ಗೋವಿನ ಸೆಗಣಿಯಿಂದ ತಯಾರಿಸಿದ ಚಿಪ್ ಸಂಚಾರವಾಣಿಯ ವಿಕಿರಣವನ್ನು ತಡೆಯಬಲ್ಲದು ! – ಕಾಮಧೇನು ಆಯೋಗದ ಹೇಳಿಕೆ

ಕೇಂದ್ರ ಸರಕಾರವು ಇಂತಹ ಸಂಶೋಧನೆಗಳನ್ನು ಮಾಡುವ ಅವಶ್ಯಕತೆಯಿದೆ ! ಅಲ್ಲದೇ, ಗೋವಿನ ಸೆಗಣಿ ಸಿಗಬೇಕಾದರೆ ಮೊದಲು ದೇಶದಲ್ಲಿ ಗೋಹತ್ಯೆಯನ್ನು ತಡೆಗಟ್ಟುವುದು ಬಹಳ ಮುಖ್ಯ !

ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯಿ ಕಠಿರಿಯಾ

ನವ ದೆಹಲಿ – ಗೋವಿನ ಸೆಗಣಿಯಿಂದ ಆಂಟಿ ರೇಡಿಯೇಶನ್ (ವಿಕಿರಣೋತ್ಸರ್ಗವಿರೋಧಿ) ಚಿಪ್ ತಯಾರಿಸಲಾಗಿದೆ ಎಂದು ‘ಕಾಮಧೇನು ಆಯೋಗ’ವು ಹೇಳಿದೆ. ಈ ಚಿಪ್‌ಅನ್ನು ಸಂಚಾರಿವಾಣಿಗಾಗಿ ಬಳಸಬಹುದು. ಈ ಚಿಪ್‌ಗೆ ‘ಗೌಸತ್ವ ಕವಚ’ ಎಂಬುದು ಹೆಸರಿಸಲಾಗಿದೆ. ಇದನ್ನು ಗುಜರಾತನ ರಾಜಕೋಟನ ‘ಶ್ರೀಜಿ ಗೋಶಾಲೆ’ಯಲ್ಲಿ ತಯಾರಿಸಲಾಗಿದೆ.
ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯಿ ಕಠಿರಿಯಾ ಇವರು ಈ ಬಗ್ಗೆ ಮಾಹಿತಿ ನೀಡುತ್ತಾ ‘ಗೋವಿನ ಸೆಗಣಿ ಎಲ್ಲರನ್ನೂ ಸುರಕ್ಷಿತವಾಗಿರಿಸುತ್ತದೆ. ಗೋವಿನ ಸಗಣಿಯು ‘ರೇಡಿಯೇಶನ್’ವಿರೋಧಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕಿರಣೋತ್ಸರ್ಗವನ್ನು ಕಡಿಮೆ ಮಾಡಲು ಗೋವಿನ ಸಗಣಿಯಿಂದ ತಯಾರಿಸಿದ ಆಂಟಿ ರೇಡಿಯೇಶನ್ ಚಿಪ್‌ಅನ್ನು ಸಂಚಾರವಾಣಿಗಳಲ್ಲಿ ಸಹ ಬಳಸಬಹುದು. ಇದು ರೋಗಗಳ ವಿರುದ್ಧ ಒಂದು ರೀತಿಯ ರಕ್ಷಣಾತ್ಮಕ ಕವಚವಾಗಿದೆ’, ಎಂದರು.