ಎಲ್ಲಿಯವರೆಗೆ ಹಿಂದೂ ಸಮಾಜ ವಿರೋಧಿಸುವುದಿಲ್ಲವೋ, ಅಲ್ಲಿಯವರೆಗೆ ಹಿಂದೂ ಹಬ್ಬ ಹರಿದಿನಗಳಲ್ಲಿ ಜಿಹಾದಿ ದಾಳಿ ನಿಲ್ಲುವುದಿಲ್ಲ ! – ನ್ಯಾಯವಾದಿ ಮೋತಿಸಿಂಹ ರಾಜಪುರೋಹಿತ್

‘ದೇಶಾದ್ಯಂತ ರಾಮನವಮಿ ಮೆರವಣಿಗೆಗಳ ಮೇಲೆ ಜಿಹಾದಿ ದಾಳಿ !’ ಕುರಿತು ವಿಶೇಷ ಸಂವಾದ !

ಹಿಂದೂ ಹೊಸ ವರ್ಷ, ಶ್ರೀ ರಾಮ ನವಮಿ, ಶ್ರೀ ಹನುಮಾನ ಜಯಂತಿ ಮುಂತಾದ ಹಿಂದೂ ಹಬ್ಬಗಳ ಸಮಯದಲ್ಲಿ ದೇಶಾದ್ಯಂತ ನಡೆಸಿಸಲಾದ ಶೋಭಾಯಾತ್ರೆಗಳಲ್ಲಿ ಜಿಹಾದಿ ವೃತ್ತಿಯವರಿಂದ ಭೀಕರ ದಾಳಿಗಳು ಆಯಿತು. ಈ ಹಿಂದೂ-ಮುಸ್ಲಿಂ ಗಲಭೆಗಳು ಹೊಸದೇನಲ್ಲ, ಆದರೆ ಇದು ಭಯೋತ್ಪಾದಕ ವೃತ್ತಿಯ ಜಿಹಾದಿಗಳ ಯೋಜನಾಬದ್ಧವಾಗಿ ಆಗಿರುವ ಏಕಪಕ್ಷೀಯ ದಾಳಿಯಾಗಿತ್ತು. ಕರೌಲಿ ದಾಳಿಯಲ್ಲಿ ಭಾಗಿಯಾಗಿರುವ ರಾಜಸ್ಥಾನ ಸರಕಾರದ ಆಡಳಿತ ಪಕ್ಷದ ಜನಪ್ರತಿನಿಧಿಗಳು ಮತ್ತು ಇತರ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ದೂರದ ಮಾತಾಯಿತು, ಅವರ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾದ ನಂತರವೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಸರಕಾರ ಅವರನ್ನು ರಕ್ಷಿಸುತ್ತಿದೆ. ಯಾರು ಬಲವಾಗಿ ಪ್ರತಿಕಾರ ಮತ್ತು ವಿರೋಧಿಸುತ್ತಾರೆಯೋ ಅವರ ಧ್ವನಿಯನ್ನು ಸರಕಾರ ಮತ್ತು ನ್ಯಾಯಾಲಯಗಳು ಆಲಿಸುತ್ತವೆ. ಆದ್ದರಿಂದ ಬಹುಸಂಖ್ಯಾತ ಹಿಂದೂ ಸಮಾಜವು ಇಂತಹ ದಾಳಿಗಳನ್ನು ಯೋಗ್ಯ ರೀತಿಯಲ್ಲಿ ಪ್ರತಿಕಾರ ಮತ್ತು ವಿರೋಧಿಸದ ಹೊರತು ಈ ಘಟನೆಗಳು ನಿಲ್ಲುವುದಿಲ್ಲ ಎಂದು ರಾಜಸ್ಥಾನ ಉಚ್ಚ ನ್ಯಾಯಾಲಯದ ನ್ಯಾಯವಾದಿ ಮೋತಿಸಿಂಹ ರಾಜಪುರೋಹಿತ್ ಇವರು ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ದೇಶಾದ್ಯಂತ ರಾಮನವಮಿ ಮೆರವಣಿಗೆಗಳ ಮೇಲೆ ಜಿಹಾದಿ ದಾಳಿ!’ ಎಂಬ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ‘ಲಷ್ಕರೆ-ಎ-ಹಿಂದ್’ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಈಶ್ವರಪ್ರಸಾದ್ ಖಂಡೇಲ್ವಾಲ್ ಇವರು, ಮುಸ್ಲಿಮರಲ್ಲಿ ಜಿಹಾದಿ ಸಿದ್ಧಾಂತ ಉತ್ತುಂಗಕ್ಕೇರಿದಾಗ ಇಂತಹ ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳು ಕೇವಲ ಭಾರತದಲ್ಲಿ ಹಿಂದೂಗಳ ವಿಷಯದಲ್ಲಿ ಮಾತ್ರವಲ್ಲ, ಪಾಕಿಸ್ತಾನ, ಅಫ್ಘಾನಿಸ್ತಾನ, ಪ್ಯಾಲೆಸ್ತೀನ್ ಮೊದಲಾದ ಇಸ್ಲಾಮಿಕ್ ರಾಷ್ಟ್ರಗಳಲ್ಲೂ ನಡೆಯುತ್ತಿವೆ. ಈ ಜಿಹಾದಿ ತಂತ್ರಕ್ಕೆ ಬಲಿಯಾಗಿ ಪಾಕಿಸ್ತಾನ ಬಿಟ್ಟುಕೊಟ್ಟೆವು; ಆದರೂ ಈ ಜನರು ಸುಮ್ಮನೆ ಕುಳಿತುಕೊಳ್ಳಲು ಸಿದ್ಧರಿಲ್ಲ. ಈ ದೇಶದ ಜಾತ್ಯತೀತ ಪ್ರಸಾರ ಮಾಧ್ಯಮಗಳು, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಜಿಹಾದಿ ಪ್ರವೃತ್ತಿಯನ್ನು ಪೋಷಿಸುವ ಕೆಲಸ ಮಾಡುತ್ತಿವೆ. ಆದ್ದರಿಂದ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಿಂದ ಈ ಭಯೋತ್ಪಾದಕ ಪ್ರವೃತ್ತಿಯನ್ನು ನಿಲ್ಲಿಸುವುದು ಕಷ್ಟಕರವಾಗಿದ್ದು, ಇದಕ್ಕೆ ನೇರ ಮಿಲಿಟರಿ ಕ್ರಮದ ಅಗತ್ಯವಿರುತ್ತದೆ ಎಂದು ಹೇಳಿದರು.

