ಹುಬ್ಬಳ್ಳಿಯಲ್ಲಿ ಹನುಮಾನ್ ಮಂದಿರ, ಪೊಲೀಸ್ ಠಾಣೆ ಮತ್ತು ಆಸ್ಪತ್ರೆಯ ಮೇಲೆ ಮತಾಂಧರ ಆಕ್ರಮಣ ಖಂಡನೀಯ ! – ಹಿಂದೂ ಜನಜಾಗೃತಿ ಸಮಿತಿ.

ನಿನ್ನೆ ಹುಬ್ಬಳ್ಳಿಯಲ್ಲಿ ಮತಾಂಧರು ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ನೆಪದಲ್ಲಿ ಹನುಮಾನ್ ಮಂದಿರ, ಪೊಲೀಸರ ವಾಹನಗಳ ಮೇಲೆ ಹಲ್ಲೆ ನಡೆಸಿದ್ದು, ಆಸ್ಪತ್ರೆಯ ಮೇಲೂ ಕಲ್ಲು ತೂರಾಟ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಕರ್ನಾಟಕದಲ್ಲಿ ಕಳೆದ ಶ್ರೀರಾಮ ನವಮಿಯಂದು ಆಯೋಜಿಸಲಾಗಿದ್ದ ಮೆರವಣಿಗೆಗಳ ಮೇಲೆಯೂ ಅನೇಕ ಮತಾಂಧರು ಕಲ್ಲುತೂರಾಟ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಘಟನೆಯು ಮರುಕಳಿಸಿದೆ. ಇದರ ಹಿಂದೆ ಮತಾಂಧ ಶಕ್ತಿಗಳ ಕೈವಾಡವಿದೆ. ಕೂಡಲೇ ಸರಕಾರವು ಇದರ ತನಿಖೆಯನ್ನು ಮಾಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ದಂಗೆಗಳ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಹಾನಿ ಮಾಡುವ ದಂಗೆಕೋರರಿಂದಲೇ ನಷ್ಟವನ್ನು ವಸೂಲಿ ಮಾಡಬೇಕು ಮತ್ತು ಹಿಂದೂ ದೇವಸ್ಥಾನಗಳಿಗೆ ರಕ್ಷಣೆ ನೀಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುತ್ತದೆ.