ಹರ್ ಘರ್ ಭಗವಾ’ ಅಭಿಯಾನಕ್ಕೆ ಗಣ್ಯರಿಂದ ಪ್ರತಿಕ್ರಿಯೆ !

೧. ‘ಹರ್ ಘರ್ ಭಗವಾ’ ಅಭಿಯಾನದಿಂದ ಹಿಂದುಗಳ ಐಕ್ಯತೆಯನ್ನು ತೋರಿಸಿದೆ ! – ಪೂ. (ನ್ಯಾಯವಾದಿ) ಹರಿ ಶಂಕರ್ ಜೈನ್

ಪೂ.(ನ್ಯಾಯವಾದಿ) ಹರಿಶಂಕರ ಜೈನ

ಹಿಂದೂ ಜನಜಾಗೃತಿ ಸಮಿತಿಯು ೨೦ ವರ್ಷಗಳ ಹೋರಾಟವನ್ನು ಪೂರ್ಣಗೊಳಿಸಿದೆ. ಈ ನಿಮತ್ತ ಅಕ್ಟೋಬರ್ ೩, ೪ ಮತ್ತು ೫ ರಂದು, ಅಂದರೆ ಅಷ್ಟಮಿ, ನವಮಿ ಮತ್ತು ದಶಮಿಯಂದು, ಪ್ರತಿಯೊಬ್ಬ ಹಿಂದೂಗಳು ತಮ್ಮ ಮನೆಯ ಮೇಲೆ ಕೇಸರಿ ಧ್ವಜವನ್ನು ಬಹಳ ಅಭಿಮಾನದಿಂದ ಹಾರಿಸಬೇಕೆಂದು ನಾವೆಲ್ಲರೂ ನಿರ್ಧರಿಸಿದ್ದೇವೆ. ಇದು ಹಿಂದೂ ಐಕ್ಯತೆಯನ್ನು ತೋರಿಸುತ್ತದೆ ಮತ್ತು ಇದರಿಂದ ಹಿಂದೂಗಳು ಸಂಘಟಿತರಾಗಿದ್ದಾರೆ’ ಎಂದು ಪ್ರತಿಯೊಬ್ಬರಿಗೂ ತಿಳಿಯುತ್ತದೆ.

೨. ಹಿಂದೂಗಳು ಮನೆಯ ಮೇಲೆ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ವಿಜಯದಶಮಿ ಹಬ್ಬವನ್ನು ಆಚರಿಸಬೇಕು ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್

ನ್ಯಾಯವಾದಿ ವಿಷ್ಣುಶಂಕರ ಜೈನ

ದೇಶಾದ್ಯಂತದ ಎಲ್ಲ ಧರ್ಮಾಭಿಮಾನಿ ಹಿಂದೂಗಳು ಅಕ್ಟೋಬರ್ ೩, ೪ ಮತ್ತು ೫ ರಂದು ತಮ್ಮ ಮನೆಗಳ ಮೇಲೆ ಕೇಸರಿ ಧ್ವಜವನ್ನು ಹಾರಿಸಿ ವಿಜಯದಶಮಿಯನ್ನು ಆಚರಿಸಬೇಕು. ನಾವೆಲ್ಲರೂ ನಮ್ಮ ಮನೆಯ ಮೇಲೆ ಕೇಸರಿ ಧ್ವಜ ಹಾರಿಸಿದರೆ, ವಿಜಯದಶಮಿಯ ಪವಿತ್ರವಾದ ಶೂಭಮುಹೂರ್ತದಲ್ಲಿ ಹಿಂದೂ ಐಕ್ಯತೆ, ಹಿಂದೂಗಳ ಗುರುತು ಕಾಣಿಸುತ್ತದೆ ಎಂದು ಹೇಳಿದರು.