ಮದರಸಾಗಳಿಗೆ ನೀಡಲಾಗುವ ಧನಸಹಾಯವನ್ನು ನಿಲ್ಲಿಸಬೇಕು ! – ನ್ಯಾಯವಾದಿ ಮೋತಿಸಿಂಹ ರಾಜಪುರೋಹಿತ, ರಾಜಸ್ಥಾನ ಉಚ್ಚ ನ್ಯಾಯಾಲಯ

ವಿಶೇಷ ಸಂವಾದ : ‘ಮದರಸಾಗಳು ಭಯೋತ್ಪಾದನೆಯ ಕೇಂದ್ರಗಳಾಗುತ್ತಿವೆಯೇ ?’

ರಾಜಸ್ಥಾನದ ಕನ್ಹಯ್ಯಾಲಾಲ ಹಾಗೂ ಅಮರಾವತಿಯ ಉಮೇಶ ಕೊಲ್ಹೆಯವರ ಹಂತಕರು ಮದರಸಾಗಳಿಂದ ಸಿದ್ಧರಾಗಿದ್ದರು. ಇಷ್ಟೇ ಅಲ್ಲದೇ, ದೇಶದಾದ್ಯಂತ ಇರುವ ಎಲ್ಲ ಕೈದಿಗಳ ಮಾಹಿತಿಯನ್ನು ಪಡೆದರೆ ಅವರಲ್ಲಿನ ಹೆಚ್ಚಿನ ಮುಸಲ್ಮಾನರು ಮದರಸಾಗಳಿಂದ ಶಿಕ್ಷಣ ಪಡೆದಿರುವುದು ಬೆಳಕಿಗೆ ಬಂದಿರುವಾಗ ‘ಮದರಸಾಗಳಿಂದ ಭಯೋತ್ಪಾದಕರು ತಯಾರಾಗುತ್ತಿದ್ದಾರೆಯೇ ?’ ಎಂಬುದು ಪ್ರಶ್ನೆಯಾಗಿ ಉಳಿಯುವುದಿಲ್ಲ. ಹಾಗೆಯೇ ಸರ್ವೋಚ್ಚ ನ್ಯಾಯಾಲಯವು ‘ಮದರಸಾಗಳು ಶೈಕ್ಷಣಿಕ ಅಥವಾ ಪ್ರಾಥಮಿಕ ಶಿಕ್ಷಣ ಕೇಂದ್ರಗಳಾಗಿರದೇ ಅವುಗಳು ಧಾರ್ಮಿಕ ರೂಢಿ-ಪರಂಪರೆಗಳನ್ನು ಕಲಿಸುವ ಕೇಂದ್ರಗಳಾಗಿವೆ’ ಎಂಬ ಸ್ಪಷ್ಟವಾದ ತೀರ್ಪು ನೀಡಿತ್ತು. ಇದರ ಆಧಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮದರಸಾಗಳಿಗೆ ಶಿಕ್ಷಣದ ಹೆಸರಿನಲ್ಲಿ ಧನಸಹಾಯ ನೀಡುವುದು, ಮದರಸಾಗಳನ್ನು ತೆರೆಯುವುದು ಹಾಗೂ ಮಕ್ಕಳನ್ನು ಒಟ್ಟುಗೂಡಿಸುವುದನ್ನು ಸಂಪೂರ್ಣವಾಗಿ ತಡೆಯಬೇಕು. ಹಾಗೆಯೇ ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ಶೈಕ್ಷಣಿಕ ನಿಲುವನ್ನು ದೇಶದಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇದರಿಂದ ದೇಶದಲ್ಲಿ ಮೂಲಭೂತವಾದಿ ಮಾನಸಿಕತೆಯುಳ್ಳ ಆಕ್ರಮಣಕಾರರು ತಯಾರಾಗುವುದಿಲ್ಲ, ಎಂದು ರಾಜಸ್ಥಾನ ಉಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಅಧ್ಯಯನಕಾರರಾದ ಮೋತಿಸಿಂಹ ರಾಜಪುರೋಹಿತರವರು ಪ್ರತಿಪಾದಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾದ ‘ಮದರಸಾಗಳು ಭಯೋತ್ಪಾದನೆಯ ಕೇಂದ್ರಗಳಾಗುತ್ತಿವೆಯೇ ?’ ಈ ವಿಷಯದ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ನವ ದೆಹಲಿಯ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ. ದೀಪಕ ಶರ್ಮಾರವರು ಮಾತನಾಡುತ್ತ್ತಾ, ದೆಹಲಿಯ ಸೀಲಮಪೂರ ಎಂಬ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿನ ಮದರಸಾಗಳ ಸಮೀಕ್ಷೆ ಮಾಡಲು ಹೋದಂತಹ ಓರ್ವ ರಾಷ್ಟ್ರೀಯ ವಾರ್ತಾವಾಹಿನಿಯ ಪತ್ರಕರ್ತನನ್ನು ಮತಾಂಧರು ಬಂಧಿಸಿ ಥಳಿಸಿದರು. ಕನ್ಹಯ್ಯಾಲಾಲನಂತೆ ಅವನ ಹತ್ಯೆಯಾಗದಿರುವುದು ಅವನ ಅದೃಷ್ಟವಾಗಿದೆ. ಇದೇ ಜಾಗದಲ್ಲಿ ೨೦೨೦ ರಲ್ಲಿ ಭೀಕರ ದಂಗೆ ನಡೆದಿತ್ತು. ಇದರಲ್ಲಿ ‘ಆಮ್ ಆದಮೀ ಪಕ್ಷದ ನಗರಸೇವಕರಾದ ತಾಹಿರ ಹುಸೇನನನ್ನು ಪ್ರಮುಖ ಆರೋಪಿ ಎಂದು ಬಂಧಿಸಲಾಗಿತ್ತು. ಹುಸೇನನಿಗೆ ಭಾರತದ ೩೦ ಮದರಸಾಗಳೊಂದಿಗೆ ನೇರವಾದ ಸಂಬಂಧವಿತ್ತು. ಮದರಸಾಗಳಲ್ಲಿ ಮಕ್ಕಳಿಗೆ ಹೊರಗಿನ ಜಗತ್ತಿನೊಂದಿಗೆ ಸಂಪರ್ಕವಾಗಲು ಬಿಡದೇ ಮೂಲಭೂತವಾದದ ಶಿಕ್ಷಣ ನೀಡಲಾಗುತ್ತಿದೆ. ಇದರಿಂದಾಗಿ ದೆಹಲಿಯಲ್ಲಿ ಮುಂದಿನ ಪರಿಸ್ಥಿತಿಯು ಭೀಕರವಾಗಲಿದೆ, ಎಂದು ಹೇಳಿದರು.

