ಜಲಾಲಾಬಾದ್ (ಪಂಜಾಬ್) ನಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಕಾಂಗ್ರೆಸ್ ನಡುವೆ ಘರ್ಷಣೆ!

ಸುಖಬೀರ್ ಸಿಂಗ್ ಬಾದಲ್ ಅವರ ವಾಹನ ಧ್ವಂಸ

ಕಾಂಗ್ರೆಸ್ ರಾಜ್ಯದಲ್ಲಿ ಕಾಂಗ್ರೆಸ್‌ನ ಗೂಂಡಾಗಿರಿ! ಇಂತಹ ಪಕ್ಷವು ಎಂದಾದರೂ ಕಾನೂನಿನ ರಾಜ್ಯವನ್ನು ನೀಡಬಹುದೇ?

ಸುಖಬಿರ್ ಸಿಂಗ್ ಬಾದಲ್

ಜಲಾಲಾಬಾದ್ (ಪಂಜಾಬ್) – ಸ್ಥಳೀಯ ಸ್ವರಾಜ್ಯ ಸಂಸ್ಥೆಯ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದ ಕಾರ್ಯಕರ್ತರ ನಡುವೆ ಬಿರುಸಿನ ಕಲ್ಲು ತೂರಾಟ ಮತ್ತು ಲಾಠಿಗಳಿಂದ ಹಲ್ಲೆ ನಡೆದಿದೆ. ಈ ಸಮಯದಲ್ಲಿ ಅಕಾಲಿ ದಳದ ಅಧ್ಯಕ್ಷ ಸುಖಬಿರ್ ಸಿಂಗ್ ಬಾದಲ್ ಅವರ ವಾಹನದ ಮೇಲೆಯೂ ಕಲ್ಲು ತೂರಾಟ ಮಾಡಲಾಯಿತು. ಇದರಲ್ಲಿ ವಾಹನಕ್ಕೆ ತೀವ್ರ ಹಾನಿಯಾಗಿದೆ. ಸುಖಬಿರ್ ಸಿಂಗ್ ಬಾದಲ್ ಅವರನ್ನು ಕಾಪಾಡಲು ಮುಂದೆ ಬಂದ ೩ ಕಾರ್ಯಕರ್ತರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅಕಾಲಿ ದಳವು ಮಾಹಿತಿ ನೀಡಿದೆ. ಅದೇರೀತಿ ಹಲ್ಲೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಆದೇಶಿಸಲಾಗಿದೆ ಎಂದು ಅಕಾಲಿ ದಳವು ಆರೋಪಿಸಿದೆ.

(ಸೌಜನ್ಯ : India Today)