ಮುಂದಿನ ೪೫ ವರ್ಷಗಳಲ್ಲಿ ಸ್ವೀಡನ್ ಮುಸಲ್ಮಾನ ಬಹುಸಂಖ್ಯಾತ ದೇಶವಾಗಲಿದೆ! – ಸಂಶೋಧಕ ಅಭಿಮತ

  • ಮಧ್ಯಪ್ರಾಚ್ಯದ ಮುಸಲ್ಮಾನ ನಿರಾಶ್ರಿತರಿಂದಾಗಿ ಇಡೀ ಯುರೋಪಿಗೆ ಅಪಾಯ ಎದುರಾಗಿದೆ. ಯುರೋಪಿಯನ್ ದೇಶಗಳು ಈಗಲಾದರೂ ಕಣ್ಣು ತೆರೆಯುವರೆಂಬ ನಿರೀಕ್ಷೆ ಇದೆ !
  • ಕಾಶ್ಮೀರದಲ್ಲಿ ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು ಮತ್ತು ಅಲ್ಲಿನ ಹಿಂದೂಗಳ ನರಮೇಧ ಮಾಡಲಾಗಿತ್ತು, ಅವರು ಅಲ್ಲಿಂದ ಪಲಾಯನ ಮಾಡಬೇಕಾಯಿತು, ಮುಂದಿನ ಕೆಲವು ವರ್ಷಗಳಲ್ಲಿ ಈ ಯುರೋಪಿಯನ್ ದೇಶಗಳಲ್ಲಿ ಇದೇ ಪರಿಸ್ಥಿತಿ ಉದ್ಭವಿಸಿದರೆ ಆಶ್ಚರ್ಯಪಡಬೇಕಿಲ್ಲ !
  • ಕಾಶ್ಮೀರದ ಹಿಂದೂಗಳ ಪರಿಸ್ಥಿತಿಯನ್ನು ಈ ಯುರೋಪಿಯನ್ ರಾಷ್ಟ್ರಗಳು ಕಡೆಗಣಿಸಿದ್ದವು ಮತ್ತು ಭಾರತದಲ್ಲಿ ಮುಸ್ಲಿಮರ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಈಗ ಅವರಿಗೆ ಹಿಂದೂಗಳಿಗಾದ ಸಂಕಟವು ಗಮನಕ್ಕೆ ಬರುವುದು !

ಹೆಲ್ಸಿಂಕಿ – (ಸ್ವೀಡನ್) – ಮಧ್ಯಪ್ರಾಚ್ಯದ ಯಾದವಿ ಕಲಹದಿಂದ ಲಕ್ಷಾಂತರ ಮುಸ್ಲಿಂ ನಿರಾಶ್ರಿತರು ಅನೇಕ ಯುರೋಪಿಯನ್ ದೇಶಗಳಿಗೆ ಆಗಮಿಸಿದ್ದಾರೆ. ಇಂತಹ ನಿರಾಶ್ರಿತರಿಂದಾಗಿ ಕಳೆದ ಕೆಲವು ವರ್ಷಗಳಿಂದ ಯುರೋಪಿಯನ್ ದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಂದಿನ ೪೫ ವರ್ಷಗಳಲ್ಲಿ ಸ್ವೀಡನ್‌ನಲ್ಲಿನ ಸ್ಥಳೀಯ ಜನರು ಅಲ್ಪಸಂಖ್ಯಾತರು ಮತ್ತು ಮುಸ್ಲಿಂ ನಿರಾಶ್ರಿತರು ಬಹುಸಂಖ್ಯಾತರಾಗುವ ನಿರೀಕ್ಷೆಯಿದೆ. ಪ್ರಸ್ತುತ ಸ್ವೀಡನ್‌ನ ಇತರ ದೇಶಗಳ ನಾಗರಿಕರು ಮೂರನೇ ಒಂದು ಭಾಗದಷ್ಟುಇದ್ದಾರೆ. ಮೂಲನಿವಾಸಿಗಳಿಗಿಂತ ಅವರ ಜನನದರವು ಹೆಚ್ಚು ಇದೆ. ಇದು ಸ್ವೀಡನ್‌ನನ್ನು ಮುಸಲ್ಮಾನ ಬಹುಸಂಖ್ಯಾತ ದೇಶವನ್ನಾಗಿ ಮಾಡಿದೆ. ಫಿನ್ಲೆಂಡ್‌ನ ಸಂಶೋಧಕ ಕ್ಯೋಸ್ತಿ ತರವೀನೈನ್ ಅವರು ತಮ್ಮ ಸಂಶೋಧನೆಯಿಂದ ಈ ಅಂಶವನ್ನು ಮಂಡಿಸಿದ್ದಾರೆ.

ಸಂಶೋಧಕ ಕ್ಯೋಸ್ಟಿ ಟಾರ್ವಿನೈನ್ ಮಂಡಿಸಿದ ಅಂಶಗಳು

೧. ಪ್ರಸ್ತುತ ದರದಲ್ಲಿ ಸ್ವೀಡನ್‌ನಲ್ಲಿ ವಿದೇಶಿಯರ ಪೌರತ್ವ ಹೆಚ್ಚಾದರೆ, ಮುಂದಿನ ೪೫ ವರ್ಷಗಳಲ್ಲಿ ಸ್ಥಳೀಯ ಜನರು ಅಲ್ಪಸಂಖ್ಯಾತರಾಗುತ್ತಾರೆ. ೨೧೦೦ ರ ಹೊತ್ತಿಗೆ ಸ್ವೀಡನ್ ಜನಸಂಖ್ಯೆಯಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗುವುದು.

೨. ವಿದೇಶಿಯರ ಹೆಚ್ಚುತ್ತಿರುವ ಜನಸಂಖ್ಯೆಯು ಸ್ವೀಡನ್‌ನಲ್ಲಿ ಪ್ರಮುಖ ಸಾಂಸ್ಕೃತಿಕ ಬದಲಾವಣೆಗೆ ಕಾರಣವಾಗಿದೆ. ಹಿಂದೆ ಸ್ವೀಡನ್‌ನಲ್ಲಿ ಫಿನ್‌ಲ್ಯಾಂಡ್‌ಗಿಂತ ಹೆಚ್ಚಿನ ಜನಸಂಖ್ಯೆ ಇತ್ತು. ಈಗ ಅದರಲ್ಲಿ ಮುಸ್ಲಿಮರು ಆವರಿಸಿದ್ದಾರೆ. ಹಿಂದೆ ಫಿನ್‌ಲ್ಯಾಂಡ್‌ನ ಜನರು ಇಲ್ಲಿನ ನಾಗರಿಕರೊಂದಿಗೆ ಬೆರೆಯುತ್ತಿದ್ದರು; ಆದರೆ ಮುಸ್ಲಿಮರು ಸ್ವೀಡಿಷ್ ಪ್ರಜೆಗಳೊಂದಿಗೆ ಸುಲಭವಾಗಿ ಬೆರೆಯುವುದಿಲ್ಲ. ಅವರು ತಮ್ಮದೇ ಆದ ಭೂಪ್ರದೇಶವನ್ನು ರಚಿಸುತ್ತಿದ್ದಾರೆ ಮತ್ತು ಬೇರೆ ಯಾರೂ ಪ್ರವೇಶಿಸದಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ.