ಆಪತ್ಕಾಲೀನ ಪರಿಸ್ಥಿತಿಯಲ್ಲಿ ಉದ್ಭವಿಸುವ ಮಾನಸಿಕ ಸಮಸ್ಯೆಗಳಿಗೆ ಕೆಲವು ಪರಿಹಾರೋಪಾಯಗಳು

 ಕೆಲವು ಜನರು ಅತಿಭಾವನಾಶೀಲ ಮತ್ತು ಮನಸ್ಸಿನಿಂದ ಬಹಳ ದುರ್ಬಲರಾಗಿರುತ್ತಾರೆ. ನೆರೆ, ಭೂಕಂಪ, ಮಹಾಯುದ್ಧ ಇತ್ಯಾದಿ ಸಂಕಟಗಳನ್ನು ನೋಡಿ ಅವರು ಭಯಭೀತರಾಗುತ್ತಾರೆ. ಅವರಿಗೆ ಈ ಆಪತ್ಕಾಲದ ಸಂದರ್ಭದಲ್ಲಿನ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು ಬೇಡವೆನಿಸುತ್ತದೆ. ಕೆಲವರ ಮನಸ್ಸು ಅಸ್ವಸ್ಥವಾಗಿರುವುದರಿಂದ ಅವರಿಗೆ ಸ್ವಯಸೂಚನೆಗಳನ್ನು ಕೊಡಲು ನೆನಪು  ಆಗುವುದಿಲ್ಲ.

ಆಪತ್ಕಾಲೀನ ಸ್ಥಿತಿಯಲ್ಲಿ ಉದ್ಭವಿಸುವ ಮಾನಸಿಕ ಸಮಸ್ಯೆಗಳ ಮೇಲಿನ ಕೆಲವು ಉಪಾಯಯೋಜನೆಗಳು

ಇಂತಹ ಘಟನೆಗಳನ್ನು ನೋಡಿ ಅಥವಾ ಕೇಳಿ ಅನೇಕರ ಮನಸ್ಸು ಅಸ್ಥಿರವಾಗುವುದು, ಮನಸ್ಸಿನ ಮೇಲೆ ಒತ್ತಡ ಬರುವುದು, ಕಾಳಜಿಯಾಗುವುದು, ಭಯವಾಗುವುದು, ಪರಿಸ್ಥಿತಿಯನ್ನು ಸ್ವೀಕರಿಸಲು ಸಾಧ್ಯವಾಗದಿರುವುದು ಮುಂತಾದ ತೊಂದರೆಗಳಾಗುತ್ತವೆ. ಬಹಳಷ್ಟು ಜನರು ಸಂಬಂಧಿಕರಲ್ಲಿಯೂ ಭಾವನಾತ್ಮಕ ದೃಷ್ಟಿಯಿಂದ ಸಿಲುಕಿಕೊಳ್ಳುತ್ತಾರೆ. ಹೀಗಾದಾಗ ಮಾನಸೋಪಚಾರ ತಜ್ಞರ ಸಹಾಯ ಪಡೆಯಬೇಕು.

ಮಹಾಯುದ್ಧ, ಭೂಕಂಪಗಳಂತಹ ಆಪತ್ಕಾಲದ ಪರಿಸ್ಥಿತಿಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ?

ಸ್ವಯಂಸೂಚನೆಗಳ ವಿವಿಧ ಪದ್ಧತಿಗಳ ಸವಿಸ್ತಾರ ಮಾಹಿತಿ, ಸ್ವಭಾವದೋಷ ಮತ್ತು ಅಹಂನ ವಿವಿಧ ಲಕ್ಷಣಗಳಿಗೆ ಸ್ವಯಂಸೂಚನೆಗಳನ್ನು ಹೇಗೆ ತಯಾರಿಸಬೇಕು ಇತ್ಯಾದಿಗಳ ಸವಿಸ್ತಾರ ವಿವೇಚನೆಯನ್ನು ಸನಾತನದ ಗ್ರಂಥ ‘ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ-ನಿರ್ಮೂಲನೆ’ ಇದರಲ್ಲಿ ಮಾಡಲಾಗಿದೆ.