ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೊಂದಣಿ ಜಾರಿಗೆ ತನ್ನಿ ! – ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಜಾರಿಗೊಳಿಸಬೇಕು, ಎಂಬ ಬೇಡಿಕೆಯನ್ನು ಮಾಡುವ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಈ ಅರ್ಜಿಯ ಮೂಲಕ ಕೇಂದ್ರ ಸರಕಾರಕ್ಕೆ ಅಕ್ರಮವಾಗಿ ಭಾರತದಲ್ಲಿ ವಾಸಿಸುವ ವಿದೇಶಿ ನಾಗರಿಕರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶವನ್ನೂ ನೀಡಿ ಎಂದು ಬೇಡಿಕೆ ಮಾಡಿದೆ.

ಬಾಗಪತ (ಉತ್ತರ ಪ್ರದೇಶ) ಇಲ್ಲಿಯ ಭಾಜಪದ ಮಾಜಿ ಜಿಲ್ಲಾಧ್ಯಕ್ಷನ ಗುಂಡಿಕ್ಕಿ ಹತ್ಯೆ

ಇಲ್ಲಿ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಭಾಜಪದ ಮಾಜಿ ಜಿಲ್ಲಾಧ್ಯಕ್ಷ ಸಂಜಯ ಖೋಖರ ಇವರಿಗೆ ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೂವರು ಮಂದಿ ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೂವರು ಮಂದಿ ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಖೋಖರ ಹತ್ಯೆಯ ಬಗ್ಗೆ ಖೇದವನ್ನು ವ್ಯಕ್ತಪಡಿಸುತ್ತಾ ಈ ಘಟನೆಯ ತನಿಖೆಯನ್ನು ನಡೆಸಿ ಆರೋಪಿಗಳ ಮೇಲೆ ೨೪ ಗಂಟೆಗಳಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶವನ್ನು ನೀಡಿದ್ದಾರೆ.

ರಶಿಯಾ ಸರಕಾರದಿಂದ ಕೊರೋನಾ ವಿರುದ್ಧದ ಲಸಿಕೆಗೆ ಮಾನ್ಯತೆ ರಾಷ್ಟ್ರಾಧ್ಯಕ್ಷ ಪುತಿನ್‌ನ ಮಗಳಿಗೂ ನೀಡಲಾಯಿತು ಲಸಿಕೆ!

ರಶಿಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತಿನ್ ಇವರು ಕೊರೋನಾ ರೋಗಾಣುವಿನ ವಿರುದ್ಧ ಲಸಿಕೆಗೆ ಮಾನ್ಯತೆ ನೀಡಿದ್ದಾರೆ. ಆದ್ದರಿಂದ ಲಸಿಕೆಗೆ ಮಾನ್ಯತೆಯನ್ನು ನೀಡುವ ರಶಿಯಾ ಜಗತ್ತಿನ ಮೊದಲನೇಯ ದೇಶವಾಗಿದೆ. ‘ನನ್ನ ಇಬ್ಬರು ಮಗಳಿಗೂ ಇದರ ಲಸಿಕೆಯನ್ನು ನೀಡಲಾಗಿದೆ’, ಎಂದು ಪುತಿನ ಹೇಳಿದ್ದಾರೆ. ರಶಿಯಾದ ‘ಗಾಮಾಲಿಯಾ ಇನ್‌ಸ್ಟಿಟ್ಯುಟ್ ಆಫ್ ಆಪಿಡೆಮಿಯೊಲಾಜಿ’ ಹಾಗೂ ‘ಮೈಕ್ರೊಬಯೋಲಾಜಿ’ ಇವು ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

ಅಸಂಖ್ಯಾತ ಭಕ್ತರ ತ್ಯಾಗ, ಬಲಿದಾನ ಮತ್ತು ಸಂಘರ್ಷದಿಂದಲೇ ರಾಮ ಮಂದಿರದ ಕನಸು ನನಸಾಗುತ್ತಿದೆ ! – ಪ್ರಧಾನಮಂತ್ರಿ

