ಇದಕ್ಕೆ ಹೊಣೆಯಾದವರಿಗೆ ಶಿಕ್ಷೆಯಾಗಲೇ ಬೇಕು !

೧. ಪೊಲೀಸರ ಮೇಲಿನ ಇಂತಹ ದಾಳಿಗಳು ಯಾವಾಗ ನಿಲ್ಲುವುವು ?

ಸಿಕಂದರಾ (ಉತ್ತರಪ್ರದೇಶ) ಇಲ್ಲಿನ ದರ್ಗಾವೊಂದರಲ್ಲಿ ಚಾದರ ಹೊದಿಸಲು ಗುಂಪಾಗಿ ಹೋಗಿತ್ತಿದ್ದಾರೆಂದು ಅವರನ್ನು ತಡೆದ ಪ್ರಕರಣದಲ್ಲಿ ಆ ಸಮೂಹವು ಪೊಲೀಸರ ಮೇಲೆ ಕಲ್ಲು, ಇಟ್ಟಿಗೆ, ಕೋಲುಗಳ ಮೂಲಕ ದಾಳಿ ನಡೆಸಿತು. ಈ ದಾಳಿಯಲ್ಲಿ ಪೊಲೀಸರು ಸೇರಿದಂತೆ ಐವರು ಗಾಯಗೊಂಡಿದ್ದಾರೆ.

೨. ದೇಶದಿಂದ ಜಾತಿವ್ಯವಸ್ಥೆ ಯಾವಾಗ ನಿರ್ಮೂಲನೆಯಾಗುವುದು ?

ಮಹಾರಾಷ್ಟ್ರದ ಅಮರಾವತಿಯ ಪಕ್ಷೇತರ ಸಂಸದ ನವನೀತ್ ರಾಣಾ ಅವರ ಜಾತಿ ಪ್ರಮಾಣಪತ್ರವನ್ನು ಮುಂಬಯಿ ಉಚ್ಚ ನ್ಯಾಯಾಲಯವು ರದ್ದುಪಡಿಸಿದೆ ಮತ್ತು ೨ ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿದೆ. ಶಿವಸೇನೆ ನಾಯಕ ಆನಂದರಾವ್ ಅಡಸೂಳ ಅವರು ಜಾತಿ ಪ್ರಮಾಣಪತ್ರವನ್ನು ಆಕ್ಷೇಪಿಸಿ ಅರ್ಜಿಯನ್ನು ದಾಖಲಿಸಿದ್ದರು.

೩. ಇದಕ್ಕೆ ಹೊಣೆಯಾದವರಿಗೆ ಶಿಕ್ಷೆಯಾಗಲೇ ಬೇಕು !

ತಮಿಳುನಾಡು ರಾಜ್ಯದಲ್ಲಿ ೪೭ ಸಾವಿರ ಎಕರೆ ದೇವಸ್ಥಾನದ ಭೂಮಿಯು ಕಣ್ಮರೆಯಾಗಿರುವ ಬಗ್ಗೆ ವಿವರಣೆ ನೀಡುವಂತೆ ಮದ್ರಾಸ ಉಚ್ಚ ನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ತಿಳಿಸಿದೆ. ದೇವಸ್ಥಾನಗಳ ಭೂಮಿ ೫ ಲಕ್ಷ ೨೫ ಸಾವಿರ ಎಕರೆಗಳಿಂದ ೪ ಲಕ್ಷ ೭೮ ಸಾವಿರ ಎಕರೆಯಷ್ಟಿದೆ.

೪. ದೇವಸ್ಥಾನಗಳ ಸರಕಾರೀಕರಣವನ್ನೂ ರದ್ದುಪಡಿಸಿರಿ !

ದೇವಸ್ಥಾನಗಳಿಗೆ ದೇಣಿಗೆ ನೀಡುವ ಭಕ್ತರ ಇಚ್ಛೆಯ ವಿರುದ್ಧವಾಗಿ ದೇವಸ್ಥಾನಗಳ ಭೂಮಿಯನ್ನು ಯಾರಿಗೂ ನೀಡಬಾರದು. ಭೂಮಿಯು ಯಾವಾಗಲೂ ದೇವಸ್ಥಾನದ ಬಳಿ ಇರುವುದು. ದೇವಸ್ಥಾನದ ಹಣವನ್ನು ದೇವಸ್ಥಾನಗಳಿಗೆ ಮಾತ್ರ ವೆಚ್ಚ ಮಾಡಬೇಕೆಂದು ಮದ್ರಾಸ ಉಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ.

೫. ‘ಲವ್ ಜಿಹಾದ್’ನ ಪರಿಣಾಮಗಳನ್ನು ತಿಳಿಯಿರಿ !

ಹಿಂದೂ ಪ್ರೇಯಸಿ ಅತಿರಾ ಇವಳು ತನ್ನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ಇಷ್ಟಪಡದ ಕಾರಣ ಶಹನವಾಜ್ ಅವಳ ಮೇಲೆ ಸೀಮೆಎಣ್ಣೆ ಸುರಿಸಿ ಜೀವಂತವಾಗಿ ಸುಟ್ಟುಹಾಕಿದ್ದಾನೆ. ಅತಿರಾ ಮತ್ತು ಶಹನವಾಜ್ ಇಬ್ಬರೂ ‘ಲಿವ್ ಇನ್ ರಿಲೇಶನಶಿಪ್’ ನಲ್ಲಿ ವಾಸಿಸುತ್ತಿದ್ದರು.

೬. ‘ಟೈಮ್ ನಿಯಕಾಲಿಕೆಯ ಹಿಂದೂದ್ವೇಷವನ್ನು ತಿಳಿಯಿರಿ !

ಅಮೆರಿಕಾದ ನಿಯತಕಾಲಿಕೆ ‘ಟೈಮ್ ಇದು ಅಪಪ್ರಚಾರ ಮಾಡಿದ್ದರಿಂದ ಸನಾತನ ಪ್ರಭಾತ ನಿಯತಕಾಲಿಕೆ, ಹಿಂದೂ ಜನಜಾಗೃತಿ ಸಮಿತಿ ಇತ್ಯಾದಿ ಫೇಸ್‌ಬುಕ್ ಪುಟಗಳಿಗೆ ಫೇಸ್‌ಬುಕ್ ನಿರ್ಬಂಧ ಹೇರಿದೆ ಎಂಬುದು ಬೆಳಕಿಗೆ ಬಂದಿದೆ.

೭. ಡಿಎಂಕೆ ಸರಕಾರವನ್ನು ವಿರೋಧಿಸಿ !

೧೦೦ ದಿನಗಳಲ್ಲಿ ರಾಜ್ಯದ ದೇವಾಲಯಗಳಲ್ಲಿ ೨೦೦ ಬ್ರಾಹ್ಮಣೇತರ ಪುರೋಹಿತರನ್ನು ನೇಮಕ ಮಾಡುವುದಾಗಿ ತಮಿಳುನಾಡಿನ ಡಿಎಂಕೆ ಸರಕಾರವು ಘೋಷಿಸಿದೆ. ಮುಂದೆ ಇಂತಹ ನೇಮಕಾತಿಗಳನ್ನು ಸರಕಾರೀಕರಣಗೊಂಡ ೩೬ ಸಾವಿರ ದೇವಸ್ಥಾನಗಳಲ್ಲಿ ಮಾಡಲಾಗುವುದು.