ಕೊರೋನಾ ಮಹಾಮಾರಿಯನ್ನು ಮಾನಸಿಕ ಹಾಗೂ ಆಧ್ಯಾತ್ಮಿಕಸ್ತರದಲ್ಲಿ ಎದುರಿಸುವುದು ಹೇಗೆ ಇದರ ಕುರಿತು ಸನಾತನದ ಸಂತರ ಅಮೂಲ್ಯ ಸತ್ಸಂಗ !

ಆನ್‌ಲೈನ್ ಮೂಲಕ ೧೯,೦೦೦ ಕ್ಕೂ ಅಧಿಕ ಜನರ ವೀಕ್ಷಣೆ !

ಪೂ. ರಮಾನಂದ ಗೌಡ

ಕೊರೋನಾ ಮಹಾಮಾರಿಯನ್ನು ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಎದುರಿಸುವುದು ಹೇಗೆ ಈ ಕುರಿತು ಸನಾತನ ಸಂಸ್ಥೆಯ ವತಿಯಿಂದ ೨೩ ಮೇ ರವಿವಾರದಂದು ಆನ್‌ಲೈನ್ ಮೂಲಕ ವಿಶೇಷ ಸತ್ಸಂಗವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜನೀಯ ರಮಾನಂದ ಗೌಡ ಇವರು ಈ ಭೀಕರ ಸ್ಥಿತಿಯು ಬರಲು ಕಾರಣವೇನು ? ಇಂತಹ ಕಾಲದಲ್ಲಿ ಏನು ಮಾಡುವುದು ಅವಶ್ಯಕವಿದೆ ? ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಿದರು. ಈ ಸತ್ಸಂಗವನ್ನು೧೯,೦೦೦ ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ !

ಪೂಜ್ಯ ರಮಾನಂದ ಗೌಡ ಇವರು ಮಾತನಾಡುತ್ತಾ ದೇಶದಲ್ಲಿ ಕೊರೋನಾ ಮಹಾಮಾರಿಯ ಸಂಕಟದಿಂದ ಅನೇಕ ಜನರಲ್ಲಿ ಚಿಂತೆ, ನಿರಾಶೆ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಮನಸ್ಸನ್ನು ಸ್ಥಿರವಾಗಿರಿಸಲು ಸ್ವಯಂಸೂಚನೆ ನೀಡಬೇಕು. ಇದರ ಜೊತೆಗೆ ಸರ್ಕಾರ ಹೇಳಿದ ಎಲ್ಲಾ ಪ್ರಕಾರದ ನಿಯಮಗಳನ್ನು ಕಟ್ಟುನಿಟ್ಟುಗಿ ಪಾಲನೆ ಮಾಡಬೇಕು. ಅಗ್ನಿಹೋತ್ರ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತುಳಿಸಿ ರಸ ಸೇವನೆ ಮುಂತಾದ ಉಪಾಯಗಳನ್ನು ಮಾಡಬೇಕು. ಇದರ ಜೊತೆಗೆ ಧರ್ಮಾಚರಣೆ ಹಾಗೂ ಸಾಧನೆಯನ್ನು ಮಾಡಬೇಕು ಎಂದು ಹೇಳಿದರು.

ಸದ್ಯ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವೆ ನಡೆಯುತ್ತಿರುವ ಸಂಘರ್ಷ ಗಮನಿಸುವಾಗ ಇದು ಮೂರನೇ ಮಹಾಯುದ್ಧಕ್ಕೆ ನಾಂದಿಯಾಗಬಹುದು ಎಂಬ ಲಕ್ಷಣಗಳೂ ಕಾಣಿಸುತ್ತಿವೆ, ಇಂದು ಈ ರೀತಿಯ ಅನೇಕ ಸಮಸ್ಯೆಗಳು ನಮಗೆದುರಾಗಿವೆ, ಇದಕ್ಕೆ ಮೂಲ ಕಾರಣವೆಂದರೆ ಸದ್ಯ ಜನರಲ್ಲಿ ಸ್ವಾರ್ಥ ಹೆಚ್ಚಾಗಿದೆ, ಅದರಿಂದ ಪರಿಸರ ನಾಶ, ಅಧರ್ಮಾಚರಣೆ, ರಜ-ತಮ ವಾತವರಣ ನಿರ್ಮಾಣವಾಗಿದೆ, ಕೆಲವರು ಮಾಡುವ ಪಾಪದ ಕೃತ್ಯಗಳಿಗೆ ಇಡೀ ಸಮಾಜ ಬಲಿಯಾಗುತ್ತಿದೆ. ಇದರಿಂದ ಸಮಷ್ಟಿ ಪ್ರಾರಬ್ಧ ನಿರ್ಮಾಣವಾಗಿ ಈ ರೀತಿಯ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ ಮತ್ತು ಇದರಲ್ಲಿ ‘ಒಣ ಕಟ್ಟಿಗೆಯೊಂದಿಗೆ ಹಸಿ ಕಟ್ಟಿಗೆಗಳು ಸುಡುತ್ತವೆ’ ಎಂಬಂತೆ ಕೆಲವು ದುರ್ಜನರು ಮಾಡುವ ಕೆಟ್ಟ ಕರ್ಮಗಳಿಗೆ ಸಜ್ಜನರೂ ಬಲಿಯಾಗುತ್ತಾರೆ. ಇದೆಲ್ಲದರಿಂದ ರಕ್ಷಣೆಯಾಗಬೇಕೆಂದರೆ ನಮ್ಮಲ್ಲಿ ಸಾತ್ವಿಕತೆಯು ನಿರ್ಮಾಣವಾಗಬೇಕು ಮತ್ತು ಅದಕ್ಕಾಗಿ ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಈ ಸತ್ಸಂಗದ ಪೂರ್ಣ ವಿಡಿಯೋವನ್ನು ತಾವು ಅವಶ್ಯವಾಗಿ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು, ಈ ಕಾರ್ಯಕ್ರಮವು Youtube.com/HJSKarnataka ಈ ಚಾನೆಲ್‌ನಲ್ಲಿ ತಮಗೆ ವೀಕ್ಷಿಸಲು ಸಿಗುವುದು, ತಾವೂ ಈ ಕಾರ್ಯಕ್ರಮದ ವೀಕ್ಷಣೆ ಮಾಡಿ ಅದರ ಲಾಭ ಪಡೆದುಕೊಳ್ಳಬೇಕಾಗಿ ವಿನಂತಿ.