ಈ ಸಮಯದಲ್ಲಿ ‘ಸನಾತನ ಸಂಸ್ಥೆ’ಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕರವರು ಮಾತನಾಡುತ್ತಾ, ೯/೧೧ರ ಪ್ರಕರಣದಲ್ಲಿನ ಸತ್ಯಶೋಧನ ಸಮಿತಿಯು ಮಾಡಿರುವ ಅಧ್ಯಯನದಲ್ಲಿ ಭಯೋತ್ಪಾದನಾ ಹಲ್ಲೆಗೆ ಮದರಸಾಗಳೊಂದಿಗೆ ಸಂಬಂಧವಿರುವುದು ಕಂಡುಬಂದಿದೆ. ಆಸ್ಸಾಂ ರಾಜ್ಯದಲ್ಲಿಯೂ ಕೆಲವು ಮದರಸಾಗಳ ಸಂಬಂಧವು ‘ಅಲ್-ಕಾಯದಾ’ ಎಂಬ ಭಯೋತ್ಪಾದನಾ ಸಂಘಟನೆಯೊಂದಿಗೆ ಇರುವುದು ಬಹಿರಂಗವಾದಾಗ ಅಲ್ಲಿನ ಮದರಸಾಗಳನ್ನು ಕೆಡವಲಾಯಿತು. ಅಲ್ಲಿನ ಮುಖ್ಯಮಂತ್ರಿಗಳು ಮದರಸಾಗಳ ವಿಷಯದಲ್ಲಿ ಹೊಸ ಕಾನೂನನ್ನು ರಚಿಸಿ ಎಲ್ಲ ಮದರಸಾಗಳನ್ನು ಶಾಲೆಗಳಾಗಿ ರೂಪಾಂತರ ಮಾಡಿದರು. ವಾಸ್ತವದಲ್ಲಿ ದೇಶದಲ್ಲಿನ ಎಲ್ಲ ರಾಜ್ಯಗಳ ಸರಕಾರಗಳು ಇದರ ಅನುಕರಣೆ ಮಾಡಬೇಕಿದೆ. ಏಕೆಂದರೆ ಉತ್ತರಪ್ರದೇಶವೊಂದರಲ್ಲಿಯೇ ೪೦ ಸಾವಿರ ಮದರಸಾಗಳು ಅನಧಿಕೃತವಾಗಿರುವುದು ಬೆಳಕಿಗೆ ಬಂದಿದೆ, ಹೀಗಿರುವಾಗ ದೇಶದಾದ್ಯಂತ ಅನಧಿಕೃತ ಮದರಸಾಗಳ ಸಂಖ್ಯೆ ಎಷ್ಟೋ ಪಟ್ಟು ಹೆಚ್ಚಿರಬಹುದು ! ಉತ್ತರ ಪ್ರದೇಶದ ಮದರಸಾಗಳ ಡಿಜಿಟಲೈಸೇಶನ್ ಮಾಡಿದಾಗ ಅಲ್ಲಿ ೧೦೦ ಕೋಟಿ ರೂಪಾಯಿಗಳ ಹಗರಣವಾಗಿರುವುದು ಕಂಡುಬಂದಿದೆ, ಆದುದರಿಂದ ದೇಶದಾದ್ಯಂತ ಇರುವ ಎಲ್ಲ ಮದರಸಾಗಳ ಸಮೀಕ್ಷೆ ನಡೆಯಬೇಕು, ಎಂದು ಹೇಳಿದರು.