‘ಜನಸಂಖ್ಯಾಸ್ಫೋಟ ತಡೆಯಲು ಕಾನೂನು ಆವಶ್ಯಕ ಎಂಬ ಬಗ್ಗೆ ಆನ್‌ಲೈನ್ ಸಂವಾದ !

ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೊಳಿಸದಿದ್ದರೆ ನಮ್ಮ ಮತ್ತು ದೇಶದ ಅಸ್ತಿತ್ವವೇ ಅಪಾಯಕ್ಕೀಡಾಗಬಹುದು ! – ಅಶ್ವಿನಿ ಕುಮಾರ ಉಪಾಧ್ಯಾಯ, ನ್ಯಾಯವಾದಿ, ಸರ್ವೋಚ್ಚ ನ್ಯಾಯಾಲಯ 

ಶ್ರೀ. ಅಶ್ವಿನಿ ಕುಮಾರ ಉಪಾಧ್ಯಾಯ

ಮುಂಬೈ – ಅನಿಯಂತ್ರಿತ ಮತ್ತು ರಭಸದಿಂದ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಯನ್ನು ತಡೆಗಟ್ಟಲು ಸರಕಾರವು ಕಠಿಣ ಕಾನೂನುಗಳನ್ನು ರೂಪಿಸದಿದ್ದರೆ, ದೇಶದ ನಾಗರಿಕರಿಗೆ ಆಹಾರ, ವಸ್ತ್ರ, ನಿವಾಸ, ಶಿಕ್ಷಣ, ಆರೋಗ್ಯ, ಉದ್ಯೋಗ ಇತ್ಯಾದಿಗಳಿಗಾಗಿ ಸರಕಾರವು ಎಷ್ಟು ನಿಧಿಯನ್ನು ಖರ್ಚು ಮಾಡಿದರೂ ಅಥವಾ ಎಷ್ಟು ಒಳ್ಳೆಯ ಯೋಜನೆಗಳನ್ನು ಹಮ್ಮಿಕೊಂಡರೂ ಅದರ ಪರಿಣಾಮವಾಗಲಿಕ್ಕಿಲ್ಲ; ಏಕೆಂದರೆ ಈ ಯೋಜನೆಗಳನ್ನು ಹಮ್ಮಿಕೊಂಡು ಜನರು ಅದರಿಂದ ಲಾಭ ಪಡೆಯುವಷ್ಟರಲ್ಲಿ ಪುನಃ ಅಷ್ಟೇ ಜನಸಂಖ್ಯೆ ಹೆಚ್ಚಾಗಿರುತ್ತದೆ, ಎಲ್ಲಿಯವರೆಗೆ ಸಮಸ್ಯೆಯ ಮೂಲಕ್ಕೆ ಹೋಗಿ ಉಪಾಯಯೋಜನೆಗಳನ್ನು ಮಾಡುವುದಿಲ್ಲವೋ, ಅಲ್ಲಿಯವರೆಗೆ ಏನೂ ಸಾಧ್ಯವಾಗಲಿಕ್ಕಿಲ್ಲ. ಭಾರತದ ನಂತರ ಸ್ವತಂತ್ರವಾದ ಚೀನಾ ಮತ್ತು ಇತರ ದೇಶಗಳು ಜಗತ್ತಿನ ಬಲಿಷ್ಠರಾಷ್ಟ್ರಗಳಾಗುವತ್ತ ಸಾಗುತ್ತಿದೆ. ನಾವು ಮಾತ್ರ ೭೦ ವರ್ಷಗಳಿಂದ ಇದುವರೆಗೆ ಬಡತನದೊಂದಿಗೆ ಹೋರಾಡುತ್ತಿದ್ದೇವೆ. ಎರಡು ಹೊತ್ತಿನ ಅನ್ನ, ನೀರು, ರಸ್ತೆ ಇತ್ಯಾದಿ ಪ್ರಾಥಮಿಕ ಸೌಲಭ್ಯಗಳನ್ನು ಕೂಡ ದೇಶವಾಸಿಗಳಿಗೆ ಕೊಡಲು ಸಾಧ್ಯವಾಗಿಲ್ಲ. ಇದು ಹೀಗೆಯೇ ಮುಂದುವರಿದರೆ, ನಮ್ಮ ಮತ್ತು ನಮ್ಮ ದೇಶದ ಅಸ್ತಿತ್ವವೇ ಅಪಾಯಕ್ಕೊಳಗಾಗುವುದು. ಆದ್ದರಿಂದ ಎಲ್ಲಕ್ಕಿಂತ ಮೊದಲು ದೇಶದಲ್ಲಿ ‘ಹಮ್ ದೋ, ಹಮಾರೆ ದೋ ಎಂಬ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೊಳಿಸಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಶ್ವಿನಿ ಕುಮಾರ ಉಪಾಧ್ಯಾಯ ಇವರು ಆಗ್ರಹಿಸಿದ್ದಾರೆ. ನ್ಯಾಯವಾದಿ ಉಪಾಧ್ಯಾಯ ಇವರು ಜನಸಂಖ್ಯೆ ನಿಯಂತ್ರಣಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ದಾಖಲಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ ‘ಸನಾತನ ಸಂವಾದ ಈ ಕಾರ್ಯಕ್ರಮದಲ್ಲಿ ‘ಜನಸಂಖ್ಯಾಸ್ಫೋಟವನ್ನು ತಡೆಗಟ್ಟಲು ಕಾನೂನು ಆವಶ್ಯಕ ಎಂಬ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸತೀಶ ಕೋಚರೆಕರ್ ಇವರು ಉಪಾಧ್ಯಾಯರೊಂದಿಗೆ ಸಂವಾದವನ್ನು ಸಾಧಿಸಿದರು. ಈ ಕಾರ್ಯಕ್ರಮವನ್ನು ಫೇಸ್‌ಬುಕ್ ಮತ್ತು ಯುಟ್ಯೂಬ್ ಮೂಲಕ ೨೩೯೧೧ ಜನರು ಪ್ರತ್ಯಕ್ಷವಾಗಿ ವೀಕ್ಷಿಸಿದರು.

