ಗಲಭೆ ಪೀಡಿತ ಮುಸ್ಲಿಮರಿಗೆ ಸಹಾಯ; ಆದರೆ ಪೀಡಿತ ಹಿಂದೂಗಳಿಗೆ ಸಹಾಯ ಮಾಡಲು ಮೀನಮೇಷ

ದೆಹಲಿ ಗಲಭೆಯ ಒಂದು ವರ್ಷ!

* ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ಸಿಕ್ಖ್‌ರ ‘ಖಾಲ್ಸಾ’ ಸಂಘಟನೆಯ ಹಿಂದೂದ್ವೇಷ ! 

* ಜಾತ್ಯತೀತವಾದಿ ಆಮ್ ಆದ್ಮಿ ಪಕ್ಷದ ಸರ್ಕಾರದ ಹಿಂದೂದ್ವೇಷ ! ಅಂತಹ ಸರ್ಕಾರವು ಸಂವಿಧಾನ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ! ಈಗ ಯಾರೂ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ?

* ಮತಾಂಧ ಮೊಘಲರ ವಿರುದ್ಧ ಹೋರಾಡುವಾಗ ಸಿಖ್ ಗುರುಗಳು ಹುತಾತ್ಮರಾದರು. ಕೇವಲ ಹಿಂದೂದ್ವೇಷದಿಂದ ಅದೇ ಮತಾಂಧರ ವಂಶಸ್ಥರನ್ನು ಪೋಷಿಸುವುದು ಆತ್ಮಘಾತವಾಗಿದೆ. ‘ಖಾಲ್ಸಾ’ ಜನರು ಇದನ್ನು ಅರ್ಥಮಾಡಿಕೊಂಡ ದಿನವೇ ಸುದಿನ!

ನವ ದೆಹಲಿ: ದೆಹಲಿ ಗಲಭೆಗೆ ಒಂದು ವರ್ಷ ಕಳೆದಿದೆ. ಮತಾಂಧರು ಪ್ರಾರಂಭಿಸಿದ ಗಲಭೆಗಳು ೩ ದಿನಗಳ ಕಾಲ ನಡೆದವು. ಇದರಲ್ಲಿ ಹಿಂದೂ-ಮುಸ್ಲಿಮರಿಬ್ಬರಿಗೂ ಹಾನಿಯಾಯಿತು. ೫೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಬಗ್ಗೆ ಕೆಲವು ದಿನಪತ್ರಿಕೆಗಳು ಸಂತ್ರಸ್ತರನ್ನು ಸಂಪರ್ಕಿಸಿದಾಗ, ರಾಜ್ಯದ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ‘ಖಾಲ್ಸಾ’ ಸಂಘಟನೆಯು ಮುಸ್ಲಿಂ ಸಂತ್ರಸ್ತರಿಗೆ ಸಂಪೂರ್ಣ ನೆರವು ನೀಡಿದ್ದು, ಪೀಡಿತ ಹಿಂದೂಗಳಿಗೆ ನೆರವು ನೀಡುವುದನ್ನು ತಪ್ಪಿಸಿದೆ, ಎಂದು ತಿಳಿದುಬಂದಿದೆ.

೧. ಓರ್ವ ಸಂತ್ರಸ್ತ ಹಿಂದೂವು ಈ ಬಗ್ಗೆ ಹೇಳುತ್ತಾ, ಗಲಭೆಯ ಕೆಲವು ತಿಂಗಳ ನಂತರ ಖಾಲ್ಸಾ ಸಂಘಟನೆಯ ಜನರು ಸಹಾಯ ನೀಡುತ್ತಿದ್ದರು. ಅವರು ಸಂತ್ರಸ್ತ ಮುಸ್ಲಿಮರಿಗೆ ಸಹಾಯ ಮಾಡಿದರು, ಆದರೆ ಹಿಂದೂಗಳನ್ನು ಕಡೆಗಣಿಸಿದರು. ಅವರು ೧೦೦ ರಲ್ಲಿ ೯೦ ರಷ್ಟು ಮುಸ್ಲಿಮರಿಗೆ ಸಹಾಯ ಮಾಡಿದರು.

೨. ರಾಜ್ಯದ ಕೇಜ್ರಿವಾಲ್ ಸರ್ಕಾರವು ಮಸೀದಿಗಳಿಗೆ ಆಹಾರಧಾನ್ಯ ಮತ್ತು ಹಣ್ಣುಗಳನ್ನು ಕಳುಹಿಸಿತು; ಆದರೆ ಹಿಂದೂಗಳಿಗೆ ಏನನ್ನೂ ನೀಡಲಿಲ್ಲ. ಮಸೀದಿಗಳಿಗೆ ಕಳುಹಿಸಿದ ಸಾಹಿತ್ಯವನ್ನು ಕೇವಲ ಮುಸ್ಲಿಮರಲ್ಲಿ ವಿತರಿಸಲಾಯಿತು.

೩. ಇಲ್ಲಿ ಇನ್ನೂ ಉದ್ವಿಗ್ನತೆ ಇದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಆದ್ದರಿಂದ ಹಿಂದೂಗಳಲ್ಲಿ ಭಯದ ವಾತಾವರಣವಿದೆ. ಕೆಲವು ದಿನಗಳ ಹಿಂದೆ, ಮುಸ್ಲಿಂ ಬಹುಸಂಖ್ಯಾತ ಮುಸ್ತಫಾಬಾದ್‌ನಲ್ಲಿ ಮತಾಂಧರ ಗುಂಪೊಂದು ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದ ಹಿಂದೂ ಯುವಕನನ್ನು ಥಳಿಸಿತು. ಇದು ಇಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿತು. ಇದನ್ನು ಮಾಧ್ಯಮಗಳು ವರದಿ ಮಾಡಿಲ್ಲ. ಇಂದು ಇಲ್ಲಿ ಅನೇಕ ಹಿಂದೂಗಳು ತಮ್ಮ ಮನೆಗಳನ್ನು ಬಿಟ್ಟು ಪಲಾಯನಗೈದಿದ್ದಾರೆ ಎಂದು ತಿಳಿಸಿದರು.