೮.೧೧.೨೦೨೨ ಈ ದಿನದಂದು ಭಾರತದಲ್ಲಿ ಗೋಚರವಾಗುವ ಖಗ್ರಾಸ್ ಚಂದ್ರಗ್ರಹಣ (ಗ್ರಸ್ತೋದಿತ), ಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ರಾಶಿಗಳಿಗನುಸಾರ ದೊರೆಯುವ ಫಲ !

೧. ಚಂದ್ರಗ್ರಹಣ ಗೋಚರವಾಗುವ ದೇಶಗಳು

ಕಾರ್ತಿಕ ಹುಣ್ಣಿಮೆ (೮.೧೧.೨೦೨೨, ಮಂಗಳವಾರ)ಯಂದು ಭಾರತ ಸಹಿತ ಸಂಪೂರ್ಣ ಏಷ್ಯಾ, ಆಸ್ಟ್ರೇಲಿಯಾ, ಅಮೇರಿಕಾದ ಪೂರ್ವದ ಪ್ರದೇಶ ಮತ್ತು ಸಂಪೂರ್ಣ ದಕ್ಷಿಣ ಅಮೇರಿಕಾದಲ್ಲಿ ಗ್ರಹಣವು ಗೋಚರವಾಗುತ್ತದೆ.

ಖಗ್ರಾಸ್ ಚಂದ್ರಗ್ರಹಣದ ಸಂಗ್ರಹಿತ ಚಿತ್ರ

೨. ಭಾರತದಲ್ಲಿ ಎಲ್ಲಿಯೂ ಗ್ರಹಣಸ್ಪರ್ಶ ಗೋಚರವಾಗುವುದಿಲ್ಲ

ಭಾರತದಲ್ಲಿ ಈ ಚಂದ್ರಗ್ರಹಣವು ಎಲ್ಲೆಡೆಗೆ ಗ್ರಸ್ತೋದಿತ ಗೋಚರವಾಗುವುದು, ಅಂದರೆ ಗ್ರಸ್ತ(ಸುತ್ತಲ್ಪಟ್ಟ)ವಾಗಿರುವ ಚಂದ್ರಬಿಂಬವು ಉದಯಕ್ಕೆ ಬರುವುದು. ಆದ್ದರಿಂದ ಭಾರತದಲ್ಲಿ ಎಲ್ಲಿಯೂ ಕೂಡ ಗ್ರಹಣಸ್ಪರ್ಶ ಗೋಚರವಾಗುವುದಿಲ್ಲ. ಭಾರತದ ಪೂರ್ವದ ಕಡೆಗಿನ ಕೆಲವು ಪ್ರದೇಶಗಳಲ್ಲಿ ಖಗ್ರಾಸ್ ಸ್ಥಿತಿಯು ಗೋಚರವಾಗುತ್ತದೆ; ಆದರೆ ಮಹಾರಾಷ್ಟ್ರ ಮತ್ತು ಇತರ ಪ್ರದೇಶಗಳಲ್ಲಿ ಈ ಗ್ರಹಣವು ಖಂಡಗ್ರಾಸ್ ಗೋಚರವಾಗುವುದು.’ (ಆಧಾರ : ದಾತೆ ಪಂಚಾಂಗ)

೨ ಅ. ಚಂದ್ರಗ್ರಹಣದ ಸಮಯ (ಈ ಸಮಯ ಮುಂಬಯಿಗೆ ಸಂಬಂಧಿಸಿದೆ)

೨ ಅ ೧. ಸ್ಪರ್ಶ (ಆರಂಭ) : ೮.೧೧.೨೦೨೨ ಈ ದಿನದಂದು ಮಧ್ಯಾಹ್ನ ೨.೩೯ ಗಂಟೆಗೆ

೨ ಅ ೨. ಮಧ್ಯ : ೮.೧೧.೨೦೨೨ ಈ ದಿನದಂದು ಸಾಯಂಕಾಲ ೪.೩೦ ಗಂಟೆಗೆ

೨. ಅ ೩ ಮೋಕ್ಷ (ಗ್ರಹಣ ಸಮಾಪ್ತಿ ಅಥವಾ ಕೊನೆಯ ಗಳಿಗೆ) : ೮.೧೧.೨೦೨೨ ಈ ದಿನದಂದು ಸಾಯಂಕಾಲ ೬.೧೯ ಗಂಟೆಗೆ

