ಕರೋನಾ ಪ್ರತಿಬಂಧಕ ಲಸಿಕೆ ತಯಾರಿಸುವ ಭಾರತೀಯ ಸಂಸ್ಥೆಗಳ ಮೇಲೆ ಚೀನಾದ ಸೈಬರ್ ದಾಳಿ ! – ಸಿಂಗಾಪುರದ ಸೈಬರ್ ಗುಪ್ತಚರ ಕಂಪನಿಯ ಹೇಳಿಕೆ

ಈ ವಿಷಯ ನಿಜವಾಗಿದ್ದರೆ, ಅದು ನೈಜ ನಿಯಂತ್ರಣ ರೇಖೆಗೆ ತಲೆಬಾಗಿರುವುದನ್ನು ತೋರಿಸಿದರೂ, ಚೀನಾ ಭಾರತದ ಮೇಲೆ ಬೇರೆ ರೀತಿಯಲ್ಲಿ ದಾಳಿ ಮಾಡಲು ಸಂಚು ಹೂಡಿದೆ ಎಂದು ಅದು ತೋರಿಸುತ್ತದೆ. ಅಂತಹ ಚೀನಾಕ್ಕೆ ತಕ್ಕ ಪಾಠ ಕಲಿಸದೇ ಪರ್ಯಾಯವಿಲ್ಲ!

ನವ ದೆಹಲಿ – ಚೀನಾದ ಹಾಕರ್ಸ್‌ಗಳು ಮುಂಬೈಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾರೆ ಎಂಬ ವರದಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಚೀನಾದ ಎರಡು ಹಾಕರ್ಸ್ಗಳು ಕರೋನಾ ಲಸಿಕೆಗಳನ್ನು ತಯಾರಿಸುವ ಎರಡು ಭಾರತೀಯ ಕಂಪನಿಗಳ ಮೇಲೆ ಸೈಬರ್ ದಾಳಿ ನಡೆಸಿದ್ದಾರೆ, ಎಂಬುದು ಕಂಡು ಬಂದಿದೆ. ಕೆಲವು ವಾರಗಳ ಹಿಂದೆ ಈ ದಾಳಿ ನಡೆದಿದೆ. ಭಾರತೀಯ ಕಂಪನಿಗಳಾದ ‘ಸಿರಮ್’ ಮತ್ತು ‘ಭಾರತ್ ಬಯೋಟೆಕ್’ನ ಐಟಿ ವ್ಯವಸ್ಥೆಯಲ್ಲಿ ನ್ಯೂನತೆಗಳನ್ನು ಕಂಡುಕೊಂಡು ಚೀನಾದ ಕಂಪನಿ ಸ್ಟೋನ್ ಪಾಂಡಾ ಈ ದಾಳಿಯನ್ನು ಪ್ರಾರಂಭಿಸಿತು. ಸೈಬರ್ ಗುಪ್ತಚರ ಸಂಸ್ಥೆ ಸಿಂಗಾಪುರದ ಸಾಯಫರ್ಮಾ ಈ ಹೇಳಿಕೆ ನೀಡಿದೆ; ಆದರೆ, ಸೀರಮ್ ಮತ್ತು ಭಾರತ್ ಬಯೋಟೆಕ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.