ಆಗ್ರಾ ದೇವಾಲಯ ಒಂದರ ಆವರಣದಲ್ಲಿ ಸಾಧು ಹತ್ಯೆ

ಉತ್ತರಪ್ರದೇಶದಲ್ಲಿ ಮುಂದುವರೆದ ಸಾಧುಗಳ ಹತ್ಯೆ !

ಬಿಜೆಪಿಯ ರಾಜ್ಯದಲ್ಲಿ ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಆಗ್ರಾ (ಉತ್ತರ ಪ್ರದೇಶ) – ಯಮುನಾ ನದಿಯ ದಡದಲ್ಲಿರುವ ಕಾಡಿನಲ್ಲಿರುವ ಹನುಮಾನ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಸಾಧು ಶಿವ ಗಿರಿಯವರನ್ನು ಅಪರಿಚಿತ ಹಲ್ಲೆಕೋರರು ಕೊಡಲಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ದೇವಾಲಯದ ಆವರಣದಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಶಿವ ಗಿರಿಯವರ ನಿವಾಸ ಈ ದೇವಾಲಯದ ಪರಿಸರದಲ್ಲಿತ್ತು.

ಮಾರ್ಚ್ ೧೭ ರ ಬೆಳಗ್ಗೆ ಕೆಲವು ಸ್ಥಳೀಯರು ದೇವಾಲಯದ ಆವರಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಧುವಿನ ಶವವನ್ನು ನೋಡಿದರು. ಇದಾದ ನಂತರ ಸ್ಥಳೀಯರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಕ್ಕೆ ತೆಗೆದುಕೊಂಡರು. ಈ ಸಾಧುವನ್ನು ಯಾರು ಮತ್ತು ಏಕೆ ಕೊಂದರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ಬಳಸಿದ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆ ಅಥವಾ ಲೂಟಿ ಮಾಡುವ ಉದ್ದೇಶದಿಂದ ಈ ಕೊಲೆ ನಡೆದಿರುವುದಕ್ಕೆ ಯಾವುದೇ ಪುರಾವೆಗಳು ಪೊಲೀಸರಿಗೆ ದೊರೆತಿಲ್ಲ. ಆದ್ದರಿಂದ, ಪರಿಚಯಸ್ಥರಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.