಿಗೆ ಚುನಾವಣಾ ಆಯೋಗದಿಂದ ನೋಟೀಸ್ !

ಗೌಹತ್ತಿ (ಅಸ್ಸಾಂ) – ಮುಂಂದಿನ ತಿಂಗಳು ಛತ್ತಿಸಗಡ್ ನಲ್ಲಿ ನಡೆಯಲಿರುವ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪ್ರಚಾರ ಆರಂಭವಾಗಿದ್ದು ಭಾಜಪನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗದಿಂದ ‘ಕಾರಣ ಕೇಳಿ ನೋಟಿಸ್‘ ಜಾರಿಮಾಡಿದೆ.

೧. ಸರಮಾ ಇವರು ಕವರ್ಧಾದಲ್ಲಿ ಒಂದು ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ‘ಎಲ್ಲಿಗೆ ಒಬ್ಬ ಅಕ್ಬರ್ ಬಂದರೂ ,ಅಲ್ಲಿ ೧೦೦ ಅಕ್ಬರಗಳನ್ನು ಕರೆಯುತ್ತಾರೆ‘. ಹಾಗಾಗಿ ಆದಷ್ಟು ಬೇಗನೆ ಅವರನ್ನು ವಾಪಸ್ಸು ಕಳುಹಿಸಬೇಕು, ಇಲ್ಲವಾದಲ್ಲಿ ಮಾತೆಯ ಕೌಶಲ್ಯದ ನಾಡು ಅಪವಿತ್ರವಾಗುತ್ತದೆ” ಮಾತಾ ಕೌಶಲ್ಯಯ ಜನ್ಮಸ್ಥಳ ಛತ್ತೀಸ್ಗಢದಲ್ಲಿ ಇದೆ ಎಂದು ಹೇಳಲಾಗುತ್ತದೆ. ಸರಮಾ ಇವರು ಕಾಂಗ್ರೆಸ್ ನ ಏಕೈಕ ಮುಸ್ಲಿಂ ಸಚಿವ ಮಹಮ್ಮದ ಅಕ್ಬರ್ ವಿರುದ್ಧ ಮೇಲಿನ ಹೇಳಿಕೆಯನ್ನು ನೀಡಿದ್ದರು.

೨. ಛತ್ತೀಸಗಢ ರಾಜ್ಯದಲ್ಲಿ ೯೦ ಸದಸ್ಯರಿದ್ದು ವಿಧಾನಸಭೆಗೆ ನವೆಂಬರ್ ೭ ಮತ್ತು ೧೭ ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ ೩ ರಂದು ಮತ ಏಣಿಕೆ ನಡೆಯಲಿದೆ.