೨ ಆ. ಗ್ರಹಣಪರ್ವ (ಟಿಪ್ಪಣಿ ೧) (ಗ್ರಹಣದ ಆರಂಭದಿಂದ ಸಮಾಪ್ತಿಯವರೆಗಿನ ಒಟ್ಟು ಕಾಲಾವಧಿ) : ೩ ಗಂಟೆ ೪೦ ನಿಮಿಷಗಳು (ಮೇಲಿನ ಸಮಯವು ಸಂಪೂರ್ಣ ಭಾರತಕ್ಕೆ ಅನ್ವಯಿಸುತ್ತದೆ.)

ಟಿಪ್ಪಣಿ ೧ : ಪರ್ವ ಎಂದರೆ ಪರ್ವಣಿ ಅಥವಾ ಪುಣ್ಯಕಾಲ. ಗ್ರಹಣಸ್ಪರ್ಶದಿಂದ ಗ್ರಹಣ ಮೋಕ್ಷದವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ಈಶ್ವರನ ಅನುಸಂಧಾನದಲ್ಲಿದ್ದರೆ ಆಧ್ಯಾತ್ಮಿಕ ಲಾಭವಾಗುತ್ತದೆ, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

೨ ಇ. ಪುಣ್ಯಕಾಲ : ಚಂದ್ರೋದಯದಿಂದ (ಆಯಾ ಆಯಾ ಊರುಗಳಲ್ಲಿನ ಸೂರ್ಯಾಸ್ತದಿಂದ) ಗ್ರಹಣ ಮೋಕ್ಷದವರೆಗೆ ಪುಣ್ಯಕಾಲವಿರುತ್ತದೆ.’ (ಆಧಾರ : ದಾತೆ ಪಂಚಾಂಗ)

೩. ಗ್ರಹಣದ ವೇಧ ಆರಂಭವಾಗುವುದು

೩ ಅ. ಅರ್ಥ : ಚಂದ್ರಗ್ರಹಣದ ಮೊದಲು ಚಂದ್ರನು ಪೃಥ್ವಿಯ ಛಾಯೆಯಲ್ಲಿ ಬರತೊಡಗುತ್ತಾನೆ. ಆದ್ದರಿಂದ ಅವನ ಪ್ರಕಾಶವು ನಿಧಾನವಾಗಿ ಕಡಿಮೆಯಾಗತೊಡಗುತ್ತದೆ. ಇದನ್ನೇ ‘ಗ್ರಹಣದ ವೇಧ ತಾಗಿತು’, ಎಂದು ಹೇಳುತ್ತಾರೆ.

೩ ಆ. ಈ ಗ್ರಹಣ ಗ್ರಸ್ತೋದಿತ (ಅಂಶ ಕ್ರ. ೨ ರಲ್ಲಿ ಅರ್ಥ ಕೊಡಲಾಗಿದೆ.) (ಖಗ್ರಾಸ್ ಚಂದ್ರಗ್ರಹಣ) ಇರುವುದರಿಂದ ಮಂಗಳವಾರ ೮.೧೧.೨೦೨೨ ಈ ದಿನದಂದು ಸೂರ್ಯೋದಯದಿಂದ ಮೋಕ್ಷದವರೆಗೆ (ಸಾಯಂಕಾಲ ೬.೧೯ ರವರೆಗೆ) ಗ್ರಹಣದ ವೇಧವನ್ನು ಪಾಲಿಸಬೇಕು. ಮಕ್ಕಳು, ವೃದ್ಧರು, ಅಶಕ್ತರು, ರೋಗಿಗಳು ಮತ್ತು ಗರ್ಭಿಣಿ ಸ್ತ್ರೀಯರು ಮಂಗಳವಾರ ಬೆಳಿಗ್ಗೆ ೧೧ ರಿಂದ ಸೂರ್ಯಾಸ್ತದವರೆಗೆ ಗ್ರಹಣದ ವೇಧವನ್ನು ಪಾಲಿಸಬೇಕು .

