‘ಇಂದಿನ ಹಿಂದೂ ಸಮಾಜವು ಸಂಪೂರ್ಣವಾಗಿ ಕೊಳೆತಿದೆ ಮತ್ತು ಭಾರತದಲ್ಲಿ ಮುಸಲ್ಮಾನರಿಗೆ ಅನ್ಯಾಯವಾಗುತ್ತಿದೆ! ’(ಅಂತೆ)

ಎಲ್ಗರ್ ಪರಿಷತ್ತಿನಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿಯ ಹಿಂದೂ ದ್ವೇಷಿ ಫೂತ್ಕಾರ

ಪುಣೆ: ಇಂದಿನ ಹಿಂದೂ ಸಮಾಜವು ಸಂಪೂರ್ಣವಾಗಿ ಕೊಳೆತಿದೆ ಮತ್ತು ಭಾರತದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಭಾರತದಲ್ಲಿ ಮುಸ್ಲಿಮರನ್ನು ಕೊಲ್ಲಲು ಯಾವುದೇ ಕಾರಣ ಬೇಕಾಗಿಲ್ಲ. ಮುಸ್ಲಿಂ ಆಗಿದ್ದಾರೆಂಬ ಒಂದೇ ಕಾರಣ ಸಾಕು. ಉತ್ತರ ಪ್ರದೇಶ ಪೊಲೀಸರು ಒಂದೇ ವರ್ಷದಲ್ಲಿ ೧೯ ಜನರನ್ನು ಕೊಂದಿದ್ದಾರೆ. ಇದರಲ್ಲಿ ಹೆಚ್ಚಿನವರು ದಲಿತರು ಅಥವಾ ಮುಸಲ್ಮಾನರಾಗಿದ್ದರು. ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿ ಪುಣೆಯ ಗಣೇಶ್ ಕಲಾಕ್ರೀಡಾ ಮಂಚ್ ಇಲ್ಲಿ ನಡೆದ ಎಲ್ಗಾರ್ ಸಮ್ಮೇಳನದಲ್ಲಿ ಹೇಳಿದ್ದರಿಂದ ಸಮ್ಮೇಳನವು ಮತ್ತೊಮ್ಮೆ ವಿವಾದಗ್ರಸ್ತವಾಗಿದೆ.

ಉಸ್ಮಾನಿಯು ತನ್ನ ಹೇಳಿಕೆಯಲ್ಲಿ ಈ ಜನರು ‘ಲಿಂಚಿಂಗ್’ (ಜನಸಮೂಹದಿಂದ ಕೊಲ್ಲುವುದು) ಮಾಡುತ್ತಾರೆ; ಹತ್ಯೆ ಮಾಡುತ್ತಾರೆ. ಈ ಜನರು ಹತ್ಯೆಗೈದ ನಂತರ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ, ಆ ಸಮಯದಲ್ಲಿ ಅವರು ಏನು ಮಾಡುತ್ತಿರಬಹುದು? ಕೆಲವರು ಹೊಸ ರೀತಿಯಲ್ಲಿ ಕೈ ತೊಳೆಯಬಹುದು ಅಥವಾ ಕೆಲವು ಔಷಧಿಗಳನ್ನು ಮಿಶ್ರ ಮಾಡಿ ಸ್ನಾನ ಮಾಡುತ್ತಿರಬಹುದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ೧೬ ದಲಿತರು ಮತ್ತು ಮುಸ್ಲಿಮರನ್ನು “ಎನ್ ಕೌಂಟರ್ ಮಾಡಿದ್ದಾರೆ” ಎಂದು ಉಸ್ಮಾನಿಯ ದಾವೆಯಾಗಿದೆ. ಅವನ ಈ ಹೇಳಿಕೆಗಳು ಆಕ್ರೋಶವನ್ನು ಹುಟ್ಟುಹಾಕಿದೆ ಮತ್ತು ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿವೆ. (ಆರೋಪಿಗಳಿಗೆ ವಿವಾದಾತ್ಮಕ ಭಾಷಣ ಮಾಡಲು ಅವಕಾಶ ನೀಡಿದ್ದಕ್ಕಾಗಿ ಎಲ್ಗರ್ ಸಮ್ಮೇಳನದ ಸಂಘಟಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಅಪೇಕ್ಷೆಯಾಗಿದೆ. – ಸಂಪಾದಕರು)

ವಿಧಾನ ಪರಿಷತ್ತಿನ ವಿರೋಧ ಪಕ್ಷ ನೇತಾ ಪ್ರವೀಣ ದರೆಕರ ಇವರು ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಾಗ, ಇದು ಅತ್ಯಂತ ವಿಕೃತ ಮಾನಸಿಕತೆಯಾಗಿದೆ ಎಂದಿದ್ದಾರೆ.