ದೇಶದ ಹಲವು ತಲೆಮಾರುಗಳು ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ಅರ್ಪಿಸಿವೆ. ಆಗಸ್ಟ್ ೧೫ ಲಕ್ಷಾಂತರ ದೇಶಭಕ್ತರ ಬಲಿದಾನದ ಸಂಕೇತವಾಗಿದೆ. ಅದೇ ರೀತಿಯಲ್ಲಿ, ರಾಮಮಂದಿರಕ್ಕಾಗಿ ಅನೇಕ ದಶಕಗಳ ಕಾಲ ನಿರಂತರವಾಗಿ ಮತ್ತು ಏಕನಿಷ್ಠೆಯಿಂದ ಹೋರಡಿದ ಅನೇಕ ತಲೆಮರುಗಳ ತಪಸ್ಸು, ತ್ಯಾಗ ಮತ್ತು ಸಂಕಲ್ಪಗಳ ಪ್ರತೀಕವೆಂದರೆ ಇಂದಿನ ಈ ರಾಮಮಂದಿರದ ಭೂಮಿಪೂಜೆಯ ದಿನವಾಗಿದೆ.

ಗೋಕುಲಾಷ್ಟಮಿಯ ಶುಭದಿನದಂದು ನೇಪಾಳಿ ಭಾಷೆಯಲ್ಲಿ ‘ಸನಾತನ ಸಂಸ್ಥೆ’ಯ ಜಾಲತಾಣದ ಲೋಕಾರ್ಪಣೆ !

ಸನಾತನ ಸಂಸ್ಥೆ ಹಿಂದೂ ಧರ್ಮಪ್ರಸಾರದ ವ್ರತವನ್ನು ಕೈಗೆತ್ತಿಕೊಂಡು ಕಾರ್ಯನಿರತವಾಗಿದ್ದರಿಂದ ನಾವು ಈ ಬೇಡಿಕೆಯನ್ನು ಪೂರ್ಣ ಮಾಡುತ್ತಿದ್ದೇವೆ. ಜಗತ್ತಿನಾದ್ಯಂತ ನೇಪಾಳಿ ಭಾಷೆಯವರಿಗೆ ಧರ್ಮಶಿಕ್ಷಣ ಸಿಗಲು ನಾವು ನೇಪಾಳಿ ಜಾಲತಾಣವನ್ನು ಆರಂಭಿಸುತ್ತಿದ್ದೇವೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ್ ಇವರು ಹೇಳಿದ್ದಾರೆ.

ಧಾರವಾಡದಲ್ಲಿ ಮತಾಂಧರಿಂದ ಬಾಲಕಿ ಮೇಲೆ ಅತ್ಯಾಚಾರ

ಇಲ್ಲಿ ಓರ್ವ ಹಿಂದೂ ಬಾಲಕಿಯ ಮೇಲೆ ಬಶೀರನು ಅತ್ಯಾಚಾರ ಮಾಡಿದ್ದರಿಂದ ಸಂತ್ರಸ್ತೆಯು ಕ್ರಿಮಿನಾಶಕ ಸೇವಿಸಿದಳು. ಆಸ್ಪತ್ರೆಯಲ್ಲಿ ಆಕೆಯ ಮೇಲೆ ಚಿಕಿತ್ಸೆ ನಡೆಯುತ್ತಿರುವಾಗಲೇ ಆಕೆಯ ಮೃತಪಟ್ಟಳು. ಪೊಲೀಸರು ಬಶೀರನನ್ನು ಹುಡುಕುತ್ತಿದ್ದಾರೆ. ಬಶೀರನಿಗೆ ಆಕೆಯ ಕುಟುಂಬದವರ ಪರಿಚಯವಿತ್ತು. ಆತ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಹುಡುಗಿಯ ಮನೆಗೂ ಹೋಗುತ್ತಿದ್ದ.

