ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪಾಲಿಸದ ಎಲ್ಲಾ ರಾಜ್ಯ ಸರಕಾರಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ! – ಶ್ರೀ. ಈಶ್ವರಪ್ರಸಾದ ಖಂಡೇಲವಾಲ

ವಿಶೇಷ ಸಂವಾದ : ಮಸೀದಿಗಳ ಮೇಲಿನ ಬೋಂಗಾಗಳಿಂದಾಗುವ ಧ್ವನಿಮಾಲಿನ್ಯ : ಕಾನೂನು ಮತ್ತು ನ್ಯಾಯಾಲಯ ಏನು ಹೇಳುತ್ತದೆ ?

ಅಜಾನ್ ನೀಡುವುದು ಧಾರ್ಮಿಕ ಹಕ್ಕು ಆಗಿರಬಹುದು; ಆದರೆ ಅದಕ್ಕಾಗಿ ಮಸೀದಿಗಳ ಮೇಲೆ ಬೋಂಗಾ ಅಳವಡಿಸುವುದು ಧಾರ್ಮಿಕ ಹಕ್ಕು ಆಗಿರಲು ಸಾಧ್ಯವೇ ಇಲ್ಲ. ಅದೇ ರೀತಿ ಧ್ವನಿಮಾಲಿನ್ಯ ಮಾಡುವ ಮೂಲಕ ಇತರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ವೋಚ್ಚ ನ್ಯಾಯಾಲಯ ಮತ್ತು ದೇಶದ ಸುಮಾರು ೧೫ ಉಚ್ಚ ನ್ಯಾಯಾಲಯಗಳ ಸ್ಪಷ್ಟ ಆದೇಶಗಳಿವೆ. ಹೇಗೆ ಬಾಬರಿ ಮಸೀದಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸದ ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳಲಾಗಿತ್ತೋ ಅದೇ ರೀತಿ ಮಸೀದಿಗಳಲ್ಲಿನ ಬೋಂಗಾಗಳಿಂದಾಗುವ ಧ್ವನಿಮಾಲಿನ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲದ ಕಾರಣ ದೇಶದ ಎಲ್ಲಾ ರಾಜ್ಯ ಸರಕಾರಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳಬೇಕೆಂದು ‘ಲಷ್ಕರೆ-ಎ-ಹಿಂದ’ನ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಈಶ್ವರಪ್ರಸಾದ ಖಂಡೇಲವಾಲ ಇವರು ಖಂಡತುಂಡವಾಗಿ ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಮಸೀದಿಗಳ ಮೇಲಿನ ಬೋಂಗಾಗಳಿಂದಾಗುವ ಧ್ವನಿಮಾಲಿನ್ಯ : ಕಾನೂನು ಮತ್ತು ನ್ಯಾಯಾಲಯ ಏನು ಹೇಳುತ್ತದೆ ? ಈ ಕುರಿತು ಆನ್‌ಲೈನ್ ‘ವಿಶೇಷ ಸಂವಾದ’ದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವೈಭವ ಆಫಳೆ ಮತ್ತು ಕು. ಕ್ರಾಂತಿ ಪೇಠಕರ್ ಇವರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಶ್ರೀ. ಖಂಡೇಲವಾಲ ಇವರು, ಪ್ರಾರ್ಥನಾಸ್ಥಳಗಳಲ್ಲಿ ಹಾಕಲಾಗುವ ಬೋಂಗಾಗಳನ್ನು ಧಾರ್ಮಿಕದ ಬದಲಾಗಿ ಸಮಾಜದಲ್ಲಿ ಘನತೆಯನ್ನು ಹಾಗೂ ದ್ವೇಷವನ್ನು ನಿರ್ಮಾಣ ಮಾಡಲು ಬಳಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ರಮಜಾನ ತಿಂಗಳಿನಲ್ಲಿ ಮಸೀದಿಗಳ ಮೇಲಿನ ಬೋಂಗಾಗಳ ಮೂಲಕ ಆಜಾನ ಹೇಳಲು ಅನುಮತಿ ನೀಡುವಂತೆ 2020 ರಲ್ಲಿ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಬಸಪದ ಸಂಸದ ಅಫ್ಜಲ್ ಅನ್ಸಾರಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ತೀರ್ಪು ನೀಡಿದ ಉಚ್ಚ ನ್ಯಾಯಾಲಯವು ‘ಧ್ವನಿವರ್ಧಕಗಳನ್ನು ಬಳಸದೆ ಮಸೀದಿಯ ಮಿನಾರ್‌ನಿಂದ ಅಜಾನ್ ನೀಡಬೇಕು’ ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಅವಶ್ಯಕತೆ ಇಲ್ಲದವರಿಗೆ ಅಥವಾ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಆಜಾನ ಕೇಳಿಸುವುದು, ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅನುಮತಿಯಿಲ್ಲದೆ ಬೋಂಗಾ ಬಳಸಿ ಮತ್ತು ಧ್ವನಿಮಾಲಿನ್ಯ ಕಾಯ್ದೆಯನ್ನು ಉಲ್ಲಂಘಿಸಿ ಯಾರಾದರು ಆಜಾನ್ ನೀಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಒಂದೆಡೆ, ಹಿಂದೂಗಳು ಮೊಸರುಕುಡಿಕೆ ಅಥವಾ ಇತರ ಧಾರ್ಮಿಕ ಉತ್ಸವಗಳ ಬಗ್ಗೆ ನ್ಯಾಯಾಲಯದ ತೀರ್ಪು ಬಂದ ತಕ್ಷಣವೇ ಪಾಲಿಸುತ್ತಾರೆ ಮತ್ತು ಸರಕಾರವು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ; ಆದರೆ, ಮುಸ್ಲಿಮರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪನ್ನು ಮುಸ್ಲಿಮರು ಪಾಲಿಸುವುದಿಲ್ಲ ಎಂಬುದು ಕರ್ನಾಟಕ ಹಿಜಾಬ್ ಪ್ರಕರಣದಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ತದ್ವಿರುದ್ಧವಾಗಿ, ಅನೇಕ ಮೌಲಾನಾಗಳು ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡುತ್ತಾರೆ. ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಯಬೇಕೆಂಬ ಬೇಡಿಕೆಯು ನಿಷ್ಪ್ರಯೋಜಕ ಚರ್ಚೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಹೇಳಿದ್ದಾರೆ. ಇದು ಮುಸಲ್ಮಾನರನ್ನು ಓಲೈಸಲು ದೇಶಾದ್ಯಂತ ನಡೆಯುತ್ತಿದೆ. ವಾಸ್ತವದಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು 15 ಉಚ್ಚ ನ್ಯಾಯಾಲಯಗಳ ಆದೇಶಗಳನ್ನು ರಾಜ್ಯ ಸರಕಾರವು ತಾನಾಗಿಯೇ ಪಾಲಿಸಬೇಕು, ಎಂದು ಕೂಡ ಶ್ರೀ. ಖಂಡೇಲವಾಲ ಕೊನೆಯಲ್ಲಿ ಹೇಳಿದರು.