ಕೆಲವು ದೇವಿಯರ ಉಪಾಸನೆಯ ವೈಶಿಷ್ಟ್ಯಗಳು
‘ಸಂಧಿಪೂಜೆ’ ಎಂಬ ಹೆಸರಿನ ಒಂದು ವಿಶೇಷ ಪೂಜೆಯನ್ನು ಅಷ್ಟಮಿ ಮತ್ತು ನವಮಿ ಈ ತಿಥಿಗಳ ಸಂಧಿಕಾಲದಲ್ಲಿ ಮಾಡುತ್ತಾರೆ. ಈ ಪೂಜೆಯು ದುರ್ಗೆಯ ಚಾಮುಂಡಾ ಎಂಬ ರೂಪದ್ದಾಗಿರುತ್ತದೆ. ಈ ರಾತ್ರಿಯಲ್ಲಿ ಸಂಕೀರ್ತನೆ, ಆಟ ಇವುಗಳ ಮೂಲಕ ಜಾಗರಣೆ ಮಾಡುತ್ತಾರೆ.
‘ಸಂಧಿಪೂಜೆ’ ಎಂಬ ಹೆಸರಿನ ಒಂದು ವಿಶೇಷ ಪೂಜೆಯನ್ನು ಅಷ್ಟಮಿ ಮತ್ತು ನವಮಿ ಈ ತಿಥಿಗಳ ಸಂಧಿಕಾಲದಲ್ಲಿ ಮಾಡುತ್ತಾರೆ. ಈ ಪೂಜೆಯು ದುರ್ಗೆಯ ಚಾಮುಂಡಾ ಎಂಬ ರೂಪದ್ದಾಗಿರುತ್ತದೆ. ಈ ರಾತ್ರಿಯಲ್ಲಿ ಸಂಕೀರ್ತನೆ, ಆಟ ಇವುಗಳ ಮೂಲಕ ಜಾಗರಣೆ ಮಾಡುತ್ತಾರೆ.
ಒಂಬತ್ತು ದಿನಗಳವರೆಗೆ ಪ್ರತಿದಿನ ಕುಮಾರಿಯ ಪೂಜೆಯನ್ನು ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆ ಎಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಶಕ್ತಿಯ ಪ್ರಮಾಣವು ಜಾಸ್ತಿಯಿರುತ್ತದೆ.
ವಿಶಿಷ್ಟ ದೇವತೆಯ ಪೂಜೆಯನ್ನು ಮಾಡುವಾಗ ಆ ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಬೇಕು. ರಂಗೋಲಿಯು ದೇವತೆಯ ನಿರ್ಗುಣ ತತ್ತ್ವವನ್ನು ಗ್ರಹಿಸಿ ಜೀವದ ಕ್ಷಮತೆಗನುಸಾರ ಅದನ್ನು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ.
ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತು ಕೊಂಡು ಭೂಮಿ ಮತ್ತು ದೇವತೆ ಗಳಿಗೆ ‘ಈ ಆಸನದ ಸ್ಥಳದಲ್ಲಿ ತಮ್ಮ ಚೈತನ್ಯಮಯ ವಾಸ್ತವ್ಯವಿರಲಿ ಎಂದು ಪ್ರಾರ್ಥನೆ ಮಾಡಬೇಕು.
ಹಾಗೆಯೇ ಮೂರ್ತಿಯ ಕೆಳಗಿರುವ ಅಕ್ಕಿಯಲ್ಲಿ ಶಕ್ತಿಯಿಂದ ಸ್ಪಂದನಗಳು ಉಂಟಾದಾಗ ಮನೆಯಲ್ಲಿರುವ ಅಕ್ಕಿಯ ಸಂಗ್ರಹದಲ್ಲಿಯೂ ಶಕ್ತಿಯ ಸ್ಪಂದನಗಳು ಉಂಟಾಗುತ್ತವೆ. ಈ ರೀತಿ ಶಕ್ತಿಯುತ ಅಕ್ಕಿಯನ್ನು ವರ್ಷಪೂರ್ತಿ ಪ್ರಸಾದವೆಂದು ಸೇವಿಸಬಹುದು.