೪. ಚಂದ್ರಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು :

ವೇಧ ಕಾಲದಲ್ಲಿ ಭೋಜನ ಮಾಡುವುದು ನಿಷಿದ್ಧವಾಗಿದೆ. ಸ್ನಾನ, ಜಪ, ದೇವರ ಪೂಜೆ, ಮತ್ತು ಶ್ರಾದ್ಧಕರ್ಮಗಳನ್ನು ಮಾಡಬಹುದು. ನೀರು ಕುಡಿಯುವುದು, ನಿದ್ದೆ ಮಾಡುವುದು ಮತ್ತು ಮಲಮೂತ್ರ ವಿಸರ್ಜನೆ ಈ ಕರ್ಮಗಳನ್ನು ಮಾಡಬಹುದು. ಗ್ರಹಣ ಪರ್ವಕಾಲದಲ್ಲಿ, (೨ ಆ ಅಂಶ ಟಿಪ್ಪಣಿ ೧ ರಲ್ಲಿ ಅರ್ಥವನ್ನು ಕೊಡಲಾಗಿದೆ.) ಅಂದರೆ ಆಯಾ ಊರುಗಳಲ್ಲಿನ ಸೂರ್ಯಾಸ್ತದಿಂದ ಸಾಯಂಕಾಲ ೬.೧೯ ಗಂಟೆಯವರೆಗೆ ಈ ಕಾಲದಲ್ಲಿ ನೀರು ಕುಡಿಯುವುದು, ಮಲಮೂತ್ರ ವಿಸರ್ಜನೆ ಮತ್ತು ನಿದ್ದೆ ಮಾಡುವುದು ಈ ಕರ್ಮಗಳು ನಿಷಿದ್ಧವಾಗಿರುವುದರಿಂದ ಮಾಡಬಾರದು. (ಆಧಾರ – ದಾತೆ ಪಂಚಾಂಗ)

೫. ಗ್ರಹಣ ಕಾಲದಲ್ಲಿ ಯಾವ ಕರ್ಮಗಳನ್ನು ಮಾಡಬೇಕು ?

೧. ಗ್ರಹಣಸ್ಪರ್ಶವಾದ ಕೂಡಲೆ ಸ್ನಾನ ಮಾಡಬೇಕು. ಗ್ರಹಣ ಸ್ಪರ್ಶ ಎಂದರೆ ಗ್ರಹಣ ಆರಂಭವಾದ ತಕ್ಷಣ ಮಧ್ಯಾಹ್ನ ೨.೩೯ ಗಂಟೆಗೆ ಸ್ನಾನ ಮಾಡಬೇಕು.

೨. ಪರ್ವಕಾಲದಲ್ಲಿ ದೇವರ ಪೂಜೆ, ತರ್ಪಣ, ಶ್ರದ್ಧಾ, ಜಪ, ಹೋಮ ಮತ್ತು ದಾನ ಮಾಡಬೇಕು.

೩. ಹಿಂದೆ ಕೆಲವು ಕಾರಣಗಳಿಂದ ಸ್ಥಗಿತಗೊಂಡ ಮಂತ್ರದ ಪುರಶ್ಚರಣೆಯನ್ನು ಈ ಕಾಲಾವಧಿಯಲ್ಲಿ ಆರಂಭಿಸಿದರೆ ಅದರ ಫಲ ಅನಂತಪಟ್ಟುಗಳಲ್ಲಿ ಸಿಗುತ್ತದೆ.

೪. ಗ್ರಹಣಮೋಕ್ಷ (ಗ್ರಹಣ ಮುಗಿದ ನಂತರ) : ಸ್ನಾನ ಮಾಡಬೇಕು .

