ಆಪತ್ಕಾಲದ ದೃಷ್ಟಿಯಿಂದ ಮನೆ ಕಟ್ಟುವಾಗ ಗಮನದಲ್ಲಿಡಬೇಕಾದ ಕೆಲವು ಮುಖ್ಯಾಂಶಗಳು

ಶ್ರೀ. ಮಧುಸೂದನ ಕುಲಕರ್ಣಿ

ಕಳೆದ ವಾರದ ಲೇಖನದಲ್ಲಿ ಕೃಷಿಭೂಮಿಯಲ್ಲಿ ಮನೆ ಕಟ್ಟುವಾಗ ಗ್ರಾಮ ಪಂಚಾಯಿತಿಯೊಂದಿಗೆ ‘ಪಟ್ಟಣ ಯೋಜನಾ ಕಚೇರಿ ಅನುಮತಿ ಸಹ ಅಗತ್ಯವಿದೆ, ಕೃಷಿ ಭೂಮಿಯನ್ನು ಖರೀದಿಸುವುದು ಮತ್ತು ಎಲ್ಲರ ಹಕ್ಕುಗಳ ಬಗ್ಗೆ ವಕೀಲರ ಮಾರ್ಗದರ್ಶನ ಪಡೆಯಬೇಕು, ಹೊಸ ಭೂಮಿಯನ್ನು ಖರೀದಿಸುವಾಗ ಹಾಗೂ ಅದರಲ್ಲಿ ಕಟ್ಟಡ ನಿರ್ಮಿಸುವಾಗ ವಾಸ್ತುಶಾಸ್ತ್ರದ ದೃಷ್ಟಿಯಿಂದ ಗಮನದಲ್ಲಿಡ ಬೇಕಾದ ಅಂಶಗಳು, ಅಲ್ಪಾವಧಿಯ ಮತ್ತು ಕನಿಷ್ಠ ವೆಚ್ಚದ ಗ್ರಾಮ ಮನೆ ನೀವು ನಿರ್ಮಿಸಲು ಬಯಸಿದರೆ ಏನು ಮಾಡಬೇಕು ? ಇದರ ಬಗ್ಗೆ ಮಾಹಿತಿ ಓದಿದೆವು. ಈ ವಾರ ನಾವು ಉಳಿದ ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ.

೬ . ಇತರ

ಅ. ಮನೆಯ ಒಳಗಿನ ಬದಿಗೆ ‘ಡ್ರೈ ಡಿಸ್ಟೆಂಪರ್ ಹಾಗೂ ಹೊರಗಿನ ಗೋಡೆಗಳಿಗೆ ‘ಸಿಮೆಂಟ್ ಕಲರ್ ನೀಡಿರಿ.

. ಕೆಳಗಿನ ಜಮೀನಿಗೆ ಕೆಂಪು ಬಣ್ಣದ ಸಿಮೆಂಟಿನಿಂದ ಲೇಪನ ಮಾಡಿರಿ ಅಥವಾ ೧x೧ ಅಡಿಯ ‘ಸಿರಾಮಿಕ್ ನೆಲಹಾಸು ಹಾಗೂ ಒಳಗಿನ ಗೋಡೆಯ ತಳಕ್ಕೆ ೪ ಇಂಚು ಎತ್ತರದ ಸಿರಾಮಿಕ್ ನೆಲಹಾಸಿನ ‘ಸ್ಕರ್ಟಿಂಗ್ ಮಾಡಿರಿ.

. ಮನೆಯಲ್ಲಿ ಅಗತ್ಯಾನುಸಾರ ಭಾರತೀಯ ಪದ್ಧತಿಯ ಅಥವಾ ವಿದೇಶಿ ಪದ್ಧತಿಯ (ಕಮೋಡ್) ಶೌಚಾಲಯವನ್ನು ಕೂರಿಸಿ.

. ಮನೆಗೆ ವಿದ್ಯುತ್ ಜೋಡಿಸುವಾಗ ‘ಕನ್ಸೀಲ್ ವೈರಿಂಗ್ (ಗೋಡೆಯೊಳಗೆ ವಿದ್ಯುತ್ ತಂತಿಗಳನ್ನು ಜೋಡಿಸುವುದು) ಈ ಪದ್ಧತಿಯಂತೆ ಮಾಡದೆ ‘ಕೇಸಿಂಗ್ ಕ್ಯಾಪಿಂಗ್ನಂತೆ ಮಾಡಿರಿ. (ಈ ರೀತಿಯ ವಿದ್ಯುತ್ ಜೋಡಣೆ ಎಲ್ಲಕ್ಕಿಂತ ಸುಲಭದ ವಿಧಾನವಾಗಿದೆ. ‘ಪಿವಿಸಿ ಇನ್ಸುಲೇಟೆಡ್ ತಂತಿ ‘ಪ್ಲಾಸ್ಟಿಕಿನ ಕೇಸಿಂಗ್ನಲ್ಲಿಡಲಾಗುತ್ತದೆ ಹಾಗೂ ಕ್ಯಾಪ್‌ನಿಂದ ಮುಚ್ಚಲಾಗುತ್ತದೆ. ಇದನ್ನು ‘ಕೇಸಿಂಗ್ ಕ್ಯಾಪಿಂಗ್ ಎಂದು ಹೇಳಲಾಗುತ್ತದೆ.)

