ಸಿಯೋಲ (ದಕ್ಷಿಣ ಕೋರಿಯಾ) ನ ಹೆಲೋವಿನ ಉತ್ಸವದಲ್ಲಿ ಕಾಲ್ತುಳಿತ : ೧೫೧ ಜನರ ಸಾವು

ಸಿಯೋಲ (ದಕ್ಷಿಣ ಕೋರಿಯಾ) – ದಕ್ಷಿಣ ಕೋರಿಯಾದ ರಾಜಧಾನಿಯಾದ ಸಿಯೋಲನಲ್ಲಿ ಅಕ್ಟೋಬರ ೨೯ರ ರಾತ್ರಿ ಹೆಲೋವಿನ ಉತ್ಸವದ ಸಮಯದಲ್ಲಿ ನಡೆದ ಕಾಲ್ತುಳಿತದಿಂದ ೧೫೧ ಕ್ಕಿಂತ ಹೆಚ್ಚಿನ ಜನರು ಮೃತರಾಗಿದ್ದರೆ, ೧೫೦ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಅನೇಕರಿಗೆ ಹೃದಯಾಘಾತವಾಗಿದ್ದರಿಂದ ಅವರ ಸಾವು ಸಂಭವಿಸಿದೆ. ಈ ಅಪಘಾತದಿಂದಾಗಿ ದೇಶದಲ್ಲಿ ರಾಷ್ಟ್ರೀಯ ಶೋಕವನ್ನು ಘೋಷಿಸಲಾಗಿದೆ. ಪೊಲೀಸರು ನೀಡಿದ ಮಾಹಿತಿಗನುಸಾರ ಈ ಉತ್ಸವದ ಸಮಯದಲ್ಲಿ ಲಕ್ಷಾಂತರ ಜನರು ಒಂದು ಕಿರಿದಾದ ರಸ್ತೆಗೆ ಬಂದಿದ್ದರು. ಇದರಿಂದಾಗಿ ಕಾಲ್ತುಳಿತ ಸಂಭವಿಸಿತು.

ಹೆಲೋವಿನ ಅಂದರೆ ಏನು ?

ಅಮೇರಿಕಾ, ಇಂಗ್ಲೆಂಡ ಹಾಗೂ ಇತರ ಅನೇಕ ದೇಶಗಳಲ್ಲಿ ಪ್ರತಿವರ್ಷ ಅಕ್ಟೋಬರ ೩೧ರಂದು ‘ಹೆಲೋವಿನ’ ಎಂಬ ಹೆಸರಿನ ಒಂದು ಉತ್ಸವವನ್ನು ಆಚರಿಸಲಾಗುತ್ತದೆ. ಈ ದಿನ ಪೃಥ್ವಿ ಹಾಗೂ ಭುವಲೋಕದಲ್ಲಿನ ಅಂತರ ಕಡಿಮೆಯಾಗುತ್ತದೆ. ಇದರಿಂದ ಭುವಲೋಕದಲ್ಲಿನ ಪಿತೃಗಳು ಪೃಥ್ವಿಗೆ ಬರುತ್ತಾರೆ. ಪಿತೃಗಳು ತಮ್ಮ ಕುಟುಂಬದವರನ್ನು ಗುರುತಿಸಬಾರದು ಎಂದು ಈ ಜನರು ಭೂತ, ಪ್ರೇತ, ದೆವ್ವ, ಪಿಶಾಚಿ, ರಾಕ್ಷಸರಂತೆ ಕಾಣಲು ವಿಚಿತ್ರ ಪೊಷಾಕುಗಳನ್ನು ಧರಿಸುತ್ತಾರೆ. ತಮ್ಮ ಮನೆಗಳ ಪ್ರವೇಶದ್ವಾರದ ಮೇಲೂ ಇಂತಹ ಭಯಾನಕ ವಿಕೃತ ಅಲಂಕಾರಗಳನ್ನು ಮಾಡುತ್ತಾರೆ. ಈ ದಿನ ತಯಾರಿಸಲಾದ ಖಾದ್ಯ ಪದಾರ್ಥಗಳಿಗೂ ಭೂತಪ್ರೇತಗಳ ಆಕಾರವನ್ನು ನೀಡಲಾಗುತ್ತದೆ.