ಉತ್ಸವಮಂಟಪಕ್ಕೆ ಸಂಬಂಧಿಸಿದ ತಪ್ಪು ಆಚರಣೆಗಳು : ಮಂಟಪವನ್ನು ತಯಾರಿಸುವಾಗ ಬೆಂಕಿ ತಗಲುವ ವಸ್ತುಗಳನ್ನು ಉಪಯೋಗಿಸುವುದು, ಮೂರ್ತಿಯ ಅಲಂಕಾರ, ವಿದ್ಯುತ್ ಅಲಂಕಾರ ಇತ್ಯಾದಿಗಳಿಗಾಗುವ ಅನಾವಶ್ಯಕ ಖರ್ಚು, ಮಂಟಪಗಳಲ್ಲಿ ಜೂಜಾಡುವುದು
ಹೇ ಬುದ್ಧಿದಾತಾ, ಶ್ರೀ ಗಣೇಶಾ, ನನಗೆ ಸದ್ಬುದ್ಧಿಯನ್ನು ಪ್ರಧಾನಿಸು. ಹೇ ವಿಘ್ನಹರ್ತಾ, ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು. ದಿನವಿಡೀ ಉತ್ಸಾಹದಿಂದ ಕೆಲಸ-ಕಾರ್ಯಗಳನ್ನು ಮಾಡಲು ನನಗೆ ಅವಶ್ಯಕವಿದ್ದಷ್ಟು ಪ್ರಾಣಶಕ್ತಿಯನ್ನು ನೀಡು.
ಶ್ರೀ ಗಣೇಶ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಿಂದ ಉತ್ತರ ಪೂಜೆಯ ವರೆಗಿನ ಎಲ್ಲ ವಿಧಿಗಳನ್ನು ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕು, ಗಣೇಶ ಪೂಜೆಗಾಗಿ ಯಾವ ವಸ್ತುಗಳು ಎಷ್ಟು ಪ್ರಮಾಣದಲ್ಲಿರಬೇಕು, ಎಂಬ ಕುರಿತು ವಿವೇಚನೆಯನ್ನು ಈ ಕಿರುಗ್ರಂಥದಲ್ಲಿ ಅರ್ಥಸಹಿತ ಕೊಡಲಾಗಿದೆ.
“ನಾವು ಶ್ರೀ ಗಣೇಶಮೂರ್ತಿಯಲ್ಲಿ ಹೆಚ್ಚೆಚ್ಚು ಗಣೇಶತತ್ತ್ವವು ಬರಲು ಪ್ರಯತ್ನಿಸುತ್ತಿದ್ದೇವೆ. ದೇವಸ್ಥಾನದಲ್ಲಿ ಇಂತಹ ಮೂರ್ತಿಗಳನ್ನು ಇಟ್ಟರೆ ಸಮಾಜದಲ್ಲಿನ ಜನರಿಗೆ ದೈವತ್ವದ ಲಾಭವಾಗಲಿದೆ. ಆ ದೃಷ್ಟಿಯಿಂದ ದುರ್ಗಾದೇವಿಯ ಮೂರ್ತಿ ತಯಾರಿಕೆಯು ಪ್ರಾರಂಭವಾಗಿದೆ.” ಎಂದು ಹೇಳಿದರು.
ಮೂರ್ತಿಯನ್ನು ತರುವಾಗ ಅದರ ಮೇಲೆ ರೇಷ್ಮೆ, ಹತ್ತಿ ಖಾದಿಯ ಸ್ವಚ್ಛ ಬಟ್ಟೆಯನ್ನು ಹಾಕಬೇಕು. ಮೂರ್ತಿಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು. ಮೂರ್ತಿಯ ಮುಂಭಾಗದಿಂದ ಸಗುಣ ತತ್ತ್ವ ಮತ್ತು ಹಿಂಭಾಗದಿಂದ ನಿರ್ಗುಣ ತತ್ತ್ವ ಪ್ರಕ್ಷೇಪಿಸುತ್ತಿರುತ್ತದೆ.