ರಕ್ಷಣಾ ವಿಷಯದ ೧೦೧ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ‘ಆತ್ಮನಿರ್ಭರ ಭಾರತ’ಕ್ಕೆ ಕೇಂದ್ರ ಸರಕಾರದ ನಿರ್ಣಯ

ಭಾರತೀಯ ರಕ್ಷಣಾ ಸಚಿವಾಲಯದಿಂದ ‘ಆತ್ಮನಿರ್ಭರ ಭಾರತ’ ಆಯೋಜನೆಯ ಅಡಿಯಲ್ಲಿ ೧೦೧ ರಕ್ಷಣಾ ಸಾಮಗ್ರಿಗಳ ಒಂದು ಪಟ್ಟಿ ಮಾಡಿ ಅವುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಹೇರಿದೆ. ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದರು.

ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿಯವರಿಗೆ ಕೊರೋನಾದ ಸೋಂಕು

ಭಾರತದ ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿಯವರಿಗೆ ಕೊರೋನಾದ ಸೋಂಕು ತಗಲಿದೆ. ಅವರು ಸ್ವತಃ ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ. ಅವರು, ‘ಒಂದು ತೊಂದರೆಯ ಬಗ್ಗೆ ಚಿಕಿತ್ಸಾಲಯಕ್ಕೆ ಹೋದಾಗ ಆ ಸಮಯದಲ್ಲಿ ಮಾಡಲಾಗಿದ್ದ ಪರೀಕ್ಷಣೆಯಲ್ಲಿ ನನಗೆ ಕೊರೋನಾದ ಸೋಂಕು ತಗಲಿರುವ ಬಗ್ಗೆ ತಿಳಿಯಿತು.

ಪ್ರಸಿದ್ಧ ತಿರುಪತಿ ದೇವಸ್ಥಾನದ ಒಟ್ಟು ೭೪೩ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು

ಇಲ್ಲಿಯ ಪ್ರಸಿದ್ಧ ಭಗವಾನ ಶ್ರೀ ವೆಂಕಟೇಶ ದೇವಸ್ಥಾನದಲ್ಲಿಯ ೭೪೩ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು ತಗಲಿದ್ದು ಅದರಲ್ಲಿ ೩ ಜನರು ಮೃತಪಟ್ಟಿದ್ದಾರೆ. ಅದೇರೀತಿ ಇದರಲ್ಲಿ ೪೦೨ ಜನರು ಗುಣಮುಖರಾಗಿದ್ದು, ೩೩೮ ಜನರ ಮೇಲೆ ಚಿಕಿತ್ಸೆ ನಡೆಯುತ್ತಿದೆ.

ವಿವಿಧ ಠರಾವುಗಳನ್ನು ಒಪ್ಪಿಗೆ ನೀಡಿ ೯ ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಉತ್ಸಾಹ ಪೂರ್ಣ ವಾತಾವರಣದಿಂದ ಸಮಾರೋಪ !

ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮಮಂದಿರದಲ್ಲಿ ಹಿಂದೂಗಳಿಗಾಗಿ ಧರ್ಮಶಿಕ್ಷಣ ನೀಡಬೇಕು. ಅಲ್ಲಿಯ ಇತರ ದೇವಸ್ಥಾನಗಳು ಹಾಗೂ ಐತಿಹಾಸಿಕ ವಾರಸ್ಸುಗಳಾಗಿರುವ ಸ್ಥಳಗಳನ್ನೂ ಆಕ್ರಮಣದಿಂದ ಮುಕ್ತ ಮಾಡಿ ಅದರ ಜೀರ್ಣೋದ್ಧಾರ ಮಾಡಬೇಕು. ಧಾರ್ಮಿಕ ಅಸಮಾಧಾನವನ್ನು ತಡೆಗಟ್ಟಲು ಅಯೋಧ್ಯೆಯಲ್ಲಿ ಇತರ ಧರ್ಮಗಳ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಅನುಮತಿಯನ್ನು ನೀಡಬಾರದು.