. ಸರ್ವಸಾಧಾರಣವಾಗಿ ಒಬ್ಬ ವ್ಯಕ್ತಿಗೆ ಪ್ರತಿದಿನದ ಬಳಕೆಗೆ ಹಾಗೂ ಕುಡಿಯಲು ಒಟ್ಟು ೧೦೦ ಲೀಟರ್ ನೀರು ಬೇಕಾಗುತ್ತದೆ. ಈ ಅಂದಾಜಿನಂತೆ ಮನೆಯಲ್ಲಿ ೫ ವ್ಯಕ್ತಿಗಳಿದ್ದರೆ ೭೫೦ ಲೀಟರ್ ಪ್ಲಾಸ್ಟಿಕಿನ ದುಂಡಾಗಿರುವ ಟ್ಯಾಂಕ್‌ಅನ್ನು ಸ್ಲ್ಯಾಬ್ ಮೇಲೆ ಅಳವಡಿಸಿ. ಎಂದಾದರೂ ಒಂದು ದಿನ ನೀರು ಪೂರೈಕೆಯಾಗದಿದ್ದರೆ ತೊಂದರೆಯಾಗಬಾರದೆಂದು ನೀರಿನ ಒಟ್ಟು ಬಳಕೆಗಿಂತ ಒಂದೂವರೆ ಪಟ್ಟು ಹೆಚ್ಚಿನ ಕ್ಷಮತೆಯ ಟ್ಯಾಂಕ್‌ಅನ್ನು ಅಳವಡಿಸಿ.

ಊ. ಆಪತ್ಕಾಲದಲ್ಲಿ ‘ಸರಕಾರಿ ಸಂಸ್ಥೆಗಳಿಗೆ ವಿದ್ಯುತ್ ಹಾಗೂ ನೀರಿನ ಪೂರೈಕೆ (ಸರಬರಾಜು) ಮಾಡಲು ಅಡಚಣೆಗಳು ಬರಬಹುದು, ಎಂದು ವಿಚಾರ ಮಾಡಿ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿರಿ. ಆಪತ್ಕಾಲದಲ್ಲಿ ಎಲ್ಲಿ ಇರಲು ಯೋಜನೆ ರೂಪಿಸಿರುವೆವೋ ಅಲ್ಲಿ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆ ಮಾಡಿಕೊಳ್ಳಿ, ಅಂದರೆ ‘ಸೋಲಾರ್ ಪವರ್ ಸಿಸ್ಟಮ್ ಅಳವಡಿಸಿ. ನೀರಿಗಾಗಿ ನಿಮ್ಮ ಜಮೀನಿನಲ್ಲಿ ಬಾವಿ ತೋಡಿರಿ ಅಥವಾ ಕೊಳವೆಬಾವಿಗೆ ಕೈಪಂಪ್ (ಹ್ಯಾಂಡ್‌ಪಂಪ್) ಅಳವಡಿಸಿಕೊಂಡು ನೀರಿನ ವ್ಯವಸ್ಥೆ ಮಾಡಿರಿ.

. ಮನೆ ಕಟ್ಟಲು ತಗಲುವ ಅಂದಾಜು ಖರ್ಚು ಹಾಗೂ ಅದಕ್ಕೆ ಬೇಕಾಗುವ ಅವಧಿ

೮೦೦ ಚದರಡಿ ಕ್ಷೇತ್ರದಲ್ಲಿ ಮೇಲಿನಂತೆ ಮನೆ (ಹಾಲ್, ಅಡುಗೆಮನೆ ಹಾಗೂ ೨ ಕೋಣೆ) ಕಟ್ಟಲು ಅಂದಾಜು ೧೨ ರಿಂದ ೧೪ ಲಕ್ಷದಷ್ಟು ರೂಪಾಯಿಗಳು ಖರ್ಚಾಗುತ್ತದೆ. ಮನೆಗಾಗಿ ಜಮೀನು ಖರೀದಿಸುವ ಖರ್ಚು ಅದು ಪ್ರತ್ಯೇಕ. ಆಯಾ ಹಳ್ಳಿಗೆ ಹೋಲಿಸಿದಾಗ ಈ ವೆಚ್ಚ ಹೆಚ್ಚು-ಕಡಿಮೆಯಾಗುತ್ತದೆ.

ಈ ರೀತಿಯ ಮನೆಗಳನ್ನು ಕಡಿಮೆ ಸಮಯಮಿತಿಯಲ್ಲಿ ಕಟ್ಟಬಹುದು. ಮನೆ ಕಟ್ಟಲು ಹೆಚ್ಚೆಂದರೆ ೪ ತಿಂಗಳ ಕಾಲ ಬೇಕಾಗುತ್ತದೆ.

