ಕೊರೋನಾ ವಿರುದ್ಧದ ಲಸಿಕೆಯನ್ನು ನೀಡುವಲ್ಲಿ ಕರಿಯರಿಗಿಂತ ಬಿಳಿಯರಿಗೆ ಆದ್ಯತೆ ನೀಡುತ್ತಿರುವ ಅಮೇರಿಕಾ

ಭಾರತದಲ್ಲಿ ಧಾರ್ಮಿಕ ದ್ವೇಷ ಮತ್ತು ತಾರತಮ್ಯ ಮಾಡಲಾಗುತ್ತದೆ ಎಂದು ಆರೋಪಿಸುವ ಅಮೇರಿಕಾದ ಸಂಸ್ಥೆಗಳು, ಸಂಘಟನೆಗಳು ಮತ್ತು ಸರಕಾರ ತಮ್ಮ ದೇಶದ ವರ್ಣದ್ವೇಷದ ಬಗ್ಗೆ ಮಾತ್ರ ತುಟಿ ಪಿಟಕ್ಕೆನ್ನುವುದಿಲ್ಲ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿ ಲಸಿಕೆ ನೀಡುವಲ್ಲಿ ವರ್ಣದ್ವೇಷ ಮಾಡಲಾಗುತ್ತಿದೆ ಎಂದು ಕೇಳಿಬರುತ್ತಿದೆ. ಅಮೇರಿಕಾದಲ್ಲಿ ಕೊರೋನಾ ಸೋಂಕು ತಗಲಿದವರಲ್ಲಿ ಕರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

೧. ಅಮೇರಿಕಾದ ೧೪ ರಾಜ್ಯಗಳಲ್ಲಿ ಸುಮಾರು ಕರಿಯರ ತುಲನೆಯಲ್ಲಿ ಬಿಳಿಯರಿಗೆ ಮೂರನೇ ಎರಡರಷ್ಟು ಹೆಚ್ಚು ಪಟ್ಟಿನಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಅಮೇರಿಕಾದಲ್ಲಿ ಇಂದಿನ ವರೆಗೆ ಶೇ.೪ ರಷ್ಟು ಬಿಳಿಯರಿಗೆ ಕೊರೋನಾ ಲಸಿಕೆ ನೀಡಿಲಾಗಿದೆ ಮತ್ತು ಶೇ. ೧.೯ ಕರಿಯರಿಗೆ ಲಸಿಕೆ ನೀಡಲಾಗಿದೆ.

. ಕೊರೋನಾದಿಂದ ಮೃತಪಟ್ಟವರಲ್ಲಿ ಕರಿಯರು ಸಂಖ್ಯೆಯೂ ಜಾಸ್ತಿಯಿದೆ. ಹಾಗೂ ಕೊರೋನಾ ಪೀಡಿತರಲ್ಲಿಯೂ ಅವರ ಸಂಖ್ಯೆಯು ೪ ಪಟ್ಟು ಹೆಚ್ಚಿದೆ ಎಂದು ಅಮೇರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮಾಹಿತಿ ನೀಡಿದೆ.