‘ತನಿಷ್ಕ ಜ್ಯುವೆಲರಿ’ಯ ‘ಲವ್ ಜಿಹಾದ್’ನ ಜಾಹೀರಾತನ್ನು ಹಿಂಪಡೆದ ‘ಟಾಟಾ ಗ್ರೂಪ್’

ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ !

  • ಹಿಂದೂಗಳು ಧರ್ಮಕ್ಕಾಗಿ ಇದೇರೀತಿ ಸಂಘಟನೆಯನ್ನು ತೋರಿಸಿದರೆ, ದೇಶ ಮತ್ತು ವಿದೇಶಗಳಲ್ಲಿ ಸಹ ಯಾರೂ ಹಿಂದೂ ಧರ್ಮ, ದೇವತೆ ಇವರೆನ್ನೆಲ್ಲ ಅಪಮಾನಿಸುವ ಧೈರ್ಯವನ್ನು ತೋರಿಸುವುದಿಲ್ಲ !

  • ‘ಟಾಟಾ ಗ್ರೂಪ್’ ಆರ್ಥಿಕ ನಷ್ಟದ ಸಾಧ್ಯತೆಯಿರುವ ವಿಚಾರದಿಂದ ಜಾಹೀರಾತನ್ನು ಹಿಂತೆಗೆದುಕೊಂಡರೂ, ಹಿಂದೂಗಳು ‘ತನಿಷ್ಕ ಜ್ಯುವೆಲರಿ’ಯ ಆಭರಣಗಳನ್ನು ಖರೀದಿಸಲಾರರು, ಎಂಬುದು ಸಹ ಅಷ್ಟೇ ನಿಜವಾಗಿದೆ !

ಗುಜರಾತ್‌ನ ತನೀಶ್ ಶೋ ರೂಂನಿಂದ ‘ಲವ್ ಜಿಹಾದಿ’ ಜಾಹೀರಾತಿಗಾಗಿ ಹಿಂದೂ ಸಮಾಜಕ್ಕೆ ಕ್ಷಮೆಯಾಚಿಸುತ್ತಿದ್ದೇವೆ !

ನವ ದೆಹಲಿ – ‘ಟಾಟಾ ಗ್ರೂಪ್’ನ ಒಡೆತನದ ತನಿಷ್ಕ ‘ಜ್ಯುವೆಲರಿ ಬ್ರಾಂಡ್’ನ ಜಾಹೀರಾತಿನಿಂದ ‘ಲವ್ ಜಿಹಾದ್’ಅನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಿಂದ ವಿರೋಧವಾದ ನಂತರ ಕಂಪನಿಯು ತನ್ನ ಜಾಹೀರಾತನ್ನು ಹಿಂತೆಗೆದುಕೊಂಡಿದೆ. ಅಕ್ಟೋಬರ ೯ ರಂದು ಈ ಮಳಿಗೆಯ ಜಾಹೀರಾತು ಪ್ರಸಾರವಾಗಿತ್ತು. ಇದರಲ್ಲಿ ಓರ್ವ ಗರ್ಭಿಣಿ ಹಿಂದೂ ಮಹಿಳೆಯ ಸೀಮಂತ ಕಾರ್ಯಕ್ರಮವಿರುವಂತೆ ತೋರಿಸಲಾಗಿತ್ತು. ಈ ಹಿಂದೂ ಮಹಿಳೆಯು ಓರ್ವ ಮುಸಲ್ಮಾನನ ಪತ್ನಿ ಎಂದು ತೋರಿಸಲಾಗಿತ್ತು. ಅದಕ್ಕೆ ಹಿಂದೂಗಳು ಆಕ್ಷೇಪಿಸುತ್ತಾ ಟ್ವಿಟರ್‌ನಲ್ಲಿ ‘#BoycottTanishq’ ಎಂದು ಹೆಸರಿನ ‘ಹ್ಯಾಶ್‌ಟ್ಯಾಗ್’ ‘ಟ್ರೆಂಡ್’ ನಿಂದ ವಿರೋಧಿಸಿತ್ತು. ನೇರವಾಗಿ ಕಂಪನಿಯ ಉತ್ಪನ್ನಗಳನ್ನು ಬಹಿಷ್ಕರಿಸುವ ಬೇಡಿಕೆ ಬರುತ್ತಿದ್ದ ಹಾಗೆ ‘ಟಾಟಾ ಗ್ರೂಪ್’ನಿಂದ ಜಾಹೀರಾತನ್ನು ಹಿಂಪಡೆಯಲಾಯಿತು. ಕಂಪನಿಯ ‘ಯು-ಟ್ಯೂಬ್’ ಚಾನಲ್‌ನಲ್ಲಿ ಈ ಜಾಹೀರಾತು ಕಾಣಿಸುತ್ತಿಲ್ಲ.