ಯಜ್ಞಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಶಕ್ತಿಯ ನಿರ್ಮಿತಿಯಾಗುತ್ತದೆ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಯಜ್ಞದ ವಿಷಯದಲ್ಲಿ ಸಂಶೋಧನೆ ಮಂಡನೆ

‘ಯಜ್ಞದಿಂದ ಸಸ್ಯವರ್ಗ ಹಾಗೆಯೇ ಹಾನಿಕಾರಕ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅನೇಕ ಬಾರಿ ಅಧ್ಯಯನ ಮಾಡಲಾಗಿದೆ; ಆದರೆ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ನಡೆಸಿದ ಆಧ್ಯಾತ್ಮಿಕ ಸಂಶೋಧನೆಯು ಮಾನವ, ಪ್ರಾಣಿ, ಸಸ್ಯಗಳ ಜೊತೆಗೆ ಪರಿಸರದ ಮೇಲೆಯೂ ಯಜ್ಞದ ಸಕಾರಾತ್ಮಕ ಪರಿಣಾಮವಾಗುತ್ತದೆ ಮತ್ತು ಸಮಾಜದ ಕಲ್ಯಾಣಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಸಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಎಂದು ತಿಳಿಯಿತು, ಎಂಬುದಾಗಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಅವರು 14 ನೇ ‘ಇಂಟರ್‌ನ್ಯಾಶನಲ್ ಕಾಂಗ್ರೆಸ್ ಆಫ್ ಸೋಷಿಯಲ್ ಫಿಲಾಸಫಿ ಕಾನ್ಫರೆನ್ಸ್’ ಹಾಗೂ ೮ನೇ ‘ಇಂಟರ್‌ನ್ಯಾಶನಲ್ ಕಾಂಗ್ರೆಸ್ ಆಫ್ ಯೋಗಾ ಎಂಡ್ ಸ್ಪಿರಿಚುವಲ್ ಸೈನ್ಸ್ ಕಾನ್ಫರೆನ್ಸ್’ ಇವು ಜಂಟಿಯಾಗಿ ಆಯೋಜಿಸಿದ್ದ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತನ್ನು ಹುಬ್ಬಳ್ಳಿಯ ‘ಈಶ್ವರೀಯ ವಿಶ್ವವಿದ್ಯಾಲಯ’ದಲ್ಲಿ ಆಯೋಜಿಸಲಾಗಿತ್ತು.

ಶ್ರೀ. ಶಾನ್ ಕ್ಲಾರ್ಕ್

ಶ್ರೀ. ಶಾನ್ ಕ್ಲಾರ್ಕ್ ಇವರು ಈ ವೇಳೆ ಮಾತನಾಡುತ್ತಾ, ಯಜ್ಞವು ವಾತಾವರಣವನ್ನು ಆಧ್ಯಾತ್ಮಿಕವಾಗಿ ಶುದ್ಧೀಕರಿಸುತ್ತದೆಯೇ ? ಹಾಗಿದ್ದರೆ, ಎಷ್ಟು ಪ್ರಮಾಣದಲ್ಲಿ ?, ಈ ಶೋಧಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಈ ಶೋಧಪ್ರಬಂಧದ ಲೇಖಕರಾಗಿದ್ದೂ ಶ್ರೀ. ಕ್ಲಾರ್ಕ್ ಸಹಲೇಖಕರಾಗಿದ್ದಾರೆ. ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ವೈಜ್ಞಾನಿಕ ಪರಿಷತ್ತುಗಳಲ್ಲಿ ಮಾಡಿದ 92 ನೇ ಪ್ರಸ್ತುತಿಯಾಗಿದೆ. ಶ್ರೀ. ಕ್ಲಾರ್ಕ್ ಅವರು ‘ಆಧ್ಯಾತ್ಮಿಕ ಸಂಶೋಧನಾ ಕೇಂದ್ರ’ದಲ್ಲಿ 2020 ರ ಜನವರಿಯಲ್ಲಿ ನಡೆಸಿದ 6 ವಿಭಿನ್ನ ಯಜ್ಞಗಳಿಂದ ಆಧ್ಯಾತ್ಮಿಕ (ಸ್ಪಂದನ) ಮಟ್ಟದಲ್ಲಾದ ಪರಿಣಾಮಗಳನ್ನು ಅಧ್ಯಯನ ಮಾಡಿದರು. ಇದಕ್ಕಾಗಿ ಯಜ್ಞಗಳ ಮೊದಲು ಮತ್ತು ನಂತರ ನಡೆಸಲಾದ ವಿವಿಧ ಪರೀಕ್ಷೆಗಳನ್ನು ಈ ಸಮಯದಲ್ಲಿ ವಿವರವಾಗಿ ತಿಳಿಸಿದರು.