ಸಾಧಕರೇ, ಆಪತ್ಕಾಲವು ದಿನದಿಂದ ದಿನಕ್ಕೆ ಸಮೀಪಿಸುತ್ತಿದೆ. ಕಾಲದ ಭೀಕರತೆಯನ್ನು ಗಮನದಲ್ಲಿಟ್ಟು ಭಗವಾನ್ ಶ್ರೀಕೃಷ್ಣನ ಮೇಲೆ ಅನನ್ಯ ಶ್ರದ್ಧೆಯಿಟ್ಟುಕೊಂಡು ಮೇಲೆ ನೀಡಿರುವಂತೆ ಎಲ್ಲ ಪ್ರಕ್ರಿಯೆಗಳನ್ನು (ಹೊಸ ಸ್ಥಳವನ್ನು ಹುಡುಕುವುದು, ಅಲ್ಲಿ ಮನೆ ಖರೀದಿಸುವುದು ಅಥವಾ ಕಟ್ಟುವುದು ಇತ್ಯಾದಿ ಮುಂದಿನ ೫ ತಿಂಗಳುಗಳೊಳಗೆ ಶೀಘ್ರಾತಿಶೀಘ್ರವಾಗಿ ವೇಗವಾಗಿ ಪೂರ್ಣಗೊಳಿಸಿಡಿ. ಆದರೆ ಹಳ್ಳಿಯಲ್ಲಿ ನಿವಾಸದ ವ್ಯವಸ್ಥೆಯಾದ ತಕ್ಷಣ ಸ್ಥಳಾಂತರಗೊಳ್ಳಬೇಡಿ.

೮. ‘ಯಾವ ರೀತಿಯಲ್ಲಿ ಕಟ್ಟಡ ನಿರ್ಮಿಸಬೇಕು ?, ಎಂಬ ಬಗ್ಗೆ ಕೆಲವು ಮಾರ್ಗದರ್ಶಕ ಅಂಶಗಳು

ಆರ್.ಸಿ.ಸಿ ಫ್ರೇಮ್ ಸ್ಟ್ರಕ್ಚರ್‌ನಂತೆ ಬಲಿಷ್ಠವಾಗಿರುವ ಮನೆ

೮ ಅ. ಬಲಿಷ್ಠವಾಗಿರುವ ಪದ್ಧತಿಯಲ್ಲಿ ಹಾಗೂ ನೈಸರ್ಗಿಕ ವಿಪತ್ತುಗಳಿಂದ ರಕ್ಷಣೆಯಾಗಲು ‘ಆರ್.ಸಿ.ಸಿ. ಫ್ರೇಮ್ ಸ್ಟ್ರಕ್ಚರ್ ! : ‘ಆರ್.ಸಿ.ಸಿ. ಫ್ರೇಮ್ ಸ್ಟ್ರಕ್ಚರ್ ಈ ವಿಧದಂತೆ ಕಟ್ಟದ ನಿರ್ಮಾಣ ಮಾಡಿದರೆ ಅದು ಬಲಿಷ್ಠವಾಗಿ, ದೀರ್ಘಕಾಲ ಹಾಗೂ ಸುರಕ್ಷಿತವಾಗಿರುತ್ತದೆ. ಈ ಮನೆಯ ಮೇಲೆ ಭೂಕಂಪದಿಂದ ಅಲ್ಪ ಪ್ರಮಾಣದಲ್ಲಿ ಪರಿಣಾಮವಾಗುತ್ತದೆ. ಅದೇ ರೀತಿ ಬೆಂಕಿ ಹಾಗೂ ವಿದ್ಯುತ್ ಆಘಾತಗಳಿಂದ ಸುರಕ್ಷಿತವಾಗಿರುತ್ತದೆ. ಆದ್ದರಿಂದ ಈ ರೀತಿಯಲ್ಲಿ ಕಟ್ಟಡಕಾಮಗಾರಿ ಮಾಡುವುದು ಒಳ್ಳೆಯದು ! ಒಂದು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ೪ ತಿಂಗಳ ಸಮಯ ಬೇಕಾಗುತ್ತದೆ; ಆದರೆ ಅದಕ್ಕಾಗಿ ಜಮೀನು ಸಮತಟ್ಟಾಗಿ ಹಾಗೂ ಗಟ್ಟಿಯಾಗಿರಬೇಕು. ಇದರಿಂದ ಕಡಿಮೆ ಸಮಯದಲ್ಲಿ ಕಟ್ಟಡ ನಿರ್ಮಾಣ ಪೂರ್ಣವಾಗುತ್ತದೆ. ಈ ಕೆಲಸಕ್ಕೆ ಪರ್ವತ ಪ್ರದೇಶದಲ್ಲಿ ಹೆಚ್ಚು ಸಮಯ ಬೇಕಾಗುತ್ತದೆ. ಅದು ೬ ತಿಂಗಳ ತನಕ ಬೇಕಾಗಬಹುದು; ಆದರೆ ಒಟ್ಟಿನಲ್ಲಿ ಈ ರೀತಿಯ ಕಟ್ಟಡ ನಿರ್ಮಾಣದಿಂದ ಜೋರಾದ ಮಳೆ ಅಥವಾ ಭೂಕಂಪದಂತಹ ನೈಸರ್ಗಿಕ ವಿಪತ್ತುಗಳಿಂದ ಆ ಕಟ್ಟಡದ ರಕ್ಷಣೆಯಾಗುತ್ತದೆ.

