ತೆಲಂಗಾಣದ ಸರಕಾರಿ ಸಂಸ್ಥೆಯ ಕಾರ್ಯದರ್ಶಿ ಮತ್ತು ಐಪಿಎಸ್ ಅಧಿಕಾರಿ ಪ್ರವೀಣ ಕುಮಾರ ಅವರ ಹಿಂದೂದ್ವೇಷ !

ವಿದ್ಯಾರ್ಥಿಗಳಿಗೆ ಶ್ರೀ ರಾಮ ಮತ್ತು ಶ್ರೀಕೃಷ್ಣನ ಪೂಜೆ ಮಾಡಬಾರದು ಮತ್ತು ಹಿಂದೂ ಧರ್ಮದ ಪಾಲನೆ ಮಾಡದಂತೆ ಪ್ರತಿಜ್ಞೆ ! ಗೌತಮ ಬುದ್ಧನ ತತ್ತ್ವಗಳನ್ನು ಅನುಸರಿಸುವಂತೆ ಪ್ರತಿಜ್ಞೆ !

* ಸರಕಾರಿ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿಯು ವಿದ್ಯಾರ್ಥಿಗಳಿಗೆ ಅಂತಹ ಪ್ರತಿಜ್ಞೆ ಮಾಡಿಸುವುದು; ಅಂದರೆ ‘ತೆಲಂಗಾಣಾ ರಾಷ್ಟ್ರ ಸಮಿತಿಯು ಸರಕಾರದಿಂದ ಸರಕಾರಿ ವ್ಯವಸ್ಥೆಗಳನ್ನು ಬಳಸಿ ನಡೆಸುತ್ತಿರುವ ಹಿಂದೂ ವಿರೋಧಿ ಉಪಕ್ರಮವಾಗಿದೆ’, ಎಂದೇ ಹೇಳಬೇಕಾಗುತ್ತದೆ !

* ‘ಆಡಳಿತವು ಸಾಂವಿಧಾನಿಕ ವಿರೋಧಿ ವಿಚಾರವಾದಿಗಳ ಕೈಯಲ್ಲಿದೆ’, ಎಂದು ಹೇಳುವ ಜಾತ್ಯತೀತವಾದಿಗಳಿಗೆ, ಸರಕಾರಿ ಅಧಿಕಾರಿಗಳಿಂದ ಹಿಂದೂ ಧರ್ಮದ ಮೇಲೆ ಈ ರೀತಿಯ ಆಘಾತ ಆಗುವುದು ಒಪ್ಪಿಗೆ ಇದೆಯೇ ?

* ಇಂತಹ ಹಿಂದೂದ್ವೇಷಿ ಐಪಿಎಸ್ ಅಧಿಕಾರಿ ತಮ್ಮ ಅಧಿಕಾರಾವಧಿಯಲ್ಲಿ ಹಿಂದೂ ಸಂತ್ರಸ್ತರ ದೂರುಗಳನ್ನು ಹೇಗೆ ನಿಭಾಯಿಸುತ್ತಿದ್ದರು ಎಂಬುದರ ಬಗ್ಗೆ ಯೋಚಿಸದಿರುವುದು ಉತ್ತಮ ! ಈ ಅಧಿಕಾರಿ ಇಲ್ಲಿಯವರೆಗೆ ನಿರ್ವಹಿಸಿದ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕೆಂದು ಯಾರಾದರೂ ಒತ್ತಾಯಿಸಿದರೆ, ಅದು ತಪ್ಪಾಗಲಾರದು !

