ಮತಾಂತರ ಕೇಂದ್ರಗಳಾಗಿರುವ ಕಾನ್ವೆಂಟ್ ಶಾಲೆಗಳನ್ನು ಕೇಂದ್ರ ಸರಕಾರ ಪರಿಶೀಲಿಸಬೇಕು ! – ಕರ್ನಲ್ ರಾಜೇಂದ್ರ ಶುಕ್ಲಾ, ಸೇವಾನಿವೃತ್ತ ಅಧಿಕಾರಿ, ಭಾರತೀಯ ಸೇನೆ

‘ಕ್ರೈಸ್ತ ಕಾನ್ವೆಂಟ್‌ಗಳಾ ಅಥವಾ ಮತಾಂತರದ ಕೇಂದ್ರಗಳೇ ?’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದ !

ಕಾನ್ವೆಂಟ್ ಶಾಲೆಗಳಲ್ಲಿ ಕ್ರೈಸ್ತ ಪಂಥದ ಶಿಕ್ಷಣ ನೀಡುವುದು, ವಿವಿಧ ಮಾಧ್ಯಮಗಳಿಂದ ಮತಾಂತರ ಮಾಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸ್ವಾತಂತ್ರ್ಯಪೂರ್ವದಿಂದಲೂ ಕಾನ್ವೆಂಟ್ ಶಾಲೆಗಳಲ್ಲಿ ನಿಖರವಾಗಿ ಏನು ಕಲಿಸಲಾಗುತ್ತದೆ ?, ದೇಶದ ಸಂವಿಧಾನವನ್ನು ಪಾಲಿಸುತ್ತಾ ಅಲ್ಲಿ ಶಿಕ್ಷಣ ನೀಡಲಾಗುತ್ತದೆಯೇ ?, ಇದರ ಬಗ್ಗೆ ಇಲ್ಲಿಯವರೆಗಿನ ಯಾವುದೇ ಸರಕಾರವು ವಿಚಾರಣೆಯನ್ನು ಮಾಡಿಲ್ಲ. ಕಾನ್ವೆಂಟ್ ಶಾಲೆಗಳ ಆದಾಯದ ಮೂಲ ಏನಿದೆ ? ಕಡಿಮೆಪಕ್ಷ ಈಗಿನ ಕೇಂದ್ರ ಸರಕಾರವಾದರೂ ಮತಾಂತರ ಕೇಂದ್ರಗಳಾಗಿರುವ ಕಾನ್ವೆಂಟ್ ಶಾಲೆಗಳನ್ನು ಪರಿಶೀಲಿಸಬೇಕು ಎಂದು ಭಾರತೀಯ ಸೇನೆಯ ಸೇವಾನಿವೃತ್ತ ಅಧಿಕಾರಿ ಕರ್ನಲ್ ರಾಜೇಂದ್ರ ಶುಕ್ಲಾ ಆಗ್ರಹಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ್ದ ‘ಕ್ರೈಸ್ತ ಕಾನ್ವೆಂಟ್ ಅಥವಾ ಮತಾಂತರದ ಕೇಂದ್ರಗಳೇ ?’ ಎಂಬ ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ತೆಲಂಗಾಣದ ‘ಕ್ರಿಶ್ಚಿಯನ್ ಸ್ಟಡಿಸ್’ನ ಅಭ್ಯಾಸಕರಾದ ಈಸ್ಟರ್ ಧನರಾಜ್ ಇವರು ಮಾತನಾಡುತ್ತಾ, ಭಾರತದಲ್ಲಿ ಬಂದಿದ್ದ ಈಸ್ಟ್ ಇಂಡಿಯಾ ಕಂಪನಿಯ ಕಾಲದಿಂದಲೂ ಕ್ರೈಸ್ತ ಮಿಷನರಿಗಳು ಸ್ಥಾಪಿಸಿದ ಕಾನ್ವೆಂಟ್ ಶಾಲೆಗಳ ಏಕೈಕ ಗುರಿ ಹಿಂದೂ ವಿದ್ಯಾರ್ಥಿಗಳನ್ನು ಮತಾಂತರ ಮಾಡುವುದಾಗಿದೆ. ಹಿಂದೂ ವಿದ್ಯಾರ್ಥಿಗಳನ್ನು ಮತಾಂತರಿಸುವ ಮೂಲಕ ಕ್ರೈಸ್ತರ ಜನಸಂಖ್ಯೆಯನ್ನು ಹೆಚ್ಚಿಸುವುದು, ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿಸುವುದು, ಹೀಗೆ ದೇಶದ ಸ್ಥಿತಿಯನ್ನು ಕೇರಳದಂತಹ ಸ್ಥಿತಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ದೆಹಲಿಯ ಲೇಖಕಿ ಡಾ. ರಿಂಕು ವಢೇರಾ ಇವರು ಮಾತನಾಡುತ್ತಾ, ಭಾರತದ ಸ್ವಾತಂತ್ರ್ಯಪೂರ್ವದಿಂದಲೂ ಕ್ರೈಸ್ತ ಮಿಷನರಿಗಳು ಹಿಂದೂ ಪರಂಪರೆಯನ್ನು ನಾಶ ಮಾಡಲು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕೈಹಾಕಿದರು. ಅವರ ಜಾಲವನ್ನು ದೇಶಾದ್ಯಂತ ಹರಡಿಕೊಂಡಿದ್ದು, ಇಂದಿಗೂ ಪಾಲಕರು ‘ಕಾನ್ವೆಂಟ್ ಶಿಕ್ಷಣವೇ ಉತ್ತಮ’ ಎಂದು ಭಾವಿಸುತ್ತಿದ್ದಾರೆ; ಆದರೆ ಈಗ ಹಿಂದೂ ಪೋಷಕರು ಮೊದಲಿಗಿಂತ ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಅಂತಹ ಶಾಲೆಗಳಲ್ಲಿನ ತಪ್ಪುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಮಾತನಾಡುತ್ತಾ, ಕಾನ್ವೆಂಟ್ ಶಾಲೆಗಳು ಕೇವಲ ಬೈಬಲ್ ಬೋಧನೆ ಮಾಡುತ್ತಿಲ್ಲ, ‘ಕ್ರೈಸ್ತ (ಯೇಸು) ಕೇಂದ್ರಿತ ವಾತಾವರಣ’ ನಿರ್ಮಿಸಲಾಗುತ್ತಿದೆ. ಈ ಶಾಲೆಗಳಲ್ಲಿ ಹಿಂದೂ ಮಕ್ಕಳಿಗೆ ಬೈಬಲ್ ಓದಲು ಕಡ್ಡಾಯ ಮಾಡಲಾಗುತ್ತಿದೆ. ಇದು ‘ಮಕ್ಕಳ ರಕ್ಷಣಾ ಕಾಯ್ದೆ’ಗೆ ವಿರುದ್ಧವಾಗಿದೆ. ದೇಶದ ಪ್ರತಿಯೊಂದು ಶಾಲೆಯಲ್ಲಿ ಶಿಕ್ಷಣವು ಸಂವಿಧಾನದ ಮೌಲ್ಯಕ್ಕನುಸಾರ ಆಗಬೇಕು; ಆದರೆ ಕಾನ್ವೆಂಟ್ ಶಾಲೆಗಳಲ್ಲಿ ಈ ರೀತಿಯಲ್ಲಿ ಆಗುತ್ತಿರುವುದು ಕಂಡು ಬರುತ್ತಿಲ್ಲ. ಬೈಬಲ್ ಕಲಿಸುವ ಮೂಲಕ ಮಕ್ಕಳಿಗೆ ಹಿಂಸೆ ನೀಡಲಾಗುತ್ತಿದೆ. ಅದಕ್ಕಾಗಿಯೇ ನಾವು ಅದನ್ನು ವಿರೋಧಿಸುತ್ತಿದ್ದೇವೆ. ಇದಕ್ಕಾಗಿ ಕಾನ್ವೆಂಟ್ ಶಾಲೆಗಳ ವಿದ್ಯಾರ್ಥಿಗಳ ಪೋಷಕರು ಮುಂದೆ ಬಂದು ತಮ್ಮ ದೂರುಗಳನ್ನು ಸಲ್ಲಿಸುವಂತೆ ಮನವಿ ಮಾಡುತ್ತಿದ್ದೇವೆ. ಹೆಚ್ಚಿನ ಹಿಂದೂ ವಿದ್ಯಾರ್ಥಿಗಳು ಪ್ರಸ್ತುತ ಅನೇಕ ಕಾನ್ವೆಂಟ್ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದರೂ ಈ ಶಾಲೆಗಳನ್ನು ‘ಅಲ್ಪಸಂಖ್ಯಾತ ಸ್ಥಾನಮಾನ’ ಅಡಿಯಲ್ಲಿ ವಿಶೇಷ ಸೌಲಭ್ಯಗಳೊಂದಿಗೆ ಏಕೆ ನಡೆಸಲಾಗುತ್ತಿದೆ, ಎಂಬುದನ್ನು ಸಹ ನೋಡಬೇಕು ಎಂದು ಹೇಳಿದರು.