೮ ಆ. ‘ಲೋಡ್ ಬೇಯರಿಂಗ್ ಸ್ಟ್ರಕ್ಚರ್

ಲೋಡ್ ಬೇಯರಿಂಗ ಸ್ಟ್ರಕ್ಚರ್ ಪದ್ಧತಿಯಂತೆ ಕಡಿಮೆ ಖರ್ಚಿನಲ್ಲಿ ಕಟ್ಟಿದ ಮನೆ

೮ ಆ ೧. ‘ಲೋಡ್ ಬೇಯರಿಂಗ್ ಪದ್ಧತಿಯಂತೆ ಮನೆಗಳನ್ನು ಅನುಕೂಲಕರವಾಗಿ ಕಡಿಮೆ ಖರ್ಚಿನಲ್ಲಿ ಹಾಗೂ ಸಮಯದಲ್ಲಿ ಕಟ್ಟಲು ಸಾಧ್ಯವಾಗಿರುವುದು : ಈ ರೀತಿಯ ಕಟ್ಟಡ ನಿರ್ಮಾಣದಲ್ಲಿ ಗೋಡೆಗಳ ಮೇಲೆ ‘ಸ್ಲಾಬ್ ಅಥವಾ ತಗಡಿನ ಭಾರವನ್ನು ನೀಡಲಾಗುತ್ತದೆ. ಈ ರೀತಿಯ ನಿರ್ಮಾಣದಲ್ಲಿ ಹೊರಗಿನ ಗೋಡೆಯನ್ನು ಹೆಚ್ಚು ದಪ್ಪವಾಗಿ ಕಟ್ಟಲಾಗುತ್ತದೆ. ಇದರಿಂದ ‘ಬಿಲ್ಟ್-ಅಪ್ ಏರಿಯಾ ಹೆಚ್ಚಾಗುತ್ತದೆ. ಮನೆ ಕಟ್ಟಬೇಕಾಗಿದ್ದರೆ ಸ್ಥಳದ ಅಕ್ಕಪಕ್ಕದಲ್ಲಿ ಒಳ್ಳೆಯ ಇಟ್ಟಿಗೆ ತಯಾರು ಮಾಡುವ ಇಟ್ಟಿಗೆ ಗೂಡು ಇದ್ದರೆ ಅಲ್ಲಿಂದ ಇಟ್ಟಿಗೆಗಳು ಅಗ್ಗವಾಗಿ ಸಿಗುತ್ತಿದ್ದಲ್ಲಿ ‘ಲೋಡ್ ಬೇಯರಿಂಗ್ ಸ್ಟ್ರಕ್ಚರ್ಗನುಸಾರ ಕಟ್ಟಡ ನಿರ್ಮಿಸುವುದು ಹೆಚ್ಚು ಶ್ರೇಯಸ್ಕರ. ಎಲ್ಲಿ ಮೇಲಿನ ಮಾಳಿಗೆ ಕಟ್ಟಲಿಕ್ಕಿಲ್ಲವೋ ಅಂತಹ ಸ್ಥಳದಲ್ಲಿಯೂ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಕಟ್ಟಲು ಸಾಧ್ಯ. ಒಂದು ಅಂತಸ್ತಿನ ಕಟ್ಟಡ ಕೆಲಸ ಪೂರ್ಣಗೊಳ್ಳಲು ೩ ರಿಂದ ೫ ತಿಂಗಳ ಸಮಯ ಬೇಕಾಗಬಹುದು; ಆದರೆ ಅದಕ್ಕೆ ಜಮೀನು ಸಮತಟ್ಟಾಗಿ ಹಾಗೂ ಗಟ್ಟಿಯಾಗಿರಬೇಕು. ಪಾಯದ ಭೂಮಿ ಗಟ್ಟಿಯಾಗಿಲ್ಲದಿದ್ದರೆ ಆಗ ಮಾತ್ರ ‘ಆರ್.ಸಿ.ಸಿ ಫ್ರೇಮ್ ಬಗ್ಗೆ ಆಲೋಚಿಸಬಹುದು.

