ವಂಚಕ ಮೆಹುಲ್ ಚೊಕ್ಸಿ ಆಂಟಿಗ್ವಾದಿಂದ ಕ್ಯೂಬಾಗೆ ಪರಾರಿ !

ಮೆಹುಲ್ ಚೋಕ್ಸಿ

ನವ ದೆಹಲಿ – ಪಂಜಾಬ್ ನ್ಯಾಷನಲ್ ಬ್ಯಾಂಕಿನ ೧೪,೦೦೦ ಕೋಟಿ ರೂಪಾಯಿಗಳ ಹಗರಣದ ಪ್ರಕರಣದ ಮುಖ್ಯ ಸೂತ್ರದಾರ ಮೆಹುಲ್ ಚೋಕ್ಸಿ ದಕ್ಷಿಣ ಅಮೆರಿಕ ಖಂಡದ ಸಮೀಪವಿರುವ ಆಂಟಿಗ್ವಾ ದ್ವೀಪದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಯು ತಿಳಿಸಿದೆ. ಆತ ಹತ್ತಿರದ ಕ್ಯೂಬಾ ದೇಶಕ್ಕೆ ಪರಾರಿಯಾಗಿರಬಹುದು ಎಂದು ತನಿಖಾಧಿಕಾರಿಗಳು ಸಂದೇಹವನ್ನು ವ್ಯಕ್ತ ಪಡಿಸಿದ್ದಾರೆ.