ಧರ್ಮನಿರಪೇಕ್ಷ (ನಿಧರ್ಮಿ) ಅಲ್ಲ, ಪ್ರಾಚೀನ ಧರ್ಮಾಧಿಷ್ಠಿತ ಭಾರತವೇ ಹೆಚ್ಚು ವಿಕಸಿತವಾಗಿತ್ತು !

ಇಂದು ಯಾವುದೇ ಸಾಮಾಜಿಕ ಕಾರ್ಯದ ವಿಷಯದಲ್ಲಿ ಕೇವಲ ಧರ್ಮ ಈ ಪದವನ್ನು ಉಚ್ಚರಿಸಿದರೂ ತಮ್ಮನ್ನು ‘ಪ್ರಗತಿಪರರು ಎಂದು ಹೇಳುತ್ತಿರುವ ಈ (ತಥಾಕಥಿತ ಆಧುನಿಕವಾದಿ) ಹೆಸರಿನ ಹೊಸ ಪಂಗಡದವರು ‘ಭಾರತದಲ್ಲಿ ಧರ್ಮನಿರಪೇಕ್ಷತೆ (ಜಾತ್ಯತೀತತೆ) ಇದೆ, ಎಂದು ಹೇಳುತ್ತಾ ಸಮಾಜ ಮತ್ತು ರಾಜಕಾರಣದ ವಿಷಯದಲ್ಲಿ ಧರ್ಮವನ್ನು ಅಸ್ಪೃಶ್ಯವೆಂದು ನಿರ್ಧರಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಸನಾತನ ಧರ್ಮವು ನೀಡಿರುವ ನೀತಿನಿಯಮಕ್ಕನುಸಾರ ರಾಜ್ಯವ್ಯವಸ್ಥೆ ನಡೆಯುತ್ತಿತ್ತು ಹಾಗೂ ಅದರಿಂದ ಸಮಾಜದ ಉತ್ಕರ್ಷತವನ್ನು ಸಹ ಸಾಧಿಸಲಾಗುತ್ತಿತ್ತು. ಸಾಮ್ಯವಾದಿಗಳು ಇದನ್ನು ಅಡಗಿಸಿಟ್ಟು ಪಠ್ಯಪುಸ್ತಕದಲ್ಲಿ ತುರುಕಿಸಿದ ಸುಳ್ಳು ಇತಿಹಾಸವು ಈಗ ಬೆಳಕಿಗೆ ಬರುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಪಾಶ್ಚಾತ್ಯ ಇತಿಹಾಸಕಾರರೆ ‘ಭಾರತಕ್ಕೆ ಆಂಗ್ಲರು ಬರುವ ಮೊದಲು, ಜಾತ್ಯತೀತ ಪ್ರಜಾಪ್ರಭುತ್ವ ಇರಲಿಲ್ಲ ಹಾಗೂ ಭಾರತೀಯ ಸಮಾಜವು ಸನಾತನ ಧರ್ಮಕ್ಕನುಸಾರ ಆಚರಣೆ ಮಾಡುತ್ತಿದ್ದ ಕಾರಣ ಭಾರತವು ಜಾಗತಿಕ ಸ್ತರದಲ್ಲಿ ಉಚ್ಚ ಸ್ಥಾನದಲ್ಲಿತ್ತು, ಎಂದು ಸಿದ್ಧಪಡಿಸಿದ್ದಾರೆ. ಎಂಗಸ್ ಮೆಡಿಸನ್ ಎಂಬ ಅರ್ಥಶಾಸ್ತ್ರ ಇಲಾಖೆಯ ಇತಿಹಾಸಕಾರರು ೨೦೦೧ ರಲ್ಲಿ ಪ್ರಕಾಶನಗೊಳಿಸಿದ ‘ವರ್ಲ್ಡ್ ಇಕಾನಾಮಿ : ಎ ಮಿಲೇನಿಯಲ್ ಪರ್ಸ್ಪೆಕ್ಟಿವ್ ಈ ಪುಸ್ತಕದಲ್ಲಿ ‘ಕ್ರಿ. ಶ. ಮೊದಲ ಶತಮಾನದಲ್ಲಿ (೧ ನೆ ಇಸವಿಯಲ್ಲಿ) ಭಾರತದ ದೇಶದಾದ್ಯಂತದ ಒಟ್ಟು ಉತ್ಪಾದನೆ (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್-ಜಿಡಿಪಿ) ಜಗತ್ತಿನ ಶೇ. ೩೪ ರಷ್ಟಿತ್ತು ಮತ್ತು ಅದು ಜಗತ್ತಿನ ಮೊದಲ ಕ್ರಮಾಂಕದಲ್ಲಿತ್ತು, ಹೀಗೆ ಆಳವಾದ ಅಭ್ಯಾಸವನ್ನು ಮಂಡಿಸಿದ್ದಾರೆ.

ಭಾರತವೆಂದರೆ ಒಂದು ದೇವಾಲಯ

‘ಭಾರತದ ಹೆಸರನ್ನು ಉಚ್ಚರಿಸುವಾಗಲೆ ಸಂಪೂರ್ಣ ಜಗತ್ತು ತಲೆಬಾಗುತ್ತಿತ್ತು; ಏಕೆಂದರೆ ಭಾರತವೆಂದರೆ ಒಂದು ದೇವಾಲಯವಾಗಿದೆ. – ಶ್ರೀಮದ್‌ನಿರಂಜನ ಪ್ರಣವ ಸ್ವರೂಪಿ ಅಭಿನವ ಬುದೀಶ್ವರ ಸ್ವಾಮಿ, ಹೊಸಹಳ್ಳಿಯ ಬುದೀಶ್ವರ ಸಂಸ್ಥಾನ ಮಠ, ಕರ್ನಾಟಕ.