೮ ಆ ೨. ‘ಲೋಡ್ ಬೇರಿಂಗ್ ಸ್ಟ್ರಕ್ಚರ್ನ ಮನೆಗಳಲ್ಲಿ ಬೇಸಿಗೆ ಹಾಗೂ ಚಳಿಗಾಲದಿಂದ ಪರಿಣಾಮವಾಗುವುದು : ‘ಲೋಡ್ ಬೇಯರಿಂಗ್ ಅಥವಾ ‘ಆರ್.ಸಿ.ಸಿ. ಫ್ರೇಮ್ ಸ್ಟ್ರಕ್ಚರ್ನಲ್ಲಿ ಮೇಲ್ಛಾವಣಿಗೆ ತಗಡು ಅಥವಾ ಮಂಗಳೂರು ಹಂಚನ್ನು ಹಾಕಬಹುದು. ‘ಈ ಮನೆಯ ಎತ್ತರ ಕಡಿಮೆಪಕ್ಷ ೧೦ ಅಡಿಯೆಂದು ಇಟ್ಟರೆ ಮನೆಯೊಳಗೆ ಸರಿಯಾಗಿ ಗಾಳಿಯಾಡುತ್ತಿದ್ದು ಹವಾಮಾನವು ನಿಯಂತ್ರಣದಲ್ಲಿರುವುದು. ಈ ರೀತಿಯ ಮನೆಗಳು ಮಳೆಗಾಲದಲ್ಲಿ ಚೆನ್ನಾಗಿದ್ದರೂ ಬೇಸಿಗೆ ಹಾಗೂ ಚಳಿಗಾಲದಲ್ಲಿ ಅದರಿಂದ ಪರಿಣಾಮವಾಗಬಹುದು.

೮ ಆ ೩. ಮಣ್ಣಿನ ಮನೆ (‘ಲೋಡ್ ಬೇಯರಿಂಗ್‌ನಿಂದ ಸ್ಟ್ರಕ್ಚರ್ ಇನ್ ಮಡ್ ಮಾರ್ಟರ್) : ಕೆಲವೊಮ್ಮೆ ಮನೆ ಕಟ್ಟಲು ಅಕ್ಕಪಕ್ಕದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಬಿಳಿ ಜೇಡಿಮಣ್ಣು ಹೇರಳವಾಗಿ ಹಾಗೂ ಅಗ್ಗವಾಗಿ ಸಿಗುತ್ತಿರುತ್ತದೆ. ಆ ಸಮಯದಲ್ಲಿ ಗಟ್ಟಿಯಾದ ಇಟ್ಟಿಗೆಗಳ ನಿರ್ಮಾಣದ ಸಮಯದಲ್ಲಿ ಇಟ್ಟಿಗೆಗಳನ್ನು ತುಂಬಲು ಈ ಜೇಡಿಮಣ್ಣನ್ನು ಬಳಸಬಹುದು;  (ಗಾರೆ) ಗುಣಮಟ್ಟವನ್ನು ಆದರೆ ಗೋಡೆಗಳನ್ನು ಎಂದಿಗಿಂತ ಸ್ವಲ್ಪ ದಪ್ಪವಾಗಿ ಮಾಡಬೇಕಾಗುತ್ತದೆ. ಇಲ್ಲಿ ಮೇಲ್ಛಾವಣಿಗೆ ತಗಡು ಅಥವಾ ಮಂಗಳೂರು ಹಂಚನ್ನು ಹಾಕಬಹುದು. ಅದಕ್ಕಾಗಿ ತಗಲುವ ಖರ್ಚು ಸಿಮೆಂಟ್ ಹಾಗೂ ಮರಳನ್ನು ಉಪಯೋಗಿಸಿ ಮಾಡುವ ಕಟ್ಟಡ ನಿರ್ಮಾಣಕ್ಕಿಂತ ಶೇಕಡಾ ೨೫ ರಿಂದ ೩೦ ರಷ್ಟು ಕಡಿಮೆಯಾಗಬಹುದು.

೮ ಇ. ಬಳಕೆಗೆ ಬೇಕಾಗಿರುವ ಜಮೀನನ್ನು ಆಲೋಚಿಸಿದರೆ ಎರಡೂ ರೀತಿಯ ಕಟ್ಟಡ ಕೆಲಸಕ್ಕೆ ತಗಲುವ ಖರ್ಚು ಸಮಾನವಾಗಿರುವುದು : ‘ಆರ್.ಸಿ.ಸಿ. ಫ್ರೇಮ್ ಸ್ಟ್ರಕ್ಚರ್ ಹಾಗೂ ‘ಲೋಡ್ ಬೇಯರಿಂಗ್ ಸ್ಟ್ರಕ್ಚರ್ನ ವಿಧದಲ್ಲಿ ಕಟ್ಟಡ ನಿರ್ಮಾಣ ಮಾಡಲು ತಗಲುವ ವೆಚ್ಚ ಹೆಚ್ಚು ಕಡಿಮೆ ಸಮಾನವಾಗಿರುತ್ತದೆ.

