ಹಿಂದೂ ರಾಷ್ಟ್ರದ ಸ್ಥಾಪನೆಗೆ ಶಕ್ತಿ ದೊರೆಯುವಂತೆ ಮತ್ತು ಹಿಂದೂಗಳಲ್ಲಿ ಶೌರ್ಯವನ್ನು ಜಾಗೃತಗೊಳಿಸಲು ಶ್ರೀ ಹನುಮಾನ ಜಯಂತಿ ನಿಮಿತ್ತ ದೇಶಾದ್ಯಂತ ೨೧೮ ಸ್ಥಳಗಳಲ್ಲಿ ನಡೆಯಿತು ‘ಗದಾಪೂಜೆ’ !

ಪ್ರಭು ಶ್ರೀರಾಮನ ಕೃಪೆಯಿಂದ ರಾಮರಾಜ್ಯದ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬಲ ಸಿಗಲು ಮತ್ತು ಹಿಂದೂಗಳಲ್ಲಿ ಶೌರ್ಯವನ್ನು ಜಾಗೃತಗೊಳಿಸಲು ಶ್ರೀ ಹನುಮಾನ ಜಯಂತಿಯಂದು ದೇಶಾದ್ಯಂತ ‘ಗದಾಪೂಜೆ’ ನಡೆಸಲಾಯಿತು. ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಾನ ಮನಸ್ಕ ಹಿಂದೂಪರ ಸಂಘಟನೆಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಕರ್ನಾಟಕ, ಮಹಾರಾಷ್ಟ್ರ, ಗೋವಾ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳಲ್ಲಿ ೨೧೮ ಕಡೆ ಸಾಮೂಹಿಕ ‘ಗದಾಪೂಜೆ’ಯು ಉತ್ಸಾಹದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಂತರ ವಂದನೀಯ ಉಪಸ್ಥಿತಿಯೊಂದಿಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದರು.

ಕರ್ನಾಟಕದ ಬಾಗಲಕೋಟೆ, ಧಾರವಾಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ತುಮಕೂರು, ಬೆಂಗಳೂರು ಮತ್ತು ಬೆಳಗಾವಿ; ಮಹಾರಾಷ್ಟ್ರದ ಮುಂಬೈ, ಥಾಣೆ, ರಾಯಗಡ, ಪುಣೆ, ಸತಾರಾ, ಸೊಲ್ಲಾಪುರ, ಕೊಲ್ಹಾಪುರ, ರತ್ನಾಗಿರಿ, ಸಿಂಧುದುರ್ಗ, ಸಂಭಾಜಿನಗರ, ನಾಸಿಕ್, ಧುಳೆ, ಜಳಗಾವ್, ನಾಗಪುರ ಮತ್ತು ಅಮರಾವತಿಯಲ್ಲಿ; ಗೋವಾದಲ್ಲಿ ಫೋಂಡಾ ಮತ್ತು ಸಾಖಳಿ ಎಂಬಲ್ಲಿ; ಉತ್ತರ ಪ್ರದೇಶದಲ್ಲಿ ಮಥುರೆ ಸಹಿತ ದೆಹಲಿ ಮತ್ತು ರಾಜಸ್ಥಾನದಲ್ಲೂ ಸಾಮೂಹಿಕ ‘ಗದಾಪೂಜೆ’ ನಡೆಸಲಾಯಿತು. ಶಂಖನಾದದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅನಂತರ ಸಾಮೂಹಿಕ ಪ್ರಾರ್ಥನೆ, ‘ಗದಾಪೂಜೆ’ ವಿಧಿ, ಮಾರುತಿಯ ಆರತಿ, ಮಾರುತಿ ಸ್ತೋತ್ರ ಮತ್ತು ‘ಶ್ರೀ ಹನುಮತೇ ನಮಃ’ದ ಸಾಮೂಹಿಕ ನಾಮಜಪ ಮಾಡಲಾಯಿತು. ಅದೇ ರೀತಿ ‘ಧರ್ಮಸಂಸ್ಥಾಪನೆಗಾಗಿ ಮಾರುತಿಯ ಗುಣಗಳನ್ನು ಹೇಗೆ ಮೈಗೂಡಿಸಿಕೊಳ್ಳುವುದು’ ಎಂಬ ಬಗ್ಗೆಯೂ ಮಾರ್ಗದರ್ಶನ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಉಪಸ್ಥಿತರು ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಜ್ಞೆ’ ಮಾಡಿದರು.