ಮೊದಲ ಪರೀಕ್ಷೆಯಲ್ಲಿ ಯಜ್ಞಸ್ಥಳದಿಂದ 16 ಕಿ.ಮೀ. ದೂರದಲ್ಲಿರುವ ಸಾಧನೆ ಮಾಡುವ ಮತ್ತು ಸಾಧನೆ ಮಾಡದಿರುವ ನೆರೆಹೊರೆಯವರ ಮನೆಗಳಲ್ಲಿ ಮಣ್ಣು, ನೀರು ಮತ್ತು ಗಾಳಿಯ ಮಾದರಿಗಳನ್ನು ತೆಗೆದುಕೊಳ್ಳಲಾಯಿತು. ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಸಹಾಯದಿಂದ ಈ ಮಾದರಿಗಳನ್ನು ಪರೀಕ್ಷಿಸಲಾಯಿತು. ಯಜ್ಞದ ಮೊದಲು ಸಾಧನೆ ಮಾಡದವರ ಮನೆಯಲ್ಲಿ ಮೂರೂ ಮಾದರಿಗಳಲ್ಲೂ ನಕಾರಾತ್ಮಕ ಶಕ್ತಿ ದೊಡ್ಡ ಪ್ರಮಾಣದಲ್ಲಿತ್ತು. ಸಕಾರಾತ್ಮಕ ಶಕ್ತಿ ಇರಲಿಲ್ಲ. ೩ ಯಜ್ಞಗಳ ನಂತರ ಸಾಧನೆ ಮಾಡುವ ಸಾಧಕರ ಮನೆಯಲ್ಲಿ ಮಣ್ಣು, ನೀರು ಮತ್ತು ಗಾಳಿ ಇವುಗಳಲ್ಲಿ ಸಕಾರಾತ್ಮಕತೆ ಬಹಳವಾಗಿ ಹೆಚ್ಚಾಯಿತು. ತದ್ವಿರುದ್ಧ ಸಾಧನೆ ಮಾಡದವರ ಮನೆಯಲ್ಲಿ ಮಣ್ಣು, ನೀರು ಮತ್ತು ಗಾಳಿಯಲ್ಲಿ ಸಕಾರಾತ್ಮಕತೆಯು ಸ್ವಲ್ಪಪ್ರಮಾಣದಲ್ಲಿ ಹೆಚ್ಚಳವಾಯಿತು; ಆದರೆ ಗಾಳಿಯ ಮಾದರಿಗಳು ಮಣ್ಣು ಮತ್ತು ನೀರಿನ ಮಾದರಿಗಳ ತುಲನೆಯಲ್ಲಿ ಯಜ್ಞದಿಂದ ಪ್ರಕ್ಷೇಪಿತವಾಗಿದ್ದ ಸಕಾರಾತ್ಮಕತೆಯನ್ನು ಗ್ರಹಿಸಿಕೊಳ್ಳುವ ಸಾಮರ್ಥ್ಯ ಹೆಚ್ಚು ಇತ್ತು ಎಂಬುದು ಗಮನಕ್ಕೆ ಬಂದಿತು. ಸಾಧನೆ ಮಾಡುವವರ ಮನೆಯಲ್ಲಿನ ಗಾಳಿಯ ಮಾದರಿಗಳಲ್ಲಿ ಸಕಾರಾತ್ಮಕತೆಯ ಪ್ರಭಾವಳಿಯು (ಯಜ್ಞದ ಮೊದಲು 0.54 ಮೀ) ಹೆಚ್ಚಾಗಿ 15.06 ಮೀಟರ ಆಗಿತ್ತು. ಇದು ಶೇ.2688 ರಷ್ಟು ಏರಿಕೆಯಾಗಿದೆ.

ಮುಂಬಯಿ, ವಾರಣಾಸಿ ಮತ್ತು ಜರ್ಮನಿಯಲ್ಲಿನ ‘ಆಧ್ಯಾತ್ಮಿಕ ಸಂಶೋಧನಾ ಕೇಂದ್ರ’ಗಳ ಯಜ್ಞದ ಮೊದಲು ಮತ್ತು ನಂತರದ ಛಾಯಾಚಿತ್ರಗಳ ಇದೇ ರೀತಿಯ ಅಧ್ಯಯನ ಮಾಡಿದಾಗ ಪ್ರತಿಯೊಂದು ಯಜ್ಞದ ನಂತರ, ಛಾಯಾಚಿತ್ರಗಳಲ್ಲಿ ಸಕಾರಾತ್ಮಕತೆ ಹೆಚ್ಚಾದರೆ, ನಕಾರಾತ್ಮಕತೆ ಕಡಿಮೆಯಾಗಿದೆ ಎಂಬುದು ಗಮನಕ್ಕೆ ಬಂದಿತು. ಜರ್ಮನಿಯ ಕೇಂದ್ರದ ಛಾಯಾಚಿತ್ರಗಳಲ್ಲಿ ಅತಿಹೆಚ್ಚು ಶೇ. 1330 ರಷ್ಟು ಹೆಚ್ಚಳ ವನ್ನು ದಾಖಲಿಸಲಾಗಿದೆ. ಈ ಸಂಶೋಧನೆಯಿಂದ ಯಜ್ಞದ ಲಾಭ ಪಡೆಯುವಲ್ಲಿ ‘ಅಂತರ’ಕ್ಕೆ ಯಾವುದೇ ಮಿತಿಯಿಲ್ಲ ಎಂಬುದು ಸ್ಪಷ್ಟವಾಗಿದೆ.

