ಸಿಂಗೂ ಗಡಿಯಲ್ಲಿ ಸ್ಥಳೀಯ ನಾಗರಿಕರ ಹಾಗೂ ಆಂದೋಲನಕಾರರ ನಡುವೆ ಸಂಘರ್ಷ!

ತಥಾಕಥಿತ ರೈತರಿಂದ ಪೊಲೀಸರ ಮೇಲೆ ಕತ್ತಿಗಳಿಂದ ಆಕ್ರಮಣ!

  •  ಕತ್ತಿಗಳಿಂದ ಆಕ್ರಮಣ ಮಾಡುವವರು ರೈತರಾಗಿರಲು ಸಾಧ್ಯವಿದೆಯೇ?
  • ಕತ್ತಿ, ಲಾಠಿ, ಕೋಲುಗಳನ್ನು ಹಿಡಿದುಕೊಂಡು ಆಂದೋಲನ ಮಾಡುವವರು ಮತ್ತು ಅವಕಾಶ ನೋಡಿ ಪೊಲೀಸರ ಮೇಲೆ ಆಕ್ರಮಣವನ್ನೂ ಮಾಡುವ ಆಂದೋಲನಕಾರರನ್ನು ಸೆರೆಹಿಡಿಯಲು ಸರಕಾರವು ಆದೇಶವನ್ನು ಏಕೆ ನೀಡುತ್ತಿಲ್ಲ?

ಹೊಸ ದೆಹಲಿ – ಇಲ್ಲಿನ ಸಿಂಗೂ ಗಡಿಯಲ್ಲಿ ೨೯ ಜನವರಿಯಂದು ಮಧ್ಯಾಹ್ನ ಆಂದೋಲನಕಾರರು ಮತ್ತು ಹೆದ್ದಾರಿಯನ್ನು ಖಾಲಿ ಮಾಡಲು ಬೇಡಿಕೆ ಸಲ್ಲಿಸುತ್ತಿದ್ದ ಸ್ಥಳೀಯ ನಾಗರಿಕರ ನಡುವಿನ ಸಂಘರ್ಷದಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿಚಾರ್ಜ ಮಾಡಬೇಕಾಯಿತು. ಈ ಘರ್ಷಣೆ ನಡೆದಾಗ ಒರ್ವ ಪೊಲೀಸ ಅಧಿಕಾರಿಯ ಮೇಲೆ ಕತ್ತಿಯಿಂದ ಆಕ್ರಮಣ ಮಾಡಿದುದರಿಂದ ಅಧಿಕಾರಿಯು ಗಾಯಗೊಂಡಿದ್ದಾರೆ. ಪೊಲೀಸರು ಆಕ್ರಮಣಕಾರರನ್ನು ಬಂಧಿಸಿದ್ದಾರೆ. ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ನಂತರ ದೆಹಲಿ ಮತ್ತು ಉತ್ತರಪ್ರದೇಶ ರಾಜ್ಯ ಪೊಲೀಸರು ದೆಹಲಿಯ ಗಡಿಯಲ್ಲಿ ಆಂದೋಲನ ನಡೆಸುತ್ತಿದ್ದ ರೈತರನ್ನು ಚದುರಿಸಲು ಪ್ರಯತ್ನನಿರತರಾಗಿದ್ದಾರೆ. ಗಡಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಗಿಸಲಾಗಿದೆ.

ಸ್ಥಳೀಯ ನಾಗರಿಕರು ಆಂದೋಲನ ಮಾಡುತ್ತಿರುವ ರೈತರ ವಿರುದ್ಧ ಆಂದೋಲನ ಮಾಡುವಾಗ, ‘ತಿರಂಗಾ ಕಾ ಅಪಮಾನ ನಹಿ ಸಹೆಗಾ ಹಿಂದೂಸ್ಥಾನ’ನ ಘೋಷಣೆ ನೀಡಿ ಹೆದ್ದಾರಿಯನ್ನು ಖಾಲಿ ಮಾಡುವಂತೆ ಬೇಡಿಕೆ ಸಲ್ಲಿಸಿದರು. ಎರಡೂ ಬದಿಗಳಿಂದ ಆಂದೋಲನ ನಡೆಯುತ್ತಿರುವಾಗ ಅಕಸ್ಮಾತ್ ಅದು ವಾದದಕ್ಕೆ ತಿರುಗಿತು. ವಾದವು ವಿಕೋಪಕ್ಕೆ ಹೋದಾಗ ಎರಡೂ ಸಮೂಹಗಳಿಂದ ಕಲ್ಲುತೂರಾಟ ಪ್ರಾರಂಭವಾಯಿತು. ಆಂದೋಲನಕಾರರು ಹಿಂಸೆಗಿಳಿದಾಗ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ ಎಂದು ಗಮನಕ್ಕೆ ಬರುತ್ತಲೇ ಪೊಲೀಸರು ಲಾಠಿಚಾರ್ಜ ಮಾಡುತ್ತಾ ಆಶ್ರುವಾಯು ಸಿಡಿಸಿದರು. ಜನಸಮೂಹವನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾಗ ಆಂದೋಲನಕಾರ ರೈತರು ಪೊಲೀಸರ ಮೇಲೆ ಆಕ್ರಮಣ ನಡೆಸಿದರು.