ಹಿಂದೂಗಳ ಇತಿಹಾಸ ಶೌರ್ಯದಿಂದ ಕೂಡಿದೆ. ಕಳೆದ ೭೫ ವರ್ಷಗಳಲ್ಲಿ ಹಿಂದೂಗಳ ಶೌರ್ಯವು ಜಾಗೃತವಾಗುವಂತಹ ಕಾರ್ಯಕ್ರಮಗಳಾಗುವುದೂ ಕಾಣಿಸುವುದಿಲ್ಲ. ತದ್ವಿರುದ್ಧ ‘ದೇ ದೀ ಹಮೇ ಆಜಾದಿ ಬಿನಾ ಖಡ್ಗ ಬಿನಾ ಢಾಲ್’ (ನಮಗೆ ಸ್ವಾತಂತ್ರ್ಯ ಹೋರಾಟವಿಲ್ಲದೇ ಪುಕ್ಕಟೆ ಸಿಕ್ಕಿತು) ಎಂಬ ಸಂದೇಶ ನೀಡಿ ಹಿಂದೂಗಳ ಭಾವೀ ಪೀಳಿಗೆಯನ್ನೂ ಶೌರ್ಯದಿಂದ ವಂಚಿತರನ್ನಾಗಿಸಲಾಗುತ್ತಿದೆ. ಹಿಂದೂಗಳ ಪ್ರತಿಯೊಂದು ದೇವತೆಯ ರೂಪವನ್ನು ನೋಡುವಾಗ, ಪ್ರತಿಯೊಂದು ದೇವತೆಯ ಒಂದು ಕೈಯು ಆಶೀರ್ವದಿಸುತ್ತದೆ, ಆದರೆ ಇತರ ಎಲ್ಲಾ ಕೈಗಳಲ್ಲಿ ಶಸ್ತ್ರಗಳಿವೆ. ಹಿಂದೂಗಳು ಎಲ್ಲಾ ರೀತಿಯ ದೇವತೆಗಳನ್ನು ಪೂಜಿಸಬೇಕು. ಆ ದೃಷ್ಟಿಯಿಂದ, ದೇವತೆಗಳ ಶಸ್ತ್ರಗಳನ್ನು ಪೂಜಿಸಿದರೆ ಹಿಂದೂಗಳಲ್ಲಿ ಶೌರ್ಯವನ್ನು ಜಾಗೃತಗೊಳಿಸಲು ಸಹಾಯವಾಗುತ್ತದೆ. ಅನ್ಯಾಯ ಮತ್ತು ದಬ್ಬಾಳಿಕೆ ಇವುಗಳ ವಿರುದ್ಧ ಹೋರಾಡಲು ಧೈರ್ಯ ಬೇಕು. ಹಾಗಾಗಿ ಧಾರ್ಮಿಕ ಹಬ್ಬಗಳ ದಿನದಂದು ಸಾಂಕೇತಿಕವಾಗಿದ್ದರೂ ಸರಿ ಆದರೆ ಶಸ್ತ್ರಗಳನ್ನು ಪೂಜಿಸಬೇಕು. ಹಿಂದೂಗಳಲ್ಲಿ ಶೌರ್ಯಜಾಗರಣವಾಗಬೇಕು. ಹಿಂದೂಗಳು ತಮ್ಮ ಹಬ್ಬ, ಉತ್ಸವಗಳ ಮೂಲಕ ಶಸ್ತ್ರಪೂಜೆಯ ಪರಂಪರೆಯನ್ನು ಜೋಪಾಸನೆ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಈ ಕಾರ್ಯಕ್ರಮ ಹಿಂದಿರುವ ಉದ್ದೇಶವನ್ನು ಹೇಳಿದೆ.