ಬಿಜೆಪಿಯ ಶಾಸಕರಿಗೆ ಗಾಯ
ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆಯ ಸ್ಥಿತಿ ಗಮನಿಸಿದರೆ ಇಂತಹ ದಾಳಿಗಳು ನಿಲ್ಲುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಈವರೆಗೆ ಏನನ್ನೂ ಮಾಡಿಲ್ಲ ಎಂಬುವುದನ್ನು ಜನರು ನೋಡುತ್ತಿದ್ದಾರೆ !
ಕೋಲ್ಕತಾ (ಬಂಗಾಳ) – ಬಂಗಾಳ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರ ವಾಹನಗಳ ಮೇಲೆ ದೊಡ್ಡ ಜನಸಮೂಹ ಕಲ್ಲು ತೂರಾಟ ನಡೆಸಿತು. ಕಪ್ಪು ಧ್ವಜಗಳನ್ನು ಸಹ ಪ್ರದರ್ಶಿಸಲಾಯಿತು. ಘೋಷ್ ಅವರು ಕಲ್ಲು ತೂರಾಟದಿಂದ ಪಾರಾದರು. ಅವರು ಯಾವ ವಾಹನದಲ್ಲಿ ಕುಳಿತಿದ್ದರೋ ಅದು ಮುಂದೆ ಹೋದರೆ, ಇತರ ವಾಹನಗಳ ಮೇಲೆ ದಾಳಿ ನಡೆಸಲಾಯಿತು. ಇದರಲ್ಲಿ ಬಿಜೆಪಿ ಶಾಸಕ ವಿಲ್ಸನ್ ಚಂಪಮರಿಯ ಕಾರಿಗೆ ತೀವ್ರ ಹಾನಿಯಾಗಿದ್ದು ಅವರು ಗಾಯಗೊಂಡರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಘೋಷ್ ದೂಷಿಸಿದ್ದಾರೆ. ಈ ಘಟನೆ ಅಲಿದ್ವಾರಪುರ ಜಿಲ್ಲೆಯಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ, ಘೋಷ್ ಇವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಆರು ತಿಂಗಳಲ್ಲಿ ಸುಧಾರಣೆಯಾಗದಿದ್ದರೆ ಅವರನ್ನು ಶವಾಗಾರಕ್ಕೆ ಕಳುಹಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು. ಅದರ ನಂತರ, ಘೋಷ್ ಅವರನ್ನು ಈಗ ಗುರಿಯಾಗಿಸಲಾಗಿದೆ.