೧. ೮೦೦ ಚದರಡಿ ಜಮೀನಿನಲ್ಲಿ ‘ಆರ್.ಸಿ.ಸಿ. ಫ್ರೇಮ್ ಸ್ಟ್ರಕ್ಚರ್ ನಂತೆ ಕಟ್ಟಡ ನಿರ್ಮಿಸಿದರೆ, ೭೦೦ ಚದರಡಿ ‘ಕಾರ್ಪೆಟ್ ಏರಿಯಾ (‘ಮನೆಯಲ್ಲಿ ಬಳಸಲು ಸಿಗುವ ಕ್ಷೇತ್ರ) ಸಿಗುವುದು.

. ೮೦೦ ಚದರ ಅಡಿ ಜಮೀನಿನಲ್ಲಿ ‘ಲೋಡ್ ಬೇಯರಿಂಗ್ ಸ್ಟ್ರಕ್ಚರ್ನಂತೆ ಕಟ್ಟಡ ಕಟ್ಟಿದರೆ, ೬೪೦ ಚದರಡಿ ‘ಕಾರ್ಪೆಟ್ ಏರಿಯಾ ಸಿಗಬಹುದು. (ಏಕೆಂದರೆ ಇದರ ಗೋಡೆಯ ದಪ್ಪ ಇನ್ನೂ ಅಗಲವಾಗಿರುತ್ತದೆ.)

ಇದರಿಂದ ‘ಎರಡೂ ರೀತಿಯ ಮನೆ ನಿರ್ಮಾಣದ ಖರ್ಚಿನಲ್ಲಿ ಹೆಚ್ಚು ವ್ಯತ್ಯಾಸವಿಲ್ಲ, ಎಂಬುದು ಗಮನಕ್ಕೆ ಬರುತ್ತದೆ. ಆದ್ದರಿಂದ ಬಲಿಷ್ಠ, ದೀರ್ಘಾವಧಿ ಹಾಗೂ ಕಡಿಮೆ ಖರ್ಚಿನಲ್ಲಾಗಲು ‘ಆರ್.ಸಿ.ಸಿ. ಫ್ರೇಮ್ ಸ್ಟ್ರಕ್ಚರ್ನಿಂದ ಮನೆ ಕಟ್ಟುವುದು ತುಲನಾತ್ಮಕವಾಗಿ ಹೆಚ್ಚು ಉತ್ತಮವಾಗಿದೆ !

೮ ಈ. ಕಂಟೇನರ್ (ಪ್ರೀ-ಫ್ಯಾಬ್ರಿಕೇಟೆಡ್ ಹೌಸ್)

ಕಂಟೇನರ್‌ನಿಂದ ತಯಾರಿಸಿದ ಮನೆ (ಪ್ರೀ-ಫ್ಯಾಬ್ರಿಕೇಟೆಡ್ ಹೌಸ್)

೮ ಈ ೧. ‘ಕಂಟೇನರ್ ಅನ್ನು ಮನೆ ಕಟ್ಟಲು ಬಳಸುವುದು : ‘ಕಂಟೇನರ್ ಅನ್ನು ಖರೀದಿಸಿ ಅದರಲ್ಲಿ ಮನೆ ಕಟ್ಟುವುದು. ಅದಕ್ಕಾಗಿ ಹಡಗುಗಳಲ್ಲಿ ಬಳಸಲಾಗುವ ‘ಕಂಟೇನರನ್ನು ಬಳಸಲಾಗುತ್ತದೆ. ಈ ‘ಕಂಟೇನರ್ಗಳಲ್ಲಿ ತಮ್ಮ ಅಗತ್ಯಾನುಸಾರ ಮನೆಯ ನಕ್ಷೆ ತಯಾರಿಸಿ ಅದರಂತೆ ಮನೆ ತಯಾರು ಮಾಡಲಾಗುವುದು. ಈ ರೀತಿಯ ಮನೆಗಳನ್ನು ಕಟ್ಟಲು ಒಂದರಿಂದ ಎರಡು ತಿಂಗಳ ಸಮಯಮಿತಿ ಬೇಕಾಗುತ್ತದೆ. ಈ ಮನೆಯ ಬಗ್ಗೆ ಎಲ್ಲ ದೃಷ್ಟಿಕೋನದಿಂದ ಆಲೋಚಿಸಿದಾಗ ಮುಂದಿನ ವಿಚಾರಗಳು ಗಮನಕ್ಕೆ ಬರುತ್ತದೆ.

ಅ. ಈ ಮನೆಗಳನ್ನು ಕಬ್ಬಿಣದ ತಗಡಿನಿಂದ ತಯಾರಿಸಿರುವುದರಿಂದ ಬೆಂಕಿಯಿಂದ ಅಷ್ಟು ಸುರಕ್ಷಿತವಲ್ಲ.

. ಮನೆಗೆ ವಿದ್ಯುತ್ ಆಘಾತವಾಗಬಹುದು (ಶಾಕ್) ಮತ್ತು ಅದರಿಂದ ಒಳಗಿರುವ ಜನರು ಮೃತಪಡಬಹುದು.

