ಬನಭೂಲಪುರಾದಲ್ಲಿ ಹಣ ಹಂಚುವ ಮತ್ತು ಪ್ರಚೋದಿಸುವ ವಿಡಿಯೋ ಪ್ರಸಾರ ಮಾಡುವ ಭಾಗ್ಯನಗರದ ಸಲ್ಮಾನ್ ಖಾನ್ ವಶಕ್ಕೆ

ಉತ್ತರಾಖಂಡದ ಹಲ್ದ್ವಾನಿ ಹಿಂಸಾಚಾರದ ಪ್ರಕರಣ

ಹಲ್ದವಾನಿ (ಉತ್ತರಾಖಂಡ) – ಇಲ್ಲಿನ ಬನಭೂಲಪುರಾದಲ್ಲಿ 2 ವಾರಗಳ ಹಿಂದೆ, ಆಡಳಿತವು ಅನಧಿಕೃತ ಮದರಸಾವನ್ನು ಕೆಡವಿದ ಬಗ್ಗೆ ಸ್ಥಳೀಯ ಮತಾಂಧ ಮುಸಲ್ಮಾನರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದರ ನಂತರ, ತೆಲಂಗಾಣದಿಂದ ನೇರ ಉತ್ತರಾಖಂಡದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಬಂದು ಹಣವನ್ನು ಹಂಚುವ ಹಾಗೆಯೇ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಚೋದಿಸುವ ವಿಡಿಯೋ ಪ್ರಸಾರ ಮಾಡಿದ ಭಾಗ್ಯನಗರದ (ತೆಲಂಗಾಣ)ದ ಸಲ್ಮಾನ ಖಾನನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅವರು ಹಲ್ದವಾನಿಯಲ್ಲಿ ಎಷ್ಟು ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ಆಯುಕ್ತ ಪ್ರಲ್ಹಾದ ನಾರಾಯಣ ಮೀನಾ ಮಾತನಾಡಿ, ವಿತರಿಸಲಾಗಿರುವ ಹಣದ ಮೂಲ ಮತ್ತು ಸಲ್ಮಾನನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ ಮಾಡಿರುವ ವಿಡಿಯೋ ತನಿಖೆ ಮಾಡಲಾಗುತ್ತಿದೆ.

ಸಲ್ಮಾನ ಖಾನನ ‘ಹೈದರಾಬಾದ್ ಯೂತ್ ಕರೇಜ್’ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿದೆ. ಅವನು ಇದೇ ಹೆಸರಿನಿಂದ ಅಲ್ಲಿ ಒಂಸು ಸಂಸ್ಥೆಯನ್ನು ಕೂಡ ನಡೆಸುತ್ತಾನೆ. ಬನಭೂಲಪುರಾದಲ್ಲಿ ನಡೆದ ಹಿಂಸಾಚಾರದ ಬಳಿಕ ಅವನು ಅಲ್ಲಿಯ ಮುಸಲ್ಮಾನರಿಗಾಗಿ ನಿಧಿಯನ್ನು ಸಂಗ್ರಹಿಸುತ್ತಿದ್ದನು. ಅವನು ಪ್ರಸಾರ ಮಾಡಿರುವ ವಿಡಿಯೋದಲ್ಲಿ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಮರಣಿಸಿರುವವರನ್ನು `ಶಹೀದ’ ಎಂದು ಕರೆದಿದ್ದಾನೆ. ಮತ್ತೊಂದು ವೀಡಿಯೊದಲ್ಲಿ, ಅವನು ಬನಭೂಲಪುರಾ ಪ್ರದೇಶದ ಜನರು ಹಣ ತುಂಬಿದ ಚೀಲಗಳನ್ನು ತೆಗೆದುಕೊಂಡು ಹಣವನ್ನು ಹಂಚುತ್ತಿರುವುದು ಕಾಣಿಸುತ್ತಿದೆ.

ಸಂಪಾದಕೀಯ ನಿಲುವು

ಮತಾಂಧ ಮುಸ್ಲಿಮರ ಸಂವಹನ ಜಾಲವು ಯಾವ ರೀತಿ ದೇಶಾದ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ.ಎನ್ನುವುದಕ್ಕೆ ಇದು ಪ್ರಾತಿನಿಧಿಕ ಉದಾಹರಣೆಯಾಗಿದೆ. ಇದನ್ನು ಹದ್ದುಬಸ್ತಿನಲ್ಲಿಡಲು ಸರಕಾರಿ ಆಡಳಿತ ವ್ಯವಸ್ಥೆಯು ಮೂಲ ಸಮೇತ ಅದನ್ನು ಕಿತ್ತೆಸೆಯುವುದು ಆವಶ್ಯಕವಾಗಿದೆ.