ಉತ್ತರ ಕೊರಿಯಾ ಜಪಾನ ಮೇಲೆ ಕ್ಷಿಪಣಿ ಹಾಕಿತು !

ಟೊಕಿಯೊ (ಜಪಾನ) – ಉತ್ತರ ಕೊರಿಯಾವು ಅಕ್ಟೋಬರ ೪ ರಂದು ಜಪಾನ ಮೇಲೆ ಕ್ಷಿಪಣಿವನ್ನು ಹಾಕಿತು. ಇದರಿಂದ ಜಪಾನಿನ ಕೆಲವು ಪ್ರದೇಶಗಳ ನಾಗರಿಕರಲ್ಲಿ ಕೋಲಾಹಲವುಂಟಾಯಿತು. ಜಪಾನ ಸರಕಾರವು ಈ ಆಕ್ರಮಣದಿಂದ ಜಪಾನಿನ ಉತ್ತರದ ಹೊಕ್ಕಾಂಡೊ ದ್ವೀಪ ಮತ್ತು ಈಶಾನ್ಯದ ಆಓಮೋರಿ ಪ್ರದೇಶದ ನಾಗರಿಕರಿಗೆ ಜಾಗರೂಕತೆಯಿಂದರಲು ಎಚ್ಚರಿಕೆ ನೀಡುತ್ತಾ ಕಟ್ಟಡದಲ್ಲಿಯೇ ಇರುವಂತೆ ಅಥವಾ ನೆಲಮಾಳಿಗೆಯಲ್ಲಿ ಅಡಗಿ ಕುಳಿತುಕೊಳ್ಳುವ ಕರೆ ನೀಡಿದರು. ಜಪಾನಿನ ಕ್ಷೇತ್ರದಲ್ಲಿರುವ ಪ್ರಶಾಂತ ಮಹಾಸಾಗರದಲ್ಲಿ ೪ ಅಕ್ಟೋಬರ ಬೆಳಿಗ್ಗೆ ೭ ಗಂಟೆ ೪೪ ನಿಮಿಷಕ್ಕೆ ಕ್ಷಿಪಣಿಗಳು ಬಿದ್ದವು.

‘ಬಿಬಿಸಿ’ ವಾರ್ತಾವಾಹಿನಿ ನೀಡಿರುವ ಮಾಹಿತಿಯನುಸಾರ ಈ ಕ್ಷಿಪಣಿ ೪ ಸಾವಿರ ೫೦೦ ಕಿ.ಮೀ. ಅಂತರ ಮತ್ತು ೧೦ ಸಾವಿರ ಕಿ.ಮಿ. ಎತ್ತರದ ವರೆಗೆ ಹಾರಿತ್ತು. ಪ್ರಶಾಂತ ಮಹಾಸಾಗರದಲ್ಲಿ ಯಾವ ಸ್ಥಳದಲ್ಲಿ ಕ್ಷಿಪಣಿ ಬಿದ್ದಿತೋ, ಅಲ್ಲಿಂದ ಅಮೇರಿಕೆಯ ದ್ವೀಪ ಗುಆಮ ಹತ್ತಿರವಿದೆ. ‘ಹಿಂದಿನ ವಾರ ಅಮೇರಿಕಾ, ದಕ್ಷಿಣ ಕೊರಿಯಾ ಮತ್ತು ಜಪಾನ ಇವರು ಜಂಟಿಯಾಗಿ ಸೈನಿಕ ಅಭ್ಯಾಸ ಮಾಡಿದ್ದರು. ಅದನ್ನು ವಿರೋಧಿಸುವುದನ್ನು ತೋರಿಸುವುದಕ್ಕಾಗಿಯೇ ಉತ್ತರ ಕೊರಿಯಾ ಈ ಕ್ಷಿಪಣಿ ಹಾರಿಸಿತು’, ಎಂದು ಹೇಳಲಾಗುತ್ತಿದೆ. ಈ ಮೊದಲೂ ೨೦೧೭ ರಲ್ಲಿ ಉತ್ತರ ಕೊರಿಯಾವು ಇದೇ ರೀತಿಯಲ್ಲಿ ಕ್ಷಿಪಣಿಯನ್ನು ಹಾಕಿತ್ತು.