ಬಿಜೆಪಿಯ ವಕ್ತಾರ ಕೇಶವ ಉಪಾಧ್ಯೆ ಮತ್ತು ಶಾಸಕ ರಾಮ ಸಾತಪುತೆ ತಮ್ಮ ಟ್ವಿಟ್ಟರ್ ಖಾತೆಗಳಿಂದ ಶಾರ್ಜೀಲ್ ಉಸ್ಮಾನಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಎಲ್ಗರ್ ಪರಿಷತ್‌ನಲ್ಲಿ ಹಿಂದೂಗಳನ್ನು ‘ಕೊಳೆತಿದ್ದಾರೆ’ ಎಂದು ಜರೆದ ಶಾರ್ಜೀಲ್ ಉಸ್ಮಾನಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಾಮ ಸಾತಪುತೆಯವರು ಟ್ವೀಟ್ ಮಾಡಿದ್ದಾರೆ. ಸಂಘಟಕರು ಸಂವಿಧಾನದ ದಾಖಲೆಗಳನ್ನು ನೀಡಿ ಇಂತಹ ಹಿಂದೂ ವಿರೋಧಿ ವಕ್ತಾರರನ್ನು ಕರೆಯುತ್ತಾರೆ.

ಶಾರ್ಜೀಲ್ ಉಸ್ಮಾನಿಯವರ ಹೇಳಿಕೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ! – ಗೃಹ ಸಚಿವ ದೇಶಮುಖ

ಗೃಹ ಸಚಿವ ಅನಿಲ ದೇಶಮುಖ

ಹಿಂದೂ ಸಮುದಾಯದ ಬಗ್ಗೆ ಶಾರ್ಜೀಲ್ ಉಸ್ಮಾನಿ ನೀಡಿದ ಹೇಳಿಕೆಯನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅನಿಲ ದೇಶಮುಖ ಇವರು ನಾಗ್ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

ವಿವಾದಾತ್ಮಕ ಹಿನ್ನೆಲೆಯಿರುವ ಶಾರ್ಜೀಲ್ ಉಸ್ಮಾನಿ!

ಶಾರ್ಜೀಲ್ ಉಸ್ಮಾನಿ

ಉಸ್ಮಾನಿಯ ವಿವಾದಾತ್ಮಕ ಹೇಳಿಕೆಗಳಿಂದ ಯಾವಾಗಲೂ ಚರ್ಚೆಗೆ ಗ್ರಾಸವಾಗಿರುತ್ತಾನೆ. ದೆಹಲಿಯ ಸಿ.ಎ.ಎ. ವಿರೋಧಿ ಆಂದೋಲನದ ಸಮಯದಲ್ಲಾದ ಹಿಂಸಾಚಾರದ ಘಟನೆಯ ಹಿನ್ನೆಲೆಯಲ್ಲಿ ಅವನ ಬಂಧನವಾಗಿತ್ತು. ಅವನು ಆ ಸಮಯದಲ್ಲಿ ಟ್ವೀಟರ್ ನಲ್ಲಿ ಒಂದು ಛಾಯಾಚಿತ್ರವನ್ನು ಶೇರ್ ಮಾಡಿದ್ದರು ಮತ್ತು ಅದರಲ್ಲಿ ‘ಪುನಃ ಬಾಬರಿಯನ್ನು ಕಟ್ಟುವೆವು’ ಎಂಬ ಬರೆದಿದ್ದನು. ಹಾಗಾಗಿ ಅವನ ಮೇಲೆ ಕಾರ್ಯಾಚರಣೆಯಾಗಿತ್ತು. ಅನಂತರ ಅವನು ಜಾಮೀನಿನಲ್ಲಿ ಬಿಡುಗಡೆಯಾಗಿದ್ದನು. ಕಾರಾಗೃಹದಲ್ಲಿ ನನ್ನನ್ನು ಅಜ್ಮಲ್ ಕಸಾಬನೊಂದಿಗೆ ತುಲನೆ ಮಾಡಲಾಯಿತು ಎಂದು ಉಸ್ಮಾನಿಯು ತನ್ನ ಅನುಭವವನ್ನು ತಿಳಿಸುವಾಗ ಹೇಳಿದನು.