‘ಮಿರ್ಜಾಪುರ’ ವೆಬ್ ಸಿರೀಸ್‌ನಲ್ಲಿ ಸೊಸೆ ಮತ್ತು ಮಾವನ ನಡುವಿನ ದೈಹಿಕ ಸಂಬಂಧದ ಚಿತ್ರಣ

ವೆಬ್ ಸಿರೀಸ್ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಅನೈತಿಕತೆಯ ಅಡ್ಡೆಯಾಗಿರುವ ವೆಬ್ ಸಿರೀಸ್‌ಗಳನ್ನು ಇನ್ನು ಶಾಶ್ವತವಾಗಿ ನಿಷೇಧಿಸದೆ ಬೇರೆ ಪರ್ಯಾಯವಿಲ್ಲ, ಇದಕ್ಕಾಗಿ ಧರ್ಮಚರಣಿಗಳ ಹಿಂದೂ ರಾಷ್ಟ್ರವೇ ಬೇಕು!

ನವ ದೆಹಲಿ: ‘ಮಿರ್ಜಾಪುರ’ ಎಂಬ ವೆಬ್ ಸಿರೀಸ್ ವಿರುದ್ಧ ವ್ಯಕ್ತಿಯೊಬ್ಬರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಸೊಸೆ ತನ್ನ ಮಾವನೊಂದಿಗೆ ದೈಹಿಕ ಸಂಬಂಧವಿಟ್ಟುಕೊಳ್ಳುವುದು ಚಿತ್ರಿಸಿರುವುದರ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಅದೇ ರೀತಿ ಸೊಸೆಯು ಮನೆಯ ಕೆಲಸಗಾರನೊಂದಿಗೂ ದೈಹಿಕ ಸಂಬಂಧವನ್ನು ಹೊಂದಿದ್ದಳು ಎಂದು ಸಹ ತೋರಿಸಲಾಗಿದೆ. ಈ ಬಗ್ಗೆ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನ್ಯಾಯಾಲಯವು ನೋಟಿಸ್ ನೀಡಿದೆ.

ಮಿರ್ಜಾಪುರ ಇದು ದೇಶದ ಸಮೃದ್ಧ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಸುಜಿತ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಲಾಗಿದೆ. ೧೦೮ ಶಕ್ತಿ ಪೀಠಗಳಲ್ಲಿ ಒಂದಾದ ಶ್ರೀ ವಿಂಧ್ಯಾಚಲ ದೇವಾಲಯ ಮಿರ್ಜಾಪುರದಲ್ಲಿದೆ. ಇಂತಹ ಮಿರ್ಜಾಪುರ ನಗರದ ಮಹಿಳೆಯ ಪಾತ್ರವನ್ನು ತಪ್ಪಾಗಿ ನಿರೂಪಿಸಲಾಗಿದೆ. ಇದು ನಗರವನ್ನು ಅಪಖ್ಯಾತಿಗೊಳಿಸುವ ಪ್ರಯತ್ನವಾಗಿದೆ. ಅಂತಹ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಮಿರ್ಜಾಪುರ ನಗರದ ಚಿತ್ರಣವನ್ನು ಈ ರೀತಿ ಚಿತ್ರಿಸದಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.