ಶ್ರೀ. ಕ್ಲಾರ್ಕ್ ತಮ್ಮ ಮಾತನ್ನು ಮುಂದುವರೆಸುತ್ತಾ, ಯಜ್ಞದಿಂದ ಪರಿಸರ ಕಲುಷಿತಗೊಳ್ಳುತ್ತವೆ ಎಂಬ ತಪ್ಪು ಕಲ್ಪನೆಯಾಗಿದೆ. ಪ್ರತ್ಯಕ್ಷದಲ್ಲಿ ಯಜ್ಞವು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದು ವಾತಾವರಣವನ್ನು ಸ್ಥೂಲ ಮತ್ತು ಸೂಕ್ಷ್ಮದಿಂದ ಆಧ್ಯಾತ್ಮಿಕ ಮಟ್ಟಗಳಿಗೆ ಶುದ್ಧಗೊಳಿಸುತ್ತದೆ. ಹಾಗೆಯೇ, ನಾವು ಸಾಧನೆ ಮಾಡಿದರೆ, ಯಜ್ಞಗಳಲ್ಲಿ ಸಕಾರಾತ್ಮಕತೆಯನ್ನು ಗ್ರಹಣ ಮಾಡಿಕೊಳ್ಳುವ ನಮ್ಮ ಸಾಮರ್ಥ್ಯವು ಹೆಚ್ಚಾಗುತ್ತದೆ. ಅದರಂತೆ ಮಣ್ಣು, ನೀರು ಮತ್ತು ಗಾಳಿಯು ಸಕಾರಾತ್ಮಕದಿಂದ ತುಂಬಿಕೊಳ್ಳುತ್ತದೆ, ಎಂದು ಕಂಡುಬಂದಿದೆ. ಇದರಿಂದ ಯಜ್ಞದ ಆಧ್ಯಾತ್ಮಿಕ ಶಕ್ತಿಯು ಜಗತ್ತಿನ ಆಧ್ಯಾತ್ಮಿಕ ಸಕಾರಾತ್ಮಕತೆಯನ್ನು ಹೆಚ್ಚಿಸುವ ಪ್ರಬಲ ಸಾಧನವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ, ಎಂದರು. ಸಮಾರೋಪದಲ್ಲಿ ಶ್ರೀ. ಶಾನ್ ಕ್ಲಾರ್ಕ್ ಇವರು ಮಾತನಾಡುತ್ತಾ, ಸದ್ಯ ಜಗತ್ತಿನಾದ್ಯಂತ ರಜ-ತಮ ಪ್ರಚಂಡವಾಗಿ ಹೆಚ್ಚಾಗಿದೆ, ಇದು ‘ಆಧ್ಯಾತ್ಮಿಕ ಮಾಲಿನ್ಯ’ವೇ ಆಗಿದೆ. ಇದು ಜಗತ್ತಿನಲ್ಲಿ ಸೂಕ್ಷ್ಮ ಮಟ್ಟದಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆ, ಅದರ ಪರಿಣಾಮವು ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ವಿಪತ್ತುಗಳಿಗೆ ಕಾರಣವಾಗುತ್ತದೆ. ಯಜ್ಞವು ಆಧ್ಯಾತ್ಮಿಕ ಮಾಲಿನ್ಯವನ್ನು ಕಡಿಮೆ ಮಾಡುವ ಅದ್ವಿತೀಯ ಸಾಧನವಾಗಿದೆ; ಆದರೆ ಯಜ್ಞದ ಸಕಾರಾತ್ಮಕತೆಯನ್ನು ಗ್ರಹಣ ಮಾಡುವುದು ಮತ್ತು ಅದನ್ನು ಯಥಾಸ್ಥಿತಿಯಲ್ಲಿಡಲು ಸಮಾಜವು ಸಾತ್ತ್ವಿಕ ಜೀವನಶೈಲಿ ಅಂಗೀಕರಿಸುವುದು ಮತ್ತು ಸಾಧನೆ ಮಾಡುವುದು ಮುಖ್ಯವಾಗಿದೆ.