‘ಸನಾತನ ಪಂಚಾಂಗ’ ಆಪ್ ಇದು ಅತ್ಯುತ್ತಮ ಆಪ್ – ಖ್ಯಾತ ಚಿತ್ರನಟ ಜಗ್ಗೇಶ

ಬೆಂಗಳೂರು – ‘ಸನಾತನ ಪಂಚಾಂಗ’ ಆಪ್ ಇದು ಅತ್ಯತ್ತಮ ಆಪ್ ಆಗಿದೆ, ಎಂದು ಖ್ಯಾತ ಚಿತ್ರನಟ ಜಗ್ಗೇಶ್‌ರವರು ಅಭಿಪ್ರಾಯ ವ್ಯಕ್ತಪಡಿಸಿದರು, ‘ಸನಾತನ ಪಂಚಾಂಗ ೨೦೨೧’ ಈ ಆಪ್ ಅನ್ನು ಧರ್ಮಪ್ರೇಮಿಗಳು ಟ್ವಿಟರ್‌ನ ಮಾಧ್ಯಮದಿಂದ ಪ್ರಸಾರ ಮಾಡಿದ್ದರು. ಇದಕ್ಕೆ ಅವರು ಈ ಟ್ವೀಟ್ ಮಾಡಿದ್ದಾರೆ.

೧. ನಟ ಜಗ್ಗೇಶ ಅವರು ತಮ್ಮ ಟ್ವೀಟ್‌ನಲ್ಲಿ, “ನಮ್ಮ ಸಂಸ್ಕೃತಿ, ದೇವತೆ, ಗುರು, ಆಚಾರ್ಯ, ಸನಾತನ ಧರ್ಮ, ನಕ್ಷತ್ರ, ಹಬ್ಬ-ಹರಿದಿನ ಇವುಗಳ ಬಗ್ಗೆ ಉತ್ತಮ ಮಾಹಿತಿ ಈ ಆಪ್‌ನಲ್ಲಿ ಸಿಗುತ್ತದೆ, ಇದರ ಉಪಯೋಗದಿಂದ ಪಾಶ್ಚಾತ್ಯರ ಅಂಧಾನುಕರಣೆಯಿಂದ ನಮ್ಮ ಶುದ್ಧ ಆಚರಣೆಯನ್ನು ಮರೆತವರಿಗೆ ಹೆಮ್ಮೆಯಿಂದ ನಮ್ಮತನದ ಅರಿವು ಬರುತ್ತದೆ”, ಎಂದಿದ್ದಾರೆ.

೨. ವೈಶಿಷ್ಟ್ಯವೆಂದರೆ ಜಗ್ಗೇಶ್‌ರವರು ತಾವು ಸ್ವತಃ ಈ ಆಪ್ ಅನ್ನು ೫ ವರ್ಷಗಳಿಂದ ಉಪಯೋಗಿಸುತ್ತಿರುವುದಾಗಿ ತಿಳಿಸುತ್ತಾ ಇನ್ನೊಂದು ಟ್ವೀಟ್ ಮಾಡಿ ಅವರು ತಮ್ಮ ಸಂಚಾರವಾಣಿಯಲ್ಲಿರುವ ‘ಸನಾತನ ಪಂಚಾಂಗ ಆಪ್’ನ ಸ್ಕ್ರೀನ್‌ಅನ್ನು ಶೇರ್ ಮಾಡಿದ್ದಾರೆ. ಅವರ ಈ ವಿಶೇಷ ಟ್ವೀಟ್‌ಗೆ, ೧,೨೦೦ ಲೈಕ್‌ಗಳು ಸಿಕ್ಕಿವೆ ಮತ್ತು ಕೆಲವು ಧರ್ಮಪ್ರೇಮಿಗಳು ತಾವೂ ಈ ಆಪ್‌ನ ಡೌನಲೋಡ್ ಮಾಡುವುದಾಗಿ ವ್ಯಕ್ತಪಡಿಸಿದರೆ ಕೆಲವರು ಈ ಪಂಚಾಂಗದ ಮುದ್ರಿತ ಪ್ರತಿಯ ಬೇಡಿಕೆಯನ್ನೂ ಸಹ ಮಾಡಿದ್ದಾರೆ.

ಈ ಟ್ವೀಟ್ ಗೆ ೬೦ ರಿಟ್ವೀಟ್‌ಗಳು, ೧೦೫ ಲೈಕ್‌ಗಳು, ಹಾಗೆಯೇ ೫ ಜನರು ತಾವೂ ಈ ಆಪ್‌ನ ಬಳಕೆ ಮಾಡುತ್ತಿರುವುದಾಗಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

‘ಸನಾತನ ಪಂಚಾಂಗ 2021’ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್ : https://sanatanpanchang.com/download-apps/