ಅನಧಿಕೃತ ಬೊಂಗಾಗಳನ್ನು ತೆರೆವು ಮಾಡುವಂತೆ ನ್ಯಾಯಾಲಯದ ಆದೇಶವಿದ್ದು, ಅದನ್ನು ಪಾಲಿಸದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! – ಶ್ರೀ. ಸಂತೋಷ ಪಾಚಲಗ, ಅರ್ಜಿದಾರರು

‘ಮಸೀದಿಗಳಲ್ಲಿನ ಬೊಂಗಾಗಳಿಗೆ ನ್ಯಾಯಾಲಯದ ಆದೇಶ ಏಕೆ ಅನ್ವಯಿಸುವುದಿಲ್ಲ ?’ ಈ ಕುರಿತು ವಿಶೇಷ ಸಂವಾದ !

ಅನಧಿಕೃತ ಬೊಂಗಾಗಳ ವಿರುದ್ಧ ನಾವು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದಾಗಿ, ಮುಂಬಯಿ ಉಚ್ಚ ನ್ಯಾಯಾಲಯವು ೨೦೧೬ ರಲ್ಲಿ ಮಹಾರಾಷ್ಟ್ರದ ಎಲ್ಲಾ ಧಾರ್ಮಿಕ ಸ್ಥಳಗಳಿಂದ ಅನಧಿಕೃತ ಬೊಂಗಾಗಳನ್ನು ತೆಗೆದುಹಾಕಲು ಸ್ಪಷ್ಟ ಆದೇಶವನ್ನು ನೀಡಿತು, ಆದರೆ ಮುಂಬಯಿ ಮತ್ತು ಮಹಾರಾಷ್ಟ್ರ ಪೊಲೀಸರು ಅದನ್ನು ಜಾರಿಗೊಳಿಸಲಿಲ್ಲ. ಆದ್ದರಿಂದ ೨೦೧೮ ರಲ್ಲಿ, ನಾವು ಅವರ ವಿರುದ್ಧ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಪುನಃ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದೆವು. ಮಾಹಿತಿ ಹಕ್ಕು ಕಾಯ್ದೆಯಡಿ ಮಹಾರಾಷ್ಟ್ರ ಪೊಲೀಸರಲ್ಲಿ ಅನಧಿಕೃತ ಬೊಂಗಾ ಮತ್ತು ಧ್ವನಿವರ್ಧಕಗಳ ಬಗ್ಗೆ ಮಾಹಿತಿ ಕೇಳಿದಾಗ, ಕೇವಲ ಶೇ. ೪೦ ರಷ್ಟು ಜನರು ಮಾಹಿತಿ ನೀಡಿದರು. ಉಳಿದ ಪೊಲೀಸರು ಮಾಹಿತಿ ನೀಡಲು ಮೀನಮೇಷ ಎಣಿಸಿದರು. ಶೇ. ೪೦ ರಷ್ಟರಲ್ಲಿ ೨ ಸಾವಿರದ ೯೦೪ ಧ್ವನಿವರ್ಧಕಗಳು ಅನಧಿಕೃತವಾಗಿವೆ ಮತ್ತು ಅವುಗಳಲ್ಲಿ ೧೭೬೬ ಬೋಂಗಾಗಳು ಮಸೀದಿಗಳ ಮತ್ತು ಮದರಸಾಗಳಲ್ಲಿವೆ. ಮುಂಬಯಿನಲ್ಲಿ ಅದರ ಸಂಖ್ಯೆ ೯೦೦ಕ್ಕೂ ಹೆಚ್ಚಿದೆ. ವಾಸ್ತವದಲ್ಲಿ, ಈ ಸಂಖ್ಯೆ ಮೂರು ಪಟ್ಟು ಇರಬಹುದು. ಕೊರೋನಾ ಕಾಲದಲ್ಲಿ ಈ ಅರ್ಜಿ ನಡೆಯಲಿಲ್ಲ; ಆದರೆ ಜನತೆಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಆದಷ್ಟು ಬೇಗ ಆರಂಭಿಸಿ ನಿಯಮ ಉಲ್ಲಂಘಿಸಿದ ಮತ್ತು ನ್ಯಾಯಾಲಯದ ಆದೇಶ ಪಾಲಿಸದ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ನವಿ ಮುಂಬಯಿಯ ಅರ್ಜಿದಾರ ಶ್ರೀ. ಸಂತೋಷ ಪಾಚಲಗ ಇವರು ಆಗ್ರಹಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಮಸೀದಿಯ ಮೇಲಿನ ಬೊಂಗಾಗಳ ಮೇಲೆ ನ್ಯಾಯಾಲಯದ ಆದೇಶವನ್ನು ಏಕೆ ಜಾರಿಗೊಳಿಸಲಿಲ್ಲ ?’ ಈ ವಿಶೇಷ ಆನ್‌ಲೈನ್ ಸಂವಾದದಲ್ಲಿ ಮಾತನಾಡುತ್ತಿದ್ದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಗೌರವ್ ಗೋಯಲ್ ಇವರು ಮಾತನಾಡುತ್ತಾ, ಮಸೀದಿಯ ಅನಧಿಕೃತ ಬೊಂಗಾಗಳ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯವು ಆದೇಶಿಸಿದ ನಂತರ ಕ್ರಮ ಜರುಗಿಸುವುದು ಆವಶ್ಯಕವಾಗಿದೆ; ಆದರೆ ಹಾಗೆ ಆಗದಿದ್ದರಿಂದ ಇದು ನ್ಯಾಯಾಂಗ ನಿಂದನೆಯಾಗಿದೆ. ಯಾವ ಸ್ಥಳದಲ್ಲಿ ಅನಧಿಕೃತ ಬೊಂಗಾಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲವೋ ಅಲ್ಲಿ ನ್ಯಾಯಾಲಯವು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಮಸೀದಿಗಳ ಬೊಂಗಾದಿಂದ ದೊಡ್ಡ ಪ್ರಮಾಣದಲ್ಲಿ ಧ್ವನಿಮಾಲಿನ್ಯವಾಗುತ್ತಿದೆ. ಅದೇ ರೀತಿ ಎಲ್ಲ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ನರೇಂದ್ರ ಸುರ್ವೆ ಇವರು ಮಾತನಾಡುತ್ತಾ, ಮುಸಲ್ಮಾನರಲ್ಲಿ ವಹಾಬಿ, ಸುನ್ನಿ, ಶಿಯಾ, ಸಲಾಫಿ ಹೀಗೆ ಹಲವು ಜಾತಿಗಳಿದ್ದು, ಅವರು ಪರಸ್ಪರರ ಮಸೀದಿಗೆ ಹೋಗುವುದಿಲ್ಲ ಈ ಕಾರಣದಿಂದಾಗಿ, ಒಂದು ಅಜಾನ್ ಕೊನೆಗೊಳ್ಳುತ್ತಿದ್ದಂತೆ ಇನ್ನೊಂದು ಆರಂಭವಾಗುತ್ತದೆ. ಇದರಿಂದಾಗಿ, ಐದು ಬಾರಿ ಮಾತ್ರವಲ್ಲ, ದಿನಕ್ಕೆ ೨೫ ಕ್ಕೂ ಹೆಚ್ಚು ಬಾರಿ ಅನಧಿಕೃತ ಆಜಾನ ಮುಸ್ಲಿಮೇತರರು ಅನಗತ್ಯವಾಗಿ ಕೇಳಬೇಕಾಗಿದೆ. ಇದರಿಂದ ಬಹುಸಂಖ್ಯಾತ ಹಿಂದೂ ಸಮಾಜದ ಮೇಲಾದ ಅನ್ಯಾಯವಾಗಿದೆ. ಅದರಲ್ಲಿ ‘ನಮ್ಮ ಅಲ್ಲಾನೇ ಸರ್ವಶ್ರೇಷ್ಠನಾಗಿದ್ದಾನೆ !’ ಎಂದು ಹೇಳುವುದು ಇತರ ಧರ್ಮದವರ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ. ರಾಜಕೀಯ ನಾಯಕರು ಮುಸಲ್ಮಾನರನ್ನು ಓಲೈಸುವ ಸಲುವಾಗಿ ಅನಧಿಕೃತ ಬೊಂಗಾಗಳ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ ಎಂದು ಹೇಳಿದರು.