ಇ. ಭಾರೀ ಮಳೆಯಾದಾಗ ಇಂತಹ ಮನೆಗಳಿಗೆ ತುಕ್ಕು ಹಿಡಿಯಬಹುದು. ಅದರಲ್ಲಿ ಸೋರಿಕೆಯಾಗಬಹುದು. ಈ ರೀತಿ ತುಕ್ಕು ಹಿಡಿಯಬಾರದೆಂದು ಸತತವಾಗಿ ‘ಮೇಂಟೆನೆನ್ಸ್ ಮಾಡಬೇಕಾಗುತ್ತದೆ.

. ಮನೆಯ ಹೊರಗಿನ ಬದಿಯಲ್ಲಿ ತಗಡಿನ ದಪ್ಪ ಹಾಗೂ ಅದರ ತೂಕ ಕಡಿಮೆಯಿರುತ್ತದೆ. ಆದ್ದರಿಂದ ಚಂಡಮಾರುತ ಇತ್ಯಾದಿಗಳಾದರೆ ಆ ಮನೆಗಳು ಮೂಲ ಜಾಗದಿಂದ ಕದಲುವ ಸಾಧ್ಯತೆಗಳು ಇರುತ್ತವೆ.

. ‘ಸುಡು ಬಿಸಿಲು ಅಥವಾ ತುಂಬಾ ಚಳಿಯಿರುವ ಪ್ರದೇಶಗಳಲ್ಲಿ ಈ ರೀತಿಯ ಮನೆಗಳು ಆಯಾ ಪರಿಸ್ಥಿತಿಯಲ್ಲಿ ಅನುಕೂಲವಾಗಿರುವುದಿಲ್ಲ. ಆದ್ದರಿಂದ ಈ ಮನೆಗಳಲ್ಲಿರುವ ವ್ಯಕ್ತಿಗಳ ಆರೋಗ್ಯಕ್ಕೆ ಅಪಾಯವಾಗಬಹುದು.

೮. ಈ ೨. ಶಾಶ್ವತವಾಗಿರುವ ದೃಷ್ಟಿಯಿಂದ ಈ ಮನೆಗಳು ಅಷ್ಟೇನೂ ಉಪಯುಕ್ತವಲ್ಲ ಹಾಗೂ ಖರ್ಚಿನ ದೃಷ್ಟಿಯಿಂದ ಸಹ ದುಬಾರಿಯಾಗಿದೆ : ಕೆಲವರ ಅಭಿಪ್ರಾಯದಂತೆ ‘ಈ ಮನೆಗಳಿಗೆ ‘ಇನ್ಸುಲೇಶನ್ ಇದ್ದರೆ, ಅದಕ್ಕೆ ತೊಂದರೆಯಾಗುವುದಿಲ್ಲ; ಆದರೆ ‘ಇನ್ಸುಲೇಶನ್ ಇದ್ದರೆ, ಮನುಷ್ಯರ ಆರೋಗ್ಯ ಚೆನ್ನಾಗಿರಲು ಯಾವ ರೀತಿಯ ದಪ್ಪವಾದ ಗೋಡೆಗಳಿರಬೇಕೋ, ಅಷ್ಟು ದಪ್ಪವಾದ ಗೋಡೆಗಳಿರುವುದಿಲ್ಲ ‘ಈ ಮನೆಗಳು ಅಷ್ಟು ಉಪಯುಕ್ತವಾಗಿದೆ, ಎಂದು ಅನಿಸುವುದಿಲ್ಲ. ಆದ್ದರಿಂದ ಸಾಧಕರು ಈ ರೀತಿಯ ಮನೆಗಳನ್ನು ಕೊಂಡುಕೊಳ್ಳುವಾಗ ಅಥವಾ ಕಟ್ಟುವಾಗ ಈ ಬಗ್ಗೆ ಎಲ್ಲ ರೀತಿಯಲ್ಲಿಯೂ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಿರಿ. ‘ಈ ಮನೆಗಳನ್ನು ಕಟ್ಟಲು ಒಂದು ಚದರಡಿಯ ಖರ್ಚು ತುಂಬಾ ಕಡಿಮೆಯಿದೆ ಎಂದಿಲ್ಲ. ‘ಲೋವರ್ ಮಿಡಲ್ ಕ್ಲಾಸ್ ಅಥವಾ ಕಾರ್ಮಿಕರ ನಿವಾಸಕ್ಕಾಗಿ ಈ ರೀತಿಯ ಮನೆಗಳನ್ನು ಕಟ್ಟಲಾಗುತ್ತದೆ, ಎಂದು ಸಮೀಕ್ಷೆ ಮಾಡಿದಾಗ ಗಮನಕ್ಕೆ ಬಂದಿತು.

