ಕಾಶ್ಮೀರಿ ನಾಯಕ ಸುಶೀಲ್ ಪಂಡಿತ್ ಅವರನ್ನು ಹತ್ಯೆಗೆಂದು ಬಂದಿದ್ದ ಇಬ್ಬರು ಗೂಂಡಾಗಳನ್ನು ಬಂಧಿಸಿದ ದೆಹಲಿ ಪೊಲೀಸರು

ಪಾಕಿಸ್ತಾನ ಮತ್ತು ದುಬೈಯಿಂದ ಕೊಲೆಗೆ ೨೦ ಲಕ್ಷ ರೂಪಾಯಿಗಳ ಸುಪಾರಿ

ಹಿಂದೂ ನಾಯಕರು ಅಸುರಕ್ಷಿತರಾಗಿದ್ದಾರೆ ಮತ್ತು ಅವರ ರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಒಂದೇ ಪರ್ಯಾಯ!

ಕಾಶ್ಮೀರಿ ನಾಯಕ ಸುಶೀಲ್ ಪಂಡಿತ್

ನವ ದೆಹಲಿ: ಕಾಶ್ಮೀರಿ ನಾಯಕ ಸುಶೀಲ್ ಪಂಡಿತ್ ಇವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರು ಗೂಂಡಾಗಳನ್ನು ಬಂಧಿಸಿದ್ದಾರೆ. ಅವರು ಸಿಗ್ನಲ್ಸ್ ಅಪ್ಲಿಕೇಶನ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಅವರಿಂದ ಪಾಕಿಸ್ತಾನ ನಿರ್ಮಿತ ಎರಡು ಪಿಸ್ತೂಲ್ ಗಳು ಮತ್ತು ಎರಡು ನಾಡುಬಾಂಬ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಖವಿಂದರ್ ಸಿಂಗ್ ಮತ್ತು ಲಖನ್ ಇವು ಆ ಇಬ್ಬರು ಗೂಂಡಾಗಳ ಹೆಸರಾಗಿದೆ. ಇಬ್ಬರೂ ಪಂಜಾಬ್ ನ ಫರೀದಕೋಟ್ ಮೂಲದವರು. (ಹಿಂದೂಪರ ನಾಯಕನ ಹತ್ಯೆಗಾಗಿ ಜಿಹಾದಿಗಳೊಂದಿಗೆ ಕೈಜೋಡಿಸುವ ಇಂತಹ ರಾಷ್ಟ್ರಘಾತಕರಿಗೆ ಕಠಿಣ ಶಿಕ್ಷೆ ವಿಧಿಸಿ! – ಸಂಪಾದಕರು) ಪ್ರಿನ್ಸ್ ಎಂಬ ಗೂಂಡಾನು ಇವರಿಬ್ಬರನ್ನು ಸುಶೀಲ ಪಂಡಿತರನ್ನು ಹತ್ಯೆ ಮಾಡಲು ದೆಹಲಿಗೆ ಕಳುಹಿಸಿದ್ದನು. ಆತನಿಗೆ ಪಾಕಿಸ್ತಾನ ಮತ್ತು ದುಬೈನ ಜಿಹಾದಿಗಳು ೨೦ ಲಕ್ಷ ರೂಪಾಯಿ ಸುಪಾರಿ ನೀಡಿದ್ದರು. ಪ್ರಿನ್ಸ್ ಮತ್ತು ಲಖನ್ ಸ್ನೇಹಿತರಾಗಿದ್ದಾರೆ.