ಐಪಿಎಸ್ ಅಧಿಕಾರಿ ಆರ್.ಎಸ್. ಪ್ರವೀಣ ಕುಮಾರ

ಭಾಗ್ಯನಗರ (ತೆಲಂಗಾಣ) – ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಆರ್.ಎಸ್. ಪ್ರವೀಣ ಕುಮಾರ ಅವರ ಒಂದು ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಅವರು ಹಿಂದೂ ವಿದ್ಯಾರ್ಥಿಗಳಿಗೆ, `ನಾನು ರಾಮ, ಕೃಷ್ಣನನ್ನು ನಂಬುವುದಿಲ್ಲ’ ಭವಿಷ್ಯದಲ್ಲಿ ಹಿಂದೂ ಧರ್ಮ ಮತ್ತು ಸಂಪ್ರದಾಯವನ್ನು ಅನುಸರಿಸುವುದಿಲ್ಲ’ ಎಂದು ಶಪಥ ನೀಡುತ್ತಿರುವುದು ಕಂಡುಬರುತ್ತದೆ. ಪ್ರವೀಣ ಕುಮಾರ ಅವರು ರಾಜ್ಯ ಸರಕಾರದ ‘ತೆಲಂಗಾಣ ಸೋಶಲ ವೆಲ್ ಫೇರ್ ರೆಸಿಡೆನ್ಸಿಯಲ್ ಎಜ್ಯುಕೇಶನಲ್ ಇನ್‍ಸ್ಟಿಟ್ಯೂಶನ್ ಸೊಸೈಟಿ’ಯ ಕಾರ್ಯದರ್ಶಿಯೂ ಆಗಿದ್ದಾರೆ. (ಹಿಂದೂ ವಿದ್ಯಾರ್ಥಿಗಳಿಗೆ ಇಂತಹ ಪ್ರತಿಜ್ಞೆಯನ್ನು ನೀಡುವ ಧೈರ್ಯವಾದರೂ ಹೇಗೆ ಬರುತ್ತದೆ ? ತೆಲಂಗಾಣಾ ಸರಕಾರವು ಇಂತಹ ಪ್ರಮಾಣವಚನವನ್ನು ಇತರ ಧರ್ಮೀಯರಿಗೆ ನೀಡುವ ಧೈರ್ಯವನ್ನು ಎಂದಾದರೂ ತೋರಿಸಬಹುದೇ ? – ಸಂಪಾದಕರು) ಈ ಪ್ರತಿಜ್ಞೆ ನೀಡುವ ಕಾರ್ಯಕ್ರಮ ‘ಸ್ವರೊ ಪವಿತ್ರ ಮಾಸ’ದ ಅಡಿಯಲ್ಲಿ ಆಯೋಜಿಸಲಾಗಿತ್ತು.

೧. ಪ್ರತಿಜ್ಞೆಯನ್ನು ನೀಡುತ್ತಿರುವಾಗ ಪ್ರವೀಣ ಕುಮಾರ ಇವರು, ನಾನು ಗೌರಿ, ಗಣಪತಿ ಮತ್ತು ಇತರ ಯಾವುದೇ ಹಿಂದೂ ದೇವತೆಗಳ ಮೇಲೆ ವಿಶ್ವಾಸ ಇಡುವುದಿಲ್ಲ. ನಾನು ರಾಮ ಅಥವಾ ಕೃಷ್ಣನನ್ನು ನಂಬುವುದಿಲ್ಲ. ನಾನು ಎಂದಿಗೂ ಅವರನ್ನು ಪೂಜಿಸುವುದಿಲ್ಲ. ನಾನು ಅವರನ್ನು ದೇವರ ಅವತಾರವೆಂದು ಪರಿಗಣಿಸುವುದಿಲ್ಲ. ನಾನು ಶ್ರಾದ್ಧವಿಧಿ ಮತ್ತು ಪಿಂಡದಾನವನ್ನು ಮಾಡುವುದಿಲ್ಲ. ಗೌತಮ ಬುದ್ಧನು ತೋರಿಸಿದ ಮಾರ್ಗ ಮತ್ತು ತತ್ತ್ವಗಳಿಗೆ ವಿರುದ್ಧವಾಗಿ ಯಾವುದನ್ನೂ ನಾನು ಮಾಡುವುದಿಲ್ಲ. ಎಂದು ವಿದ್ಯಾರ್ಥಿಗಳಿಂದ ಹೇಳಿಸುತ್ತಿದ್ದರು.

೨. ೨೦೧೪ ರಲ್ಲಿ ತೆಲಂಗಾಣಾ ಸರಕಾರವು ಅವಶ್ಯಕತೆ ಇರುವ ಹಾಗೂ ವಂಚಿತರಾದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ‘ತೆಲಂಗಾಣ ಸೋಶಲ ವೆಲ್ ಫೇರ್ ರೆಸಿಡೆನ್ಸಿಯಲ್ ಎಜ್ಯುಕೇಶನಲ್ ಇನ್‍ಸ್ಟಿಟ್ಯೂಶನ್ ಸೊಸೈಟಿ’ಅನ್ನು ಸ್ಥಾಪಿಸಿತ್ತು. ಪ್ರವೀಣ ಕುಮಾರ ಇದರ ಕಾರ್ಯದರ್ಶಿ ಆಗಿದ್ದರು.