ಈ ಸಮಯದಲ್ಲಿ ಮಾತನಾಡಿದ ‘ಹಿಂದೂ ವಿದಿಜ್ಞ ಪರಿಷದ್’ ಸಂಘಟಕ ನ್ಯಾಯವಾದಿ ನಿಲೇಶ ಸಾಂಗೊಲಕರ ಇವರು, 1990 ರಲ್ಲಿ ಕಾಶ್ಮೀರದಲ್ಲಿ ನಡೆದದ್ದೇ ರಾಜಸ್ಥಾನದ ಕರೌಲಿ, ಮಧ್ಯಪ್ರದೇಶದ ಖರಗೊನ ಹಾಗೂ ದೇಶದಾದ್ಯಂತ ನಡೆಯುತ್ತಿದೆ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳುವ ಆವಶ್ಯಕತೆ ಇದೆ. ನಮ್ಮ ತೇಜಸ್ವೀ ರಾಷ್ಟ್ರಪುರುಷರ ಮತ್ತು ಮಹಾನ್ ರಾಜರ ಇತಿಹಾಸವನ್ನು ನಾವು ನೆನಪಿಸಿಕೊಳ್ಳುವುದು ಅಗತ್ಯವಾಗಿದೆ. ಓಡಿಹೋಗುವುದು ಪರಿಹಾರವಲ್ಲ, ಬದಲಾಗಿ ವಿರೋಧಿಸುವುದು ಏಕೈಕ ಪರಿಹಾರವಾಗಿದೆ. ಎಲ್ಲಿಯವರೆಗೆ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲವೋ ಅಲ್ಲಿಯವರೆಗೆ ಗಲಭೆಕೋರರ ವಿರುದ್ಧ ಕ್ರಮಕೈಗೊಳ್ಳಲಾಗುವುದಿಲ್ಲ ಎಂಬುದು ಇಲ್ಲಿಯವರೆಗಿನ ಅನುಭವವಾಗಿದೆ. ಗಲಭೆಕೋರರ ವಿರುದ್ಧ ಕಾರ್ಯಾಚರಣೆಗೆ ಸರಕಾರದ ಬಳಿ ದೂರು, ಪತ್ರ ವ್ಯವಹಾರ, ಮಾಹಿತಿ ಹಕ್ಕು, ನ್ಯಾಯಾಲಯದ ಹೋರಾಟ ಮುಂತಾದವುಗಳ ಮೂಲಕ ಒತ್ತಡ ನಿರ್ಮಾಣ ಮಾಡಬೇಕು ಎಂದು ಹೇಳಿದರು.