ಯಾವುದಾದರೂ ವ್ಯಕ್ತಿಗೆ ಸೂತಕ ಇದ್ದರೆ ಗ್ರಹಣ ಕಾಲದಲ್ಲಿ ಗ್ರಹಣ ಸಂಬಂಧಿತ ಸ್ನಾನ ಮತ್ತು ದಾನ ಮಾಡುವ ಮಟ್ಟಿಗೆ ಅವರಿಗೆ ಶುದ್ದಿ ಇರುತ್ತದೆ .

೬. ರಾಶಿಗಳಿಗನುಸಾರ ಗ್ರಹಣದ ಫಲ

೬ ಅ. ಶುಭಫಲ : ಮಿಥುನ, ಕರ್ಕಾಟಕ, ವೃಶ್ಚಿಕ ಮತ್ತು ಕುಂಭ

೬ ಆ. ಅಶುಭ ಫಲ : ಮೇಷ, ವೃಷಭ, ಕನ್ಯಾ ಮತ್ತು ಮಕರ

೬ ಇ. ಮಿಶ್ರಫಲ : ಸಿಂಹ, ತುಲಾ, ಧನು ಮತ್ತು ಮೀನ

ಯಾವ ರಾಶಿಗಳಿಗೆ ಅಶುಭ ಫಲವಿದೆಯೋ, ಆ ರಾಶಿಯ ವ್ಯಕ್ತಿಗಳು ಮತ್ತು ಗರ್ಭಿಣಿ ಮಹಿಳೆಯರು ಈ ಚಂದ್ರಗ್ರಹಣವನ್ನು ನೋಡಬಾರದು. (ಆಧಾರ : ದಾತೆ ಪಂಚಾಂಗ)

೭. ಚಂದ್ರಗ್ರಹಣ ಮತ್ತು ತುಳಸಿ ವಿವಾಹ

ಕಾರ್ತಿಕ ಶುಕ್ಲ ದ್ವಾದಶಿ, ಶನಿವಾರ ೫.೧೧.೨೦೨೨ ಈ ದಿನದಂದು ತುಳಸಿ ವಿವಾಹ ಆರಂಭವಾಗಿದ್ದು ಹುಣ್ಣಿಮೆಯ ದಿನದಂದು ಮಂಗಳವಾರ ೮.೧೧.೨೦೨೨ ರಂದು ತುಳಸಿ ವಿವಾಹವು ಸಮಾಪ್ತವಾಗುತ್ತದೆ. ಮಂಗಳವಾರ ೮.೧೧.೨೦೨೨ ಈ ದಿನದಂದು ಚಂದ್ರ ಗ್ರಹಣವಿರುವುದರಿಂದ ಸಾಯಂಕಾಲ ೬.೧೯ ಗಂಟೆಯ ನಂತರ, ಅಂದರೆ ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಿ ನಂತರ ತುಳಸಿ ವಿವಾಹವನ್ನು ಮಾಡಬಹುದು. ಆದರೆ ೫.೧೧.೨೦೨೨ ರಿಂದ ೭.೧೧.೨೦೨೨ ಈ ಕಾಲಾವಧಿಯಲ್ಲಿ ಯಾವುದಾದರೊಂದು ದಿನ ತುಳಸಿ ವಿವಾಹ ಮಾಡುವುದು ಯೋಗ್ಯವಾಗಿದೆ. (ಆಧಾರ : ದಾತೆ ಪಂಚಾಂಗ)

ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದ, ವಾಸ್ತು ವಿಶಾರದ, ಸಂಖ್ಯಾ ಜ್ಯೋತಿಷ್ಯ ವಿಶಾರದ, ರತ್ನ ಶಾಸ್ತ್ರ ವಿಶಾರದ, ಅಷ್ಟಕವರ್ಗ ವಿಶಾರದ, ಸರ್ಟಿಫೈಡ್ ಡೌಸರ್, ರಮಲ ಶಾಸ್ತ್ರಿ, ಹಸ್ತಾಕ್ಷರ ಮನೋವಿಶ್ಲೇಷಣ ಶಾಸ್ತ್ರ ವಿಶಾರದ ಮತ್ತು ಹಸ್ತಸಾಮುದ್ರಿಕ ಪ್ರಬೋಧ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (೧೬.೧೦.೨೦೨೨)