ನ್ಯಾಯವಾದಿ ಉಪಾಧ್ಯಾಯ ಇವರು ಮಾತು ಮುಂದುವರಿಸುತ್ತಾ, ೨೦೧೯ ರಲ್ಲಿ ಭಾರತದಲ್ಲಿ ೧೨೫ ಕೋಟಿ ಆಧಾರ ಕಾರ್ಡ್‌ಧಾರಕರಿದ್ದರೂ ಪ್ರತ್ಯಕ್ಷ ಭಾರತದ ಜನಸಂಖ್ಯೆ ೧೫೦ ಕೋಟಿಗಿಂತಲೂ ಹೆಚ್ಚಿದೆ. ಏಕೆಂದರೆ ಶೇ. ೨೦ ರಷ್ಟು ಜನರಲ್ಲಿ ಆಧಾರ ಕಾರ್ಡ್ ಇಲ್ಲ. ಪ್ರತಿದಿನ ಭಾರತದಲ್ಲಿ ೭೦ ಸಾವಿರ ಮಕ್ಕಳಿ ಜನಿಸುತ್ತಾರೆಂಬ ದಾಖಲೆಯಿದ್ದರೂ ಆಸ್ಪತ್ರೆಯ ಹೊರತು ವೈಯಕ್ತಿಕವಾಗಿ ಮನೆಯಲ್ಲಿ ಜನಿಸಿದ ಶೇ. ೨೦ ರಷ್ಟು ಬಾಲಕರ ದಾಖಲೆಯಿಲ್ಲ. ಅದೇ ರೀತಿ ಜನಸಂಖ್ಯೆ ಹೆಚ್ಚಳದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಜನಸಂದಣಿ ಹೆಚ್ಚಾಗುತ್ತಿದೆ. ಎಷ್ಟೇ ಹೊಸ ರಸ್ತೆ, ಹೆದ್ದಾರಿ ನಿರ್ಮಿಸಿದರೂ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ವಾಯುಮಾಲಿನ್ಯ, ಧ್ವನಿಮಾಲಿನ್ಯವು ಹೆಚ್ಚಾಗಿ ಆರೋಗ್ಯದ ಸಮಸ್ಯೆ ಉದ್ಭವಿಸಿದೆ.

