ವಿಶೇಷ ಸಂವಾದ : ‘ಜ್ಞಾನವಾಪಿ ಮಸೀದಿಯ ಸಮೀಕ್ಷೆ : ನ್ಯಾಯಾಲಯದ ಆದೇಶ ಸರ್ವೋಚ್ಚವೋ ಅಥವಾ ಮುಸಲ್ಮಾನರ ಗುಂಪುತಂತ್ರವೋ ?’

ಕಾಶಿ, ಮಥುರಾದಲ್ಲಿ ಹಿಂದೂ ಧಾರ್ಮಿಕಸ್ಥಳಗಳಿಗಾಗಿ ನಮ್ಮ ಸಾಂಸ್ಕೃತಿಕ ಹೋರಾಟ ಮುಂದುವರಿಯುವುದು ! – ನ್ಯಾಯವಾದಿ ಮದನ ಮೋಹನ ಯಾದವ

ನ್ಯಾಯಾಲಯದ ಆದೇಶದಂತೆ ವಾರಣಾಸಿಯಲ್ಲಿನ ಜ್ಞಾನವಾಪಿ ಮಸೀದಿಯ ಸಮೀಕ್ಷೆ ವಿರೋಧಿಸಿ ವಾರಾಣಸಿಯ ಮುಸಲ್ಮಾನರು ಆಯುಕ್ತರನ್ನು ಮತ್ತು ವಕೀಲರನ್ನು ಮಸೀದಿಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಇದು ಅವರ ದುಷ್ಟತನ ಮತ್ತು ದುರಹಂಕಾರವಾಗಿದೆ. ಅವರು ಪದೇ ಪದೇ ನ್ಯಾಯಾಲಯದ ಅವಮಾನ ಮಾಡುತ್ತಿದ್ದಾರೆ. ಅವರು ತಮ್ಮನ್ನು ನ್ಯಾಯಾಲಯಕ್ಕಿಂತ ದೊಡ್ಡವರೆಂದು ತಿಳಿಯುತ್ತಾರೆ. ವಾಸ್ತವದಲ್ಲಿ ಈ ದೇಶದಲ್ಲಿ ಮುಸಲ್ಮಾನರ ಪ್ರತಿಯೊಂದು ಬೇಡಿಕೆಯನ್ನೂ ಮನ್ನಿಸಲಾಗಿದೆ, ನ್ಯಾಯಾಲಯದ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ಸಿಕ್ಕರೂ ಕಾಶಿ, ಮಥುರಾದಲ್ಲಿರುವ ಹಿಂದೂ ಧಾರ್ಮಿಕಸ್ಥಳಗಳಿಗಾಗಿ ನಮ್ಮ ಸಾಂಸ್ಕೃತಿಕ ಹೋರಾಟ ಮುಂದುವರಿಯಲಿದೆ, ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯವಾದಿ ಮದನ್ ಮೋಹನ್ ಯಾದವ್ ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಜ್ಞಾನವಾಪಿ ಮಸೀದಿ ಸಮೀಕ್ಷೆ : ನ್ಯಾಯಾಲಯದ ಆದೇಶ ಸರ್ವೋಚ್ಚವೋ ಅಥವಾ ಮುಸಲ್ಮಾನರ ಗುಂಪುತಂತ್ರವೋ’ ಈ ಆನ್‌ಲೈನ್ ವಿಶೇಷ ಸಂವಾದದಲ್ಲಿಮಾತನಾಡುತ್ತಿದ್ದರು.

ಈ ವೇಳೆ ‘ಕಾಶಿ ಜ್ಞಾನವಾಪಿ ಅಭಿಮುಕ್ತ ನ್ಯಾಸ’ದ ಅಧ್ಯಕ್ಷ ಪಂಡಿತ ಹರಿಹರ ಪಾಂಡೆಯ ಇವರು ಮಾತನಾಡುತ್ತಾ, ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಮುಸಲ್ಮಾನರೇಕೆ ಹೆದರುತ್ತಾರೆ ? ಅಲ್ಲಿ ನಮ್ಮ ಶಿವಲಿಂಗವಿದೆ ಮತ್ತು ದೇವತೆಗಳ ಚಿತ್ರಗಳಿವೆ, ಈ ಸತ್ಯವು ಬೆಳಕಿಗೆ ಬರುತ್ತದೆ ಎಂಬ ಭಯವಿದೆಯೇ ? ಅವು ನಿಜವೇ ಆಗಿದ್ದರೆ ಸಮೀಕ್ಷೆ ಆಗಲಿ ! ನ್ಯಾಯಾಲಯದ ಫಲಿತಾಂಶವು ಅಂತಿಮ ಮತ್ತು ಸರ್ವಾನುಮತದಿಂದ ಕೂಡಿದೆ; ಆದರೆ ಅವರು ಒಪ್ಪಲಿಲ್ಲ. ಇನ್ನುಮುಂದೆ ಮತಾಂಧ ಗುಂಪಿನದ್ದು ಏನೂ ನಡೆಯುವುದಿಲ್ಲ. ಕಾಶಿಯ ದೇವಸ್ಥಾನ ನಮ್ಮದಾಗಿತ್ತು ಮತ್ತು ನಮಗೆ ಪಡೆಯುತ್ತೇವೆಯೇ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿಯವರು ಮಾತನಾಡುತ್ತಾ, ಮುಸಲ್ಮಾನರು ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ಅಡ್ಡಿಪಡಿಸಿದ ವಿಷಯದಲ್ಲಿ ತಥಾಕಥಿತ ಜಾತ್ಯತೀತವಾದಿಗಳೆಂದು ಕರೆಸಿಕೊಳ್ಳುವವರು ಈಗ ಮೌನವಾಗಿದ್ದಾರೆ ! ಈಗ ಅವರು ದೇಶದ ಸಂವಿಧಾನ ಮತ್ತು ಕಾನೂನು ಅಪಾಯದಲ್ಲಿದೆ ಎಂದು ಕೂಗುವುದಿಲ್ಲ ! ಮುಸಲ್ಮಾನರ ಗುಂಪುತಂತ್ರ ಪ್ರಾಬಲ್ಯ ಮುಂದುವರಿದರೆ ನ್ಯಾಯಾಂಗದ ಮೇಲಿನ ಜನರ ನಂಬಿಕೆ ಛಿದ್ರವಾಗುತ್ತದೆ. ಹೇಗೆ ಉತ್ತರ ಪ್ರದೇಶದಲ್ಲಿ ಗಲಭೆಕೋರರ ಅತಿಕ್ರಮಣದ ಮೇಲೆ ಯೋಗಿ ಸರಕಾರದಂತೆಯೇ ಬುಲ್ಡೋಜರ್ ಓಡಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು. ಈ ವೇಳೆ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ಶ್ರೀ. ವಿನೋದ್ ಬನ್ಸಾಲ್ ಅವರು ಮಾತನಾಡುತ್ತಾ, ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಏಕೆ ನಿಲ್ಲಿಸಲಾಗುತ್ತಿದೆ ? ಈ ಮಸೀದಿಯಲ್ಲಿ ಏನಿದೆ ಎಂದು ಮರೆಮಾಚಲಾಗಿದೆ ? ಸತ್ಯ ಎಲ್ಲರ ಮುಂದೆ ಬರುವುದು ಅಗತ್ಯವಿದೆ. ಈ ಮಸೀದಿಯ ಸಮೀಕ್ಷೆಗೆ ಅಡ್ಡಿಪಡಿಸಿದವರ ವಿರುದ್ಧ ನ್ಯಾಯಾಂಗ ನಿಂದನೆ ಮಾಡಿದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.