ಗೋವಾದ ರಾಮನಾಥಿಯ ಸನಾತನದ ಆಶ್ರಮದ ಧ್ಯಾನಮಂದಿರದಲ್ಲಿ ಅನೇಕ ದೇವತೆಗಳನ್ನು ಸ್ಥಾಪಿಸಿರುವುದರ ಹಿಂದಿನ ವಿಶ್ಲೇಷಣೆ

ನಾವೀನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಸಾಧಕರ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಪ್ರೀತಿಸ್ವರೂಪ ವ್ಯಾಪಕ ದೃಷ್ಟಿಕೋನ !

ಕು. ಪ್ರಿಯಾಂಕಾ ಲೋಟಲೀಕರ

೧. ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮವು ಹಿಂದೂ ರಾಷ್ಟ್ರದ ಪ್ರತಿಕೃತಿಯಾಗಿದೆ

‘ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮವು ಅಸ್ತಿತ್ವಕ್ಕೆ ಬರುವ ಒಂದು ದಶಕದ ಮೊದಲು ಪರಾತ್ಪರ ಗುರು ಡಾ. ಆಠವಲೆಯವರ ಗುರುಗಳಾದ ಪ.ಪೂ.ಭಕ್ತರಾಜ ಮಹಾರಾಜ ರು ೧೯೯೫ ರಲ್ಲಿ ಈ ಆಶ್ರಮವು ‘ಸಂಪೂರ್ಣ ಜಗತ್ತಿಗೆ ಹಿಂದೂ ಧರ್ಮದ ವಿಶ್ವದೀಪವಾಗುವುದು, ಎಂದು ಕೃಪಾಶೀರ್ವಾದ ಮಾಡಿದ್ದರು. ಪರಾತ್ಪರ ಗುರು ಡಾ. ಆಠವಲೆಯವರು ಗೋವಾದ ರಾಮನಾಥಿಯಲ್ಲಿ ‘ಹಿಂದೂ ರಾಷ್ಟ್ರದ ಪ್ರತಿಕೃತಿ ಎಂದು ಸನಾತನದ ಆಶ್ರಮವನ್ನು ನಿರ್ಮಿಸಿದರು. ಅನೇಕ ಸಂತರು ಮತ್ತು ದೇವತೆಗಳು ‘ರಾಮನಾಥಿಯ ಸನಾತನದ ಆಶ್ರಮವು ಒಂದು ತೀರ್ಥ ಕ್ಷೇತ್ರವಾಗಿದೆ, ಎಂದು ಗೌರವೋದ್ಗಾರವನ್ನು ತೆಗೆದಿದ್ದಾರೆ. ಇಲ್ಲಿನ ಪ್ರತಿಯೊಂದು ಚಿಕ್ಕ ಚಿಕ್ಕ ವಿಷಯವನ್ನೂ ಆಧ್ಯಾತ್ಮಿಕ ಸ್ತರದಲ್ಲಿ ವಿಚಾರ ಮಾಡಿ ಪರಾತ್ಪರ ಗುರು ಡಾ. ಆಠವಲೆಯವರು ಈ ಆಶ್ರಮವನ್ನು ಆದರ್ಶವನ್ನಾಗಿ ಮಾಡಿದ್ದಾರೆ. ಇದರ ಒಂದು ಉದಾಹರಣೆ ಎಂದರೆ ರಾಮನಾಥಿಯ ಸನಾತನದ ಆಶ್ರಮದ ಧ್ಯಾನಮಂದಿರ.

೨. ಸಂಪ್ರದಾಯಗಳ ಆಶ್ರಮಗಳಲ್ಲಿ ಕೇವಲ ಅವರ ಉಪಾಸ್ಯದೇವತೆಯ ಚಿತ್ರ ಅಥವಾ ಮೂರ್ತಿ ಇರುತ್ತದೆ

ಹಿಂದೂ ಧರ್ಮದಲ್ಲಿ ಅನೇಕ ಸಂಪ್ರದಾಯಗಳಿವೆ. ಪ್ರತಿಯೊಂದು ಸಂಪ್ರದಾಯದಲ್ಲಿ  ಆಯಾ ಸಂಪ್ರದಾಯದ ಉಪಾಸ್ಯ ದೇವತೆಯ ಉಪಾಸನೆಯನ್ನು ಮಾಡಲು ಹೇಳಲಾಗುತ್ತದೆ. ಅದಕ್ಕನುಸಾರ ಅವರ ಆಶ್ರಮದಲ್ಲಿ ಅಥವಾ ಮಠದ ದೇವರ ಕೋಣೆಯಲ್ಲಿ ಆಯಾ ದೇವತೆಯ ಚಿತ್ರ ಅಥವಾ ಮೂರ್ತಿ ಇರುತ್ತದೆ. ಆಯಾ  ಸಂಪ್ರದಾಯದ ಪ್ರತಿಯೊಬ್ಬ ವ್ಯಕ್ತಿ ತಮ್ಮ ಸಂಪ್ರದಾಯದಲ್ಲಿ ಹೇಳಿದ ಅದೊಂದೇ ಉಪಾಸನೆಯನ್ನು ಮಾಡುತ್ತಾನೆ.

