‘ಸೆಂಟರ ಫಾರ ಪಾಲಿಸಿ ರಿಸರ್ಚ’ ನ ವಿದೇಶದಿಂದ ದಾನ ಪಡೆಯುವ ಬಗೆಗಿನ ಅನುಮತಿ ಪತ್ರ ರದ್ದು !

ನವದೆಹಲಿ – ನಿಯಮಗಳನ್ನು ಪಾಲಿಸದಿರುವುದರಿಂದ ಇಲ್ಲಿನ ‘ಸೆಂಟರ ಫಾರ ಪಾಲಿಸಿ ರಿಸರ್ಚ’ನ ಫಾರಿನ ಕಾಂಟ್ರಿಬ್ಯೂಶನ ರೆಗುಲೇಶನ ಆಕ್ಟ’ (ಎಫ್‌.ಸಿ.ಆರ್‌.ಎ.)ನ ಅನುಮತಿ ಪತ್ರವನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಈಗ ಈ ಸಂಸ್ಥೆಗೆ ವಿದೇಶದಿಂದ ದಾನವನ್ನು ಪಡೆಯುವುದು ಅಸಾಧ್ಯ. ಈ ಸಂಸ್ಥೆಯೊಂದಿಗೆ ‘ಆಕ್ಸಫೆಮ ಇಂಡಿಯಾ’ದ ಮೇಲೆ ಆಯಕರ ವಿಭಾಗವು ಕಳೆದ ವರ್ಷ ದಾಳಿ ಮಾಡಿದ್ದಾಗ ಅದರ ಅನುಮತಿಪತ್ರದ ಬಗ್ಗೆ ವಿಚಾರಣೆ ನಡೆಯಿತು. ಕಳೆದ ತಿಂಗಳು ‘ಆಕ್ಸಫೆಮ ಇಂಡಿಯಾ’ದ ಅನುಮತಿಪತ್ರವನ್ನು ರದ್ದುಗೊಳಿಸಲಾಗಿದೆ. ‘ಸೆಂಟರ ಫಾರ ಪಾಲಿಸಿ ರಿಸರ್ಚ’ನ ಮೇಲೆ ಆಯಕರ ವಿಭಾಗವು ದಾಳಿ ಮಾಡಿತ್ತು, ಆಗ ಕಾಂಗ್ರೆಸ್ಸಿನ ನೇತಾರ ಮಣಿಶಂಕರ ಅಯ್ಯರರವರ ಮಗಳಾದ ಯಾಮಿನಿ ಅಯ್ಯರ ಈ ಸಂಸ್ಥೆಯ ಅಧ್ಯಕ್ಷೆಯಾಗಿದ್ದರು.