ಕೊರೋನಾ ಸಂಟಕದಿಂದಾಗಿ ಜಗತ್ತಿನಾದ್ಯಂತ ಆಯುರ್ವೇದ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿದೆ ! – ಪ್ರಧಾನಿ ಮೋದಿ

ಹಾಗಿದ್ದರೂ, ಭಾರತದಲ್ಲಿ ಆಯುರ್ವೇದದ ಮೂಲಕ ಕೊರೋನದ ಮೇಲೆ ಅಧಿಕೃತವಾಗಿ ಔಷಧೋಪಚಾರ ಮಾಡಲು ಕೇಂದ್ರ ಸರ್ಕಾರ ಇನ್ನೂ ಅವಕಾಶ ನೀಡಿಲ್ಲ. ಈ ಕಾರಣದಿಂದಾಗಿ, ಕೊರೋನಾ ಪೀಡಿತರಿಗೆ ಆಯುರ್ವೇದದ ಮೂಲಕ ಚಿಕಿತ್ಸೆ ಪಡೆಯಲು ಇಚ್ಛೆ ಇದ್ದರೂ, ಅವರು ಅದನ್ನು ಮಾಡಲು ಸಾಧ್ಯವಿಲ್ಲ ಅಥವಾ ಸರಕಾರ ಅದನ್ನು ಮಾಡುತ್ತಿಲ್ಲ, ಇದು ವಸ್ತುಸ್ಥಿತಿಯಾಗಿದೆ !

ನವ ದೆಹಲಿ – ಕೊರೋನಾ ಸಂಟಕದ ಸಮಯದಲ್ಲಿ, ಅದರಿಂದ ಪಾರಾಗಲು ಪರಿಣಾಮಕಾರಿ ಪರ್ಯಾಯಗಳು ಲಭ್ಯವಿಲ್ಲದಿದ್ದಾಗ, ದೇಶದಾದ್ಯಂತ ಮನೆಮನೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಹಾಲು, ಕಶಾಯ ಇತ್ಯಾದಿ ಪರ್ಯಾಯಗಳು ಉಪಯುಕ್ತವಾದವು. ಅದರ ಹೊರತಾಗಿ, ಇಡೀ ದೇಶದಲ್ಲಿ ಆಯುರ್ವೇದ ಉತ್ಪನ್ನಗಳ ಬೇಡಿಕೆಯೂ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆಯುರ್ವೇದ ಉತ್ಪನ್ನಗಳ ರಫ್ತು ಒಂದೂವರೆ ಪಟ್ಟು ಹೆಚ್ಚಾಗಿದೆ.

ಮಸಾಲೆಗಳ ರಫ್ತು ಕೂಡ ಹೆಚ್ಚಾಗಿದೆ. ಇಷ್ಟು ದೊಡ್ಡ ಜನಸಂಖ್ಯೆ ಇರುವ ದೇಶದಲ್ಲಿ, ಕೊರೋನಾ ಸಂಕಟದ ನಡುವೆಯೂ ಪರಿಸ್ಥಿತಿ ಉತ್ತಮವಾಗಿದೆ ಎಂದರೆ ಅದಕ್ಕೆ ನಮ್ಮ ಪರಂಪರೆಯು ದೊಡ್ಡ ಕೊಡುಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ ೧೩ ರಂದು ೫ ನೇ ಆಯುರ್ವೇದ ದಿನಾಚರಣೆಯ ಸಂದರ್ಭದಲ್ಲಿ ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು. ಈ ಸಮಯದಲ್ಲಿ ಅವರು ಭಾರತ ಸೇರಿದಂತೆ ಇಡೀ ಜಗತ್ತಿಗೆ ಉತ್ತಮ ಆರೋಗ್ಯ ಸಿಗಲೆಂದು ಧನ್ವಂತರಿ ಸುಳಾದಿ ಪ್ರಾರ್ಥಿಸಿದರು. (ಧನ್ವಂತರಿ ದೇವತೆಯ ಅನುಗ್ರಹವನ್ನು ಪಡೆಯಲು, ಪ್ರತಿಯೊಬ್ಬ ವ್ಯಕ್ತಿಯು ಆಚಾರಧರ್ಮಗಳ ಪಾಲನೆ ಹಾಗೂ ಸಾಧನೆ ಮಾಡಬೇಕು. ಅಲ್ಲದೆ, ಸ್ವಯಂ-ಶಿಸ್ತು ಪಾಲಿಸುತ್ತಾ ವ್ಯಾಯಾಮ ಮತ್ತು ಆಹಾರದ ನಿಯಮಗಳನ್ನು ಆವಶ್ಯಕ. ಇವೆಲ್ಲವನ್ನು ಮಾಡಿದರೆ ಮಾತ್ರ, ಅನಾರೋಗ್ಯ ಬರುವ ಸಾಧ್ಯತೆ ಕಡಿಮೆಯಗುತ್ತದೆ, ಇಷ್ಟು ಮಾಡಿಯೂ ಆದಲ್ಲಿ ಆಯುರ್ವೇದದ ಔಷಧಿಗಳನ್ನು ಉಪಯೋಗಿಸಬೇಕು – ಸಂಪಾದಕರ)