೩. ‘ಪ್ರತಿಯೊಬ್ಬ ಸಾಧಕನಿಗೆ ಅವನ ಪ್ರಕೃತಿಗನುಸಾರ ಆವಶ್ಯಕ ತತ್ತ್ವದ ಲಾಭವಾಗಬೇಕೆಂಬ ಪ್ರೀತಿ ಸ್ವರೂಪ ವ್ಯಾಪಕ ವಿಚಾರದಿಂದ ಸನಾತನ ಆಶ್ರಮದ ಧ್ಯಾನಮಂದಿರದಲ್ಲಿ ಅನೇಕ ದೇವತೆಗಳಿವೆ

ಸನಾತನ ಸಂಸ್ಥೆಯು ಸಂಪ್ರದಾಯವಾಗಿಲ್ಲ, ಅದು ಹಿಂದೂ ಧರ್ಮಕ್ಕನುಸಾರ ಅಧ್ಯಾತ್ಮಶಾಸ್ತ್ರವನ್ನು ಹೇಳುತ್ತದೆ. ಹಿಂದೂ ಧರ್ಮ ದಲ್ಲಿ ದೇವತೆಗಳ ಕಾರ್ಯಕ್ಕನುಸಾರ ಅವರ ಉಪಾಸನೆಯನ್ನು ಹೇಳಲಾಗಿದೆ. ಈ ಉಪಾಸನೆಯ ಮಾಧ್ಯಮದಿಂದ ಆಯಾ ತತ್ತ್ವವು ಆಯಾ ಉಪಾಸಕನಿಗೆ ಪ್ರಾಪ್ತವಾಗುತ್ತದೆ. ಅನೇಕ ಜಿಜ್ಞಾಸುಗಳು, ಹಿತಚಿಂತಕರು, ಓದುಗರು ಮತ್ತು ಸಾಧಕರು ಆಶ್ರಮದರ್ಶನಕ್ಕಾಗಿ ಹಾಗೂ ಸಾಧನೆಯನ್ನು ಮಾಡಲು ಸನಾತನದ ಆಶ್ರಮಕ್ಕೆ ಬರುತ್ತಾರೆ. ಆಶ್ರಮದ ಧ್ಯಾನಮಂದಿರವನ್ನು ನೋಡಿ ಕೆಲವು ಜನರ ಮನಸ್ಸಿನಲ್ಲಿ ‘ಆಶ್ರಮದ ಧ್ಯಾನಮಂದಿರದಲ್ಲಿ ಅನೇಕ ದೇವ-ದೇವಿಯರ ಚಿತ್ರಗಳು ಅಥವಾ ಮೂರ್ತಿಗಳು ಏಕಿವೆ? ಎಂಬ ವಿಚಾರ ಬರುತ್ತದೆ. ಈ ಸಂದರ್ಭದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ವಿಚಾರ ಅತ್ಯಂತ ಪ್ರೀತಿಸ್ವರೂಪ ಮತ್ತು ವ್ಯಾಪಕವಾಗಿದೆ.

ಅವರು ‘ಅನೇಕದಿಂದ ಏಕಕ್ಕೆ ಬರುವುದು, ಎಂಬ ಸಾಧನೆಯ ಮೂಲಭೂತ ತತ್ತ್ವಕ್ಕನುಸಾರ ಪ್ರಾಥಮಿಕ  ಸ್ತರದಲ್ಲಿ ಸಾಧಕರು ಅನೇಕ ದೇವತೆಗಳ ಪೂಜೆಯನ್ನು ಮಾಡುವುದಕ್ಕಿಂತ, ಅವರಿಗೆ ತಮ್ಮ ತಮ್ಮ ಕುಲದೇವತೆಯ (ಒಂದೇ ದೇವತೆಯ) ಪೂಜೆಯನ್ನು ಮಾಡಲು ಹೇಳುತ್ತಾರೆ. ಸನಾತನದ ಆಶ್ರಮದಲ್ಲಿ ೨೫೦ ಕ್ಕಿಂತ ಹೆಚ್ಚು ಸಾಧಕರು ಸಾಧನೆಯನ್ನು ಮಾಡುತ್ತಿದ್ದಾರೆ. ಸಾಧನೆಯ ಇನ್ನೊಂದು ಮೂಲಭೂತತತ್ತ್ವವೆಂದರೆ ‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನೆಯ ಮಾರ್ಗಗಳು, ಇದಕ್ಕನುಸಾರ ಆಶ್ರಮದಲ್ಲಿ ಸಾಧನೆಯನ್ನು ಮಾಡುತ್ತಿರುವ ಅನೇಕ ಸಾಧಕರ ಉಪಾಸ್ಯದೇವತೆ ಬೇರೆ ಬೇರೆ ಆಗಿರುತ್ತವೆ. ಆದುದರಿಂದ ‘ಪ್ರತಿಯೊಬ್ಬರಿಗೂ ಅವರ ಉಪಾಸ್ಯದೇವತೆಯ ತತ್ತ್ವ ಸಿಗಬೇಕು, ಎಂದು ಸನಾತನ ಆಶ್ರಮದ ಧ್ಯಾನಮಂದಿರದಲ್ಲಿ ಅನೇಕ ದೇವತೆಗಳ ಮಂಡಣೆಯನ್ನು ಮಾಡಲಾಗಿದೆ. ಧ್ಯಾನಮಂದಿರದಲ್ಲಿನ ದೇವತೆಗಳ ರಚನೆಯ ಚಿಕ್ಕ ವಿಷಯದಿಂದ ಪರಾತ್ಪರ ಗುರು ಡಾ. ಆಠವಲೆಯವರು ‘ಪ್ರತಿಯೊಬ್ಬ ಸಾಧಕನ ಆಧ್ಯಾತ್ಮಿಕ ಲಾಭದ ವಿಷಯದಲ್ಲಿ ಎಷ್ಟು ಆಳವಾಗಿ ಮತ್ತು ವ್ಯಾಪಕ ವಿಚಾರ ಮಾಡಿದ್ದಾರೆ, ಎಂಬುದು ಕಂಡು ಬರುತ್ತದೆ. – ಕು. ಪ್ರಿಯಾಂಕಾ ಲೊಟಲೀಕರ, ಸಂಶೋಧನಾ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೨೮.೫.೨೦೨೦)