ಹಿಂದೂ ರಾಷ್ಟ್ರ-ಜಾಗೃತಿ ಸಭೆ ಸಂಪನ್ನ

ದೀಪಪ್ರಜ್ವಲಿಸುತ್ತಿರುವ ಎಡದಿಂದ ಪೂ. ರಮಾನಂದ ಗೌಡ, ಶ್ರೀ. ಪ್ರಮೋದ್ ಮುತಾಲಿಕ್, ಶ್ರೀ. ಗುರುಪ್ರಸಾದ ಗೌಡ

ಮಂಗಳೂರು – ಫೆಬ್ರವರಿ ೨೧ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆನ್‍ಲೈನ್ ಮೂಲಕ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ್ ಮುತಾಲಿಕ್, ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಉಪಸ್ಥಿತರಿದ್ದರು. ಈ ಕಾರ್ಯಕ್ರಮ ವನ್ನು ಆನ್‍ಲೈನ್ ಮೂಲಕ ೩೪,೭೦೦ ಜನರು ವೀಕ್ಷಿಸಿದರೆ, ಫೇಸ್‍ಬುಕ್‍ನಲ್ಲಿ ೪೧,೦೦೦ ಜನರವರೆಗೆ ಕಾರ್ಯಕ್ರಮ ತಲುಪಿತು.

ಧರ್ಮ ರಕ್ಷಣೆಗಾಗಿ ಜಟಾಯು ಪಕ್ಷಿಯಂತೆ ಜವಾಬ್ದಾರಿ ನಿಭಾಯಿಸಿ – ಶ್ರೀ. ಪ್ರಮೋದ್ ಮುತಾಲಿಕ್

ಶ್ರೀ. ಪ್ರಮೋದ್ ಮುತಾಲಿಕ್

ಇಂದು  ಪ್ರತಿಯೊಬ್ಬರೂ ಸಮಾಜದ ಋಣ ತೀರಿಸಲು ನಾನು ಏನು ಮಾಡಬಲ್ಲೆ ಎಂದು ವಿಚಾರ ಮಾಡಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಯಾವ ರೀತಿ ಜಟಾಯು ವೃದ್ಧಾವಸ್ಥೆಯಲ್ಲಿದ್ದರೂ ಪೂರ್ಣ ಶಕ್ತಿ ಬಳಸಿ ರಾವಣನಂತಹ ಬಲಾಢ್ಯ ರಾಕ್ಷಸನೊಂದಿಗೆ ಹೋರಾಡಿತ್ತು ಅದೇ ರೀತಿ ಜಟಾಯುವಿನ ಅದರ್ಶವನ್ನಿಟ್ಟು ನಮ್ಮ ಕರ್ತವ್ಯ ವೆಂದು ಕಣ್ಣೆದುರು ಕಾಣುವ ಅನ್ಯಾಯವನ್ನು ಹೇಗೆ ಪ್ರತಿಕ್ರಿಯಿಸಲಿ ಎಂದು ಚಿಂತನೆ ಮಾಡಬೇಕಿದೆ.

ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯು ಆವಶ್ಯಕ ! – ಪೂ. ರಮಾನಂದ ಗೌಡ

ಪೂ. ರಮಾನಂದ ಗೌಡ

ಇಂದು ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ದೇವಸ್ಥಾನಗಳ ಮೇಲೆ ಆಘಾತ ನಡೆಯುತ್ತಿದೆ, ಇದೆಲ್ಲ ತಡೆಯಲು ಸಮಸ್ತ ಹಿಂದೂಗಳು ಧರ್ಮಶಿಕ್ಷಣ ಪಡೆಯಬೇಕು ಮತ್ತು ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಭಾಗಿಯಾಗಬೇಕು.

ಹಿಂದೂಗಳೇ, ಧರ್ಮದ ಉಳಿವಿಗಾಗಿ ಸಂಘಟಿತರಾಗಿ – ಶ್ರೀ. ಗುರುಪ್ರಸಾದ ಗೌಡ

ಶ್ರೀ. ಗುರುಪ್ರಸಾದ ಗೌಡ

ಜಗತ್ತಿನಾದ್ಯಂತ. ಅದೇ ರೀತಿ ಭಾರತದಲ್ಲಿಯೂ ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಹೀಗೆ ಅನೇಕ ಘೋರ ಕೃತ್ಯಗಳು ಅನೇಕ ಸ್ಥಳಗಳಲ್ಲಿ ಬಹಿರಂಗವಾಗುತ್ತಿದೆ. ಮತಾಂತರ ಸಹಿತ ಎಲ್ಲ ಜಿಹಾದ್‍ಗಳ ವಿರುದ್ಧ ಕಠಿಣ ಕಾನೂನುಗಳನ್ನು ರೂಪಿಸಬೇಕು. ಹಿಂದೂಗಳು ಈಗ ಧರ್ಮದ ಉಳಿವಿಗಾಗಿ ಸಂಘಟಿತರಾಗುವುದು ಆವಶ್ಯಕವಾಗಿದೆ.

ಗಮನಾರ್ಹ ಅಂಶಗಳು 

೧. ಈ ಕಾರ್ಯಕ್ರಮದಲ್ಲಿ ಧರ್ಮಶಿಕ್ಷಣ ನೀಡುವ ಫಲಕಗಳನ್ನು ತೋರಿಸಲಾಯಿತು.

. ಸ್ವರಕ್ಷಣೆಯ ಕೆಲವು ಪ್ರಕಾರಗಳನ್ನು ತೋರಿಸಲಾಯಿತು.

. ಧರ್ಮಶಿಕ್ಷಣ ನೀಡುವ ಮಕ್ಕಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು.