ಕೊಯಿಮತ್ತೂರಿನಲ್ಲಿ ಬಾಂಬ್ ಸ್ಪೋಟದ ಭಯೋತ್ಪಾದಕರ ಇಸ್ಲಾಮಿ ಸ್ಟೇಟ ನೊಂದಿಗೆ ನಂಟು !

ಶ್ರೀಲಂಕಾದಲ್ಲಿ ಈಸ್ಟರ್ ಸಂಡೆಯ ಸಮಯದಲ್ಲಿ ನಡೆದಿರುವ ಬಾಂಬ್ ಸ್ಫೋಟದಲ್ಲೂ ಸಂಬಂಧ

ನವದೆಹಲಿ – ತಮಿಳುನಾಡುವಿನ ಕೊಯಿಮತ್ತೂರ್ ನಲ್ಲಿ ಅಕ್ಟೋಬರ್ ೨೩ ರಂದು ಒಂದು ಚತುಷ್ಚಕ್ರ ವಾಹನದಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮಹಮ್ಮದ್ ಅಜರುದ್ದೀನ್ ಈ ಭಯೋತ್ಪಾದಕನು ಶ್ರೀಲಂಕಾದಲ್ಲಿನ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರೊಂದಿಗೆ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ಮಹಮ್ಮದ್ ಅಜರುದ್ದೀನ್ ಶ್ರೀಲಂಕಾದಲ್ಲಿ ೨೦೧೯ ರಲ್ಲಿ ಈಸ್ಟರ್ ಸಂಡೆಯ ಕ್ರೈಸ್ತರ ಹಬ್ಬದ ಸಮಯದಲ್ಲಿ ಚರ್ಚನಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕರಣದಲ್ಲಿನ ಮುಖ್ಯ ಆರೋಪಿ ಜಹರನ್ ಹಾಶಿಮ್ ಇವನ ಸಂಪರ್ಕದಲ್ಲಿ ಇದ್ದನು. ಹಾಗೂ ಅವನು ಇಸ್ಲಾಮಿಕ್ ಸ್ಟೇಟ್ ನ ಕೇರಳದಲ್ಲಿನ ಭಯೋತ್ಪಾದಕ ಮಹಮ್ಮದ್ ನೌಶಾನ್ ಇವನ ಸಂಪರ್ಕದಲ್ಲಿ ಕೂಡ ಇದ್ದನು. ಮಹಮ್ಮದ್ ನೌಶಾನ್ ಮತ್ತು ಜಹರಾನ್ ಹಾಶಿಮ್ ಇವರಿಬ್ಬರೂ ಕೂಡ ಶ್ರೀಲಂಕಾದಲ್ಲಿನ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದರು, ಎಂದು ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.) ಎರ್ನಾಕುಲಂ ಇಲ್ಲಿಯ ವಿಶೇಷ ನ್ಯಾಯಾಲಯದಲ್ಲಿ ಮಾಹಿತಿ ನೀಡಿದೆ. ಕೊಯಿಮತ್ತೂರ್ ನಲ್ಲಿ ಒಂದು ದೇವಸ್ಥಾನದಲ್ಲಿ ಬಾಂಬ್ ಸ್ಫೋಟ ಮಾಡುವುದಿತ್ತು. ಅದಕ್ಕೂ ಮೊದಲೇ ಚತುಷ್ಚಕ್ರವಾಹನದಲ್ಲಿ ಸ್ಪೋಟಗೊಂಡಿತು.

ಅಜಹರುದ್ದೀನ್ ಮತ್ತು ಶೇಕ್ ಹಿದಾಯತುಲ್ಲಾ ಈ ಜಿಹಾದಿ ಭಯೋತ್ಪಾದಕರು ಭಾಷಣಗಳು ಕೇಳುತ್ತಿರುತ್ತಾರೆ. ಅಜಹರುದ್ದೀನ್ ಇವನು ದಕ್ಷಿಣ ಭಾರತದಲ್ಲಿನ ಅನೇಕ ಮುಸಲ್ಮಾನ ಯುವಕರನ್ನು ಇಸ್ಲಾಮಿಕ್ ಸ್ಟೇಟನಲ್ಲಿ ಸೇರಿಸಿದ್ದಾನೆ. ಹಾಗೂ ಕೊಯಿಮುತ್ತೂರು ಇಲ್ಲಿಯ ಒಂದು ಮಸೀದಿಯಲ್ಲಿ ಅನೇಕ ಮುಸಲ್ಮಾನ ಯುವಕರನ್ನು ಜಿಹಾದಿಗಳನ್ನಾಗಿಸಿ ಅವರಿಗೆ ದಕ್ಷಿಣ ಭಾರತದ ಭಯೋತ್ಪಾದಕ ದಾಳಿ ಮಾಡಲು ಪ್ರಚೋಧಿಸಿದ್ದ.