ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಾಗುವ ಕಾರ್ಯಕ್ರಮಗಳನ್ನು ನಿಯಂತ್ರಿಸಲು ಮಾರ್ಗದರ್ಶಕ ಸೂಚನೆಗಳನ್ನು ನೀಡಲಾಗುವುದು! – ಕೇಂದ್ರ ಸರಕಾರ

‘ಒಟಿಟಿ’ ಆಪ್‌ಗಳಲ್ಲಿಇಲ್ಲಿಯವರೆಗೆ ಅನೇಕ ವೆಬ್ ಸಿರೀಸ್‌ಗಳಿಂದ ಹಿಂದೂ ದೇವತೆಗಳು, ರಾಷ್ಟ್ರೀಯ ಪುರುಷರು, ಭಾರತೀಯ ವಾಯುಪಡೆ ಇತ್ಯಾದಿಗಳನ್ನು ಅವಮಾನಿಸಿರುವಾಗ, ಕೇಂದ್ರ ಸರಕಾರವು ಇದನ್ನು ನಿಯಂತ್ರಿಸುವುದು ಅಪೇಕ್ಷಿತವಿತ್ತು ಎಂದು ಹಿಂದೂಗಳಿಗೆ ಅನಿಸುತ್ತದೆ!

ಶ್ರೀ. ಪ್ರಕಾಶ ಜಾವಡೇಕರ

ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಕೆಲವು ವೆಬ್ ಸರಣಿಗಳ ವಿರುದ್ಧ ಹಲವಾರು ದೂರುಗಳು ಬಂದಿವೆ. ಒಟಿಟಿಯಲ್ಲಿ ಪ್ರದರ್ಶಿಸಲಾಗುವ ಚಲನಚಿತ್ರಗಳು ಮತ್ತು ಸರಣಿಗಳು ಡಿಜಿಟಲ್ ಪತ್ರಿಕೆಗಳು, ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳು (ನಿಯಂತ್ರಣ) ಕಾಯ್ದೆ ಅಥವಾ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಇನ್ಸ್‌ಪೆಕ್ಷನ್ (ಸೆನ್ಸಾರ್ ಬೋರ್ಡ್) ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ, ಇವೆಲ್ಲವನ್ನೂ ನಿಯಂತ್ರಿಸಲು ಶೀಘ್ರದಲ್ಲೇ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರರು ಹೇಳಿದರು.