ಆಕಾಶದೀಪದ ಆಕಾರವು ಏಕೆ ಸಾತ್ತ್ವಿಕವಾಗಿರಬೇಕು ?

೧. ನಕ್ಷತ್ರ ಆಕಾರದ ಅಕಾಶದೀಪ

ಈ ರೀತಿಯ ಆಕಾಶದೀಪದಿಂದ ಚಂಚಲ ಸ್ವರೂಪದ ಲಹರಿಗಳು ಪ್ರಕ್ಷೇಪಣೆಯಾಗುತ್ತವೆ. ಈ ರೀತಿಯ ಆಕಾಶದೀಪವನ್ನು ನೋಡುವವರ ಮೂಲಕ ಮಧ್ಯಭಾಗದಿಂದ, ಪಾತಾಳದಿಂದ ಊರ್ಧ್ವ ದಿಕ್ಕಿನಲ್ಲಿ ಪ್ರಕ್ಷೇಪಣೆಯಾಗುವ ತಮೋಗುಣವು ಸೆಳೆಯಲ್ಪಟ್ಟು ತನ್ನ ವಿಶಿಷ್ಟ ಆಕಾರದ ಬಲದಿಂದ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತದೆ.

೨. ಷಟ್ಕೋನಿ ಆಕಾರದ ಕಂದೀಲು

ಈ ಆಕಾಶದೀಪದಿಂದ ಸಮ ಪ್ರಮಾಣದಲ್ಲಿ ೩ ಘಟಕಕ್ಕೆ ಸಂಬಂಧಿಸಿದ ಲಹರಿಗಳು ಪ್ರಕ್ಷೇಪಣೆ ಆಗುತ್ತವೆ. ಈ ಆಕಾಶದೀಪದ ಎಲ್ಲ ೬ ಘಟಕಗಳ ಎಲ್ಲ ಸ್ಥಳಗಳಲ್ಲಿ ಸತತ ತಮೋಗುಣಿ ಶಕ್ತಿಯನ್ನು ಪ್ರಕ್ಷೇಪಿಸುವ ಯಂತ್ರದ ಮೂಲಕ ಊರ್ಧ್ವ ದಿಕ್ಕಿನಿಂದ ಅಧೋ ದಿಕ್ಕಿನವರೆಗೆ ದೊಡ್ಡ ಪ್ರಮಾಣದಲ್ಲಿ ತಮೋಗುಣವನ್ನು ಪ್ರಕ್ಷೇಪಿಸಲಾಗುತ್ತದೆ.

೩. ಚೌಕೋನ ಆಕಾರದ ಆಕಾಶದೀಪ

ಈ ಆಕಾಶದೀಪದಿಂದ ಸತತ ವಲಯಾಂಕಿತ ಸ್ವರೂಪದ ಲಹರಿಗಳು ಪ್ರಕ್ಷೇಪಣೆಯಾಗುತ್ತವೆ. ಈ ವಿಧದ ಆಕಾಶದೀಪದಿಂದ ತಮೋಗುಣಿ ಶಕ್ತಿಗಳು ತಮೋಗುಣಿ ಪ್ರಕ್ಷೇಪಣೆಯಾಗಲು ಚೌಕೋನ ಸ್ವರೂಪದ ಕೋಷ್ಟಕ ಸ್ವರೂಪದ ಯಂತ್ರವನ್ನು ಅಳವಡಿಸುತ್ತಾರೆ ಹಾಗೂ ಅದರ ಮೂಲಕ ವಾಸ್ತುವಿನ ನಾಲ್ಕೂ ಬದಿಯನ್ನು ಮಲಿನಗೊಳಿಸುತ್ತಾರೆ.

೪. ಲಂಬಗೋಲಾಕಾರದ ಆಕಾಶದೀಪ

ಈ ರೀತಿಯ ಆಕಾಶದೀಪದಲ್ಲಿ ಆಕಾರತ್ತ್ವ ವಿಹೀನತೆ ಪ್ರಾಪ್ತವಾಗಿರುವುದರಿಂದ ತಮೋಗುಣಿ ಶಕ್ತಿಗಳಿಗೆ ಈ ವಿಧದ ಆಕಾಶ ದೀಪದಿಂದ ತಮೋಗುಣವನ್ನು ಪ್ರಕ್ಷೇಪಣೆಮಾಡಲು ಆಗುವುದಿಲ್ಲ. ಈ ಆಕಾಶದೀಪದಿಂದ ಸಾತ್ತ್ವಿಕತೆಯ ಪ್ರಕ್ಷೇಪಣೆಯಾಗುತ್ತದೆ.’

– ಶ್ರೀ. ನಿಷಾದ ದೇಶಮುಖ (೧೫.೧೦.೨೦೦೬)

ಆನಂದೋತ್ಸವ ದೀಪಾವಳಿ

ಅ. ಉತ್ಪತ್ತಿ ಮತ್ತು ಅರ್ಥ : ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ.

ಆ. ದೀಪಾವಳಿಯ ಭಾವಾರ್ಥ : ‘ಶ್ರೀಕೃಷ್ಣನು ಅಸುರೀ ವೃತ್ತಿಯ ನರಕಾಸುರನನ್ನು ವಧಿಸಿ ಜನರಿಗೆ ಭೋಗವೃತ್ತಿ, ಲಾಲಸೆ, ಅನಾಚಾರ ಮತ್ತು ದುಷ್ಟಪ್ರವೃತ್ತಿಗಳಿಂದ ಮುಕ್ತಗೊಳಿಸಿದನು ಮತ್ತು ದೈವೀವಿಚಾರಗಳನ್ನು ನೀಡಿ ಸುಖಿಯಾಗಿಸಿದನು, ಅದುವೇ ಈ ‘ದೀಪಾವಳಿ’. ನಾವು ವರ್ಷಾನುವರ್ಷಗಳಿಂದ ಕೇವಲ ಒಂದು ರೂಢಿ ಎಂದು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಇಂದು ಅದರ ಗೂಢಾರ್ಥವು ಲೋಪವಾಗಿದೆ. ಈ ಗೂಢಾರ್ಥವನ್ನರಿತು ಅದರಿಂದ ಅಭಿಮಾನವು ಜಾಗೃತವಾದಲ್ಲಿ ಅಜ್ಞಾನರೂಪೀ ಅಂಧಃಕಾರದ, ಹಾಗೆಯೇ ಭೋಗವೃತ್ತಿ ಮತ್ತು ಅನಾಚಾರಿ, ಅಸುರಿ ವೃತ್ತಿಯಿರುವ ಜನರ ಪ್ರಾಬಲ್ಯವು ಕಡಿಮೆಯಾಗಿ ಸಜ್ಜನಶಕ್ತಿಯ ಮೇಲಿನ ಅವರ ವರ್ಚಸ್ಸು ಕಡಿಮೆಯಾಗುವುದು.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)