೮ ಉ. ಗೋಡೆ ಅಥವಾ ‘ಸ್ಲಾಬ್ ಮೊದಲೇ ತಯಾರಿಸಿ ಕಟ್ಟಿರುವ ಪ್ರಿ-ಕಾಸ್ಟ್ ಮನೆಗಳು : ‘ಕಾಂಕ್ರೀಟ್ನಲ್ಲಿ ಮೊದಲೇ ತಯಾರಿಸಿದ ಗೋಡೆ ಹಾಗೂ ‘ಸ್ಲಾಬನ್ನು ಉಪಯೋಗಿಸಿ ಇಂತಹ ಮನೆ ಕಟ್ಟಲಾಗುತ್ತದೆ. ‘ಕ್ರೇನ್ನ ಸಹಾಯದಿಂದ ಸಾಮಗ್ರಿಯನ್ನು ಸ್ಥಳಕ್ಕೆ ತಂದು ಕೂರಿಸಲಾಗುತ್ತದೆ.

. ಈ ಮನೆಯ ಗೋಡೆಗಳು ಹೆಚ್ಚು ದಪ್ಪವಾಗಿರುವುದಿಲ್ಲ. ಅವು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ ಹಾಗೂ ಭಾರೀ ಮಳೆಯಾದರೆ ಅದರ ಗೋಡೆಗಳು ಒದ್ದೆಯಾಗುವ ಸಾಧ್ಯತೆಗಳಿವೆ.

. ಒಂದೆರಡು ಮನೆ ಕಟ್ಟುವಾಗ ಅದಕ್ಕೆ ಹೆಚ್ಚು ಖರ್ಚಾಗುತ್ತದೆ; ಆದರೆ ಹೆಚ್ಚು ಸಂಖ್ಯೆಯಲ್ಲಿ ಮನೆ ಕಟ್ಟಬೇಕೆಂದರೆ ಅದರ ಖರ್ಚು ಕಡಿಮೆಯಾಗುತ್ತದೆ.

೩. ಒಂದಕ್ಕೊಂದು ಅಂಟಿಕೊಂಡಿರುವಂತೆ ಮನೆ ಕಟ್ಟಿದರೆ ಅದರಿಂದ ಹೆಚ್ಚು ಅನುಕೂಲ; ಏಕೆಂದರೆ ಎರಡು ಮನೆಗಳ ನಡುವಿನ ಗೋಡೆಯನ್ನು ‘ಕಾಮನ್ ವಾಲ್ ಎಂದು ತೆಗೆದುಕೊಳ್ಳಬಹುದು. ಇದರಿಂದ ಚಿಕ್ಕ ಕ್ಷೇತ್ರದಲ್ಲಿ ಮನೆಯ ನಿರ್ಮಾಣವಾಗುತ್ತದೆ; ಆದರೆ ಅದಕ್ಕೆ ಹೆಚ್ಚು ಸಂಖ್ಯೆಯಲ್ಲಿ ಮನೆಗಳಿರುವುದು ಅಗತ್ಯ.

ಈ ರೀತಿಯ ಮನೆಗಳಿಗೂ ಕೂಡ ‘ನಗರ ಯೋಜನೆ ಕಛೇರಿಯ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಇಂತಹ ಮನೆಗಳನ್ನು ಕಟ್ಟಲು ೩ ತಿಂಗಳ ಸಮಯ ಬೇಕಾಗುತ್ತದೆ. ಈ ಮನೆಗಳು ಸಾಧಾರಣವಾಗಿ ೫ ವರ್ಷಗಳವರೆಗೂ ಬಾಳಿಕೆ ಬರುತ್ತದೆ.

ಈ ರೀತಿ ನಾವು ಬೇರೆ ಬೇರೆ ರೀತಿಯ ಮನೆಗಳ ನಿರ್ಮಾಣದ ಅಭ್ಯಾಸ ಮಾಡಿದೆವು. ಸಾಧಕರು ‘ಕೇವಲ ಆಪತ್ಕಾಲದಲ್ಲಿ ಮಾತ್ರವಲ್ಲ ನಂತರ ಕೂಡ ಈ ಮನೆಗಳು ಬಳಸುವ ಸ್ಥಿತಿಯಲ್ಲಿರಬೇಕು, ಎಂಬ ರೀತಿ ಆಲೋಚಿಸಿ ಬಲಿಷ್ಟವಾದ ದೀರ್ಘಕಾಲ ಬಾಳಿಕೆ ಬರುವ ಹಾಗೂ ವಿದ್ಯುತ್ ಅಥವಾ ಮಳೆ-ಗಾಳಿಯಿಂದ ಸುರಕ್ಷೆ ನೀಡುವ ಮನೆಯನ್ನೇ ನಿರ್ಮಿಸಿ.

ಆಪತ್ಕಾಲಕ್ಕೆ ಸಂಬಂಧಿಸಿದ ಇವೆಲ್ಲ ಲೇಖನಗಳು ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಮಾಡಲು ಸಿಕ್ಕಿತು. ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ-ಕೋಟಿ ಕೃತಜ್ಞತೆಗಳು !

– ಶ್ರೀ. ಮಧುಸೂದನ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೦.೨.೨೦೧೯)

(ಮುಕ್ತಾಯ)