ಜನಸಂಖ್ಯೆಯ ನಿಯಂತ್ರಣಕ್ಕಾಗಿ ಇಂದಿನವರೆಗಿನ ಆಡಳಿತ ನಡೆಸಿದವರು ಪ್ರಯತ್ನಿಸಲಿಲ್ಲ, ಈ ಸಮಸ್ಯೆಯ ಬಗ್ಗೆ ಮಾತನಾಡಿದ ನ್ಯಾಯವಾದಿ ಉಪಾಧ್ಯಾಯ ಇವರು, ರಾಜಕಾರಣಿಗಳು ಕೇವಲ ಅಧಿಕಾರಕ್ಕೆ ಮಹತ್ವ ನೀಡಿದರು. ಜನರಿಗೆ ದೇಶದ ನಿಜವಾದ ಸಮಸ್ಯೆಗಳನ್ನು ಹೇಳಲೇ ಇಲ್ಲ. ರಾಜಕಾರಣಿಗಳು ಕೇವಲ ಉಚಿತ ಮನೆ, ವಿದ್ಯುತ್, ನೀರು ಮತ್ತು ಇನ್ನಿತರ ಪ್ರಲೋಭನೆಗಳನ್ನು ತೋರಿಸುವ ಅಭ್ಯಾಸ ಮಾಡಿದ್ದಾರೆ. ಉಚಿತದ ಈ ವ್ಯಸನದಿಂದ ಜನರ ವಿಚಾರ ಮಾಡುವ ಕ್ಷಮತೆಯೇ ಕ್ಷೀಣಿಸಿದೆ. ಇದು ರಾಜಕಾರಣಿಗಳು ದೇಶಕ್ಕೆ ಮಾಡಿದ ದ್ರೋಹವೇ ಆಗಿದೆ. ಸಂವಿಧಾನದಲ್ಲಿ ಜನಸಂಖ್ಯೆ ನಿಯಂತ್ರಣದ ವಿಷಯದಲ್ಲಿ ಸ್ಪಷ್ಟವಾದ ವ್ಯವಸ್ಥೆ ಇರುವಾಗ ಅದನ್ನು ಅನುಷ್ಠಾನಕ್ಕೆ ಏಕೆ ತರುತ್ತಿಲ್ಲ ? ಎನ್ನುವ ವಿಷಯದಲ್ಲಿ ಈಗ ಜನರೇ ಮುಂದೆ ಬಂದು ಜನಪ್ರತಿನಿಧಿಗಳಿಗೆ ಕೇಳಬೇಕು. ಈ ಕಾನೂನಿಗಾಗಿ ಧ್ವನಿಯೆತ್ತಬೇಕು. ಶೇಕಡಾ ಒಂದರಷ್ಟು ಜನರಾದರೂ ರೈತರ ಹಾಗೆ ದೆಹಲಿಯಲ್ಲಿ ಆಂದೋಲನ ಮಾಡಿದರೆ, ಒಂದೇ ದಿನದಲ್ಲಿ ಈ ಕಾನೂನು ಆಗುವುದು, ಎಂದೂ ನ್ಯಾಯವಾದಿ ಉಪಾಧ್ಯಾಯ ಇವರು ಹೇಳಿದರು.