ಮ. ಗಾಂಧಿಯವರ ತಪ್ಪಿನಿಂದ ಭಾರತ ವಿಭಜನೆಯಾಯಿತು !

ಮಧ್ಯಪ್ರದೇಶ ವಿಧಾನಸಭೆಯ ಹಂಗಾಮಿ ಅಧ್ಯಕ್ಷ ರಾಮೇಶ್ವರ ಶರ್ಮಾ ಅವರ ಹೇಳಿಕೆ

  • ಇದು ಇತಿಹಾಸವೇ ಆಗಿದೆ; ಆದರೆ ಭವಿಷ್ಯದಲ್ಲಿ ಭಾರತದ ವಿಭಜನೆಯಾಗದಂತೆ ಆಡಳಿತಗಾರರು ಏನು ಮಾಡಲಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು !
  • ದೇಶ ವಿಭಜನೆಯಾಗದಂತೆ ತಡೆಯಲು ಸರಕಾರ ಸಮಾನ ನಾಗರಿಕ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು, ಮತಾಂತರ ವಿರೋಧಿ ಕಾನೂನು, ಗೋಹತ್ಯೆ ವಿರೋಧಿ ಕಾನೂನು, ಲವ್ ಜಿಹಾದ್ ವಿರೋಧಿ ಕಾನೂನುಗಳನ್ನು ಜಾರಿಗೆ ತರಬೇಕು ಜೊತೆಗೆ ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ರಾಷ್ಟ್ರ ದ್ರೋಹಿ ಘಟಕಗಳನ್ನು ನಿಷೇಧಿಸಬೇಕು !

ಭೋಪಾಲ್ (ಮಧ್ಯಪ್ರದೇಶ) – ಹೆಸರಿನಿಂದ ತಪ್ಪು ಕಲ್ಪನೆಗಳು ಸಾಬೀತಾಗುತ್ತದೆ. ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಕೆಲಸ ಮತ್ತು ವ್ಯವಹಾರ ಮೊಹಮ್ಮದ್ ಅಲಿ ಜಿನ್ನಾ ಅವರಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಜಿನ್ನಾ ಮೊದಲು ದೇಶವನ್ನು ವಿಭಜಿಸಿದರು. ೧೯೪೭ ರಲ್ಲಿ ಬಾಪುವಿನಿಂದ (ಗಾಂಧಿಯವರಿಂದ) ತಪ್ಪು ಆಯಿತು ಮತ್ತು ದೇಶದ ಎರಡು ಭಾಗಗಳಾಯಿತು.

ಅದನ್ನೇ ಸಿಂಗ್ ಮತ್ತೆ ಮಾಡುತ್ತಿದ್ದಾರೆ ಎಂದು ಮಧ್ಯಪ್ರದೇಶ ವಿಧಾನಸಭೆಯ ಹಂಗಾಮಿ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